newsfirstkannada.com

ಹೈವೋಲ್ಟೇಜ್​ ಪಂದ್ಯದಲ್ಲಿ ಸ್ಟಾರ್​ವಾರ್​​​​​​​​.. ಕೊಹ್ಲಿ, ರೋಹಿತ್ ಯಾರ ಬೌಲಿಂಗ್​​ನಲ್ಲಿ ಎಚ್ಚರದಿಂದ ಆಡಬೇಕು..?

Share :

19-11-2023

    ಸ್ಟಾರ್ ವಾರ್ ನೋಡಲು ಕಾದುಕುಳಿತಿದೆ ಇಡೀ ವಿಶ್ವ

    ಪ್ಲೇಯರ್ಸ್​ ಬ್ಯಾಟಲ್​​​​ನಲ್ಲಿ ಗೆಲ್ಲೋದು ಯಾವ ಆಟಗಾರ?

    ಪ್ರತಿಷ್ಠಿತ ಪಂದ್ಯದಲ್ಲಿ ಯಾರಿಗೆ ಯಾರ್​ ಆಗ್ತಾರೆ ಥ್ರೆಟ್​..?

ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಇಂದಿನ ಪಂದ್ಯ ಗೆಲ್ಲೋಕೆ ಇಂಡೋ-ಆಸಿಸ್​​ ತಂಡಗಳು ಭರ್ಜರಿ ತಯಾರಿ ಕೂಡ ನಡೆಸಿಕೊಂಡಿವೆ. ಎರಡು ದೇಶಗಳ ನಡುವಿನ ಪ್ರತಿಷ್ಟೆಯ ಇಂದಿನ ಕದನದಲ್ಲಿ ಬ್ಯಾಟ್ ಬಾಲ್​ ನಡುವಿನ ಸ್ಟಾರ್​ ವಾರ್​​​​​​​​​​​​​​ ಜೋರಾಗಿಯೇ ಇದೆ.

ಏಕದಿನ ವಿಶ್ವಕಪ್​ ಫೈನಲ್​​ಗೆ ಕೌಂಟ್​ಡೌನ್..​!

ವಿಶ್ವ ಕ್ರಿಕೆಟ್​ನ ಮದಗಜಗಳ ಕದನ ಅಂದ್ರೆನೇ ಹಾಗೆ.. ಆ ಪಂದ್ಯ ಹೈವೋಲ್ಟೇಜ್​​​​​ನಿಂದ ಕೂಡಿರುತ್ತೆ. ಮೈದಾನದಲ್ಲಿ ಜಿದ್ದಾಜಿದ್ದಿ ಹೋರಾಟ, ಸ್ಲೆಡ್ಜಿಂಗ್​ ಜೊತೆಗೆ ಚೆಂಡು ದಾಂಡಿನ ಹೋರಾಟವೇ ನಡೆಯುತ್ತೆ. ಒಂದೊಂದು ಬಾಲ್​, ಒಂದೊಂದು ರನ್ ರೋಚಕತೆ ಹುಟ್ಟಿಸುತ್ತೆ. ಬ್ಯಾಟ್ಸ್​ಮನ್​ಗಳು, ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸಲು ಮುಂದಾದ್ರೆ, ಬೌಲರ್​ಗಳು, ಬ್ಯಾಟ್ಸ್​ಮನ್​ಗಳ ಮೂಗುದಾರ ಹಾಕಲು ಇನ್ನಿಲ್ಲದ ಕಸರತ್ತು ನಡೆಸ್ತಾರೆ. ಹೀಗಾಗಿ ಚೆಂಡು-ದಾಂಡಿನ ಸ್ಟಾರ್ ವಾರ್ ತೀವ್ರ ಕುತೂಹಲ ಮೂಡಿಸಿದೆ.

ರೋಹಿತ್ ಶರ್ಮಾ V/S ಮಿಚೆಲ್ ಸ್ಟಾರ್ಕ್​..!

ಇವತ್ತಿನ ಹೈವೋಲ್ಟೇಜ್​ ಮ್ಯಾಚ್​ ಮೋಸ್ಟ್​ ಕ್ಯೂರಿಯಾಸಿಟಿ ಫೈಟ್​.. ಹಿಟ್​ಮ್ಯಾನ್ ರೋಹಿತ್ ಶರ್ಮಾ ವರ್ಸಸ್ ಮಿಚೆಲ್ ಸ್ಟಾರ್ಕ್ ನಡುವಿನ ವಾರ್​. ಹಿಟ್​ಮ್ಯಾನ್ ರೋಹಿತ್, ತಂಡಕ್ಕೆ ಉತ್ತಮ ಸ್ಟಾರ್ಟ್ ನೀಡೋಕೆ ಪ್ರಯತ್ನ ನಡೆಸಿದ್ರೆ. ಮಿಚೆಲ್ ಸ್ಟಾರ್ಕ್​ ತನ್ನ ಲೆಫ್ಟ್ ಆರ್ಮ್ ಬೌಲಿಂಗ್​ನಿಂದ ತಂಡಕ್ಕೆ ಬ್ರೇಕ್ ನೀಡೋ ವಿಶ್ವಾಸದಲ್ಲಿದ್ದಾರೆ. ಒಡಿಐ ಕರಿಯರ್​ನಲ್ಲಿ 33 ಬಾರಿ ಲೆಫ್ಟ್​ ಹಾರ್ಮ್​ ಪೇಸರ್​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಅಘಾತಕಾರಿ ವಿಚಾರ ಅಂದ್ರೆ, ಈ ಪೈಕಿ 22 ಬಾರಿ ಮೊದಲ 10 ಓವರ್​​​ಗಳಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಪ್ರಸಕ್ತ ವಿಶ್ವಕಪ್​ನಲ್ಲಿ ಆಕ್ರಮಣಕಾರಿ ಆಟವಾಡ್ತಿರುವ ರೋಹಿತ್, ಮಿಚೆಲ್ ಸ್ಟಾರ್ಕ್ ಎದುರು ಎಚ್ಚರಿಕೆ ವಹಿಸಬೇಕಿದೆ.

ವಿರಾಟ್ ಕೊಹ್ಲಿ V/S ಜೋಶ್ ಹೇಜಲ್​ವುಡ್​

ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾ ಆಧಾರಸ್ಥಂಭ.. ಎಂಥಹ ಎಸೆತಗಳನ್ನಾಗಲಿ ಲೀಲಾಜಾಲವಾಗಿ ಬೌಂಡರಿಗೆ ಅಟ್ಟುವಲ್ಲಿ ಎತ್ತಿದ ಕೈ.. ಪ್ರಸಕ್ತ ವಿಶ್ವಕಪ್​ನಲ್ಲಿ ಅಬ್ಬರಿಸುತ್ತಿರುವ ವಿರಾಟ್​ ದಾಹಕ್ಕೆ ಆಸಿಸ್ ವೇಗಿ ಜೋಶ್ ಹೇಜಲ್​ವುಡ್​ ಬ್ರೇಕ್ ಹಾಕುವ ಕನಸಿನಲ್ಲಿದ್ದಾರೆ.. ಇಂದಿನ ಬಿಗ್ ಬ್ಯಾಟಲ್​​ನಲ್ಲಿ ಇವರೇ ಸೆಂಟರ್ ಆಫ್ ಅಟ್ರಾಕ್ಷನ್.. ಯಾಕಂದ್ರೆ ಜೋಶ್​​ ಹೇಜಲ್​ವುಡ್​​ಗೆ 5 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಅದು 88 ಎಸೆತಗಳಲ್ಲಿ.

ಇಷ್ಟೇ ಅಲ್ಲ..! ಲೀಗ್​ ಮ್ಯಾಚ್​ನಲ್ಲೂ ಟೀಮ್ ಇಂಡಿಯಾ ಜೊತೆಗೆ ವಿರಾಟ್​ ಕೊಹ್ಲಿಗೂ ಇದೇ ಜೋಶ್ ಥ್ರೆಟ್ ಆಗಿದ್ದರು. ಇದಿಷ್ಟೇ ಅಲ್ಲ.! ಟೀಮ್ ಇಂಡಿಯಾ ಪರ ಕೊಹ್ಲಿ ಅಬ್ಬರಿಸ್ತಿದ್ರೆ. ಅತ್ತ ಜೋಶ್​​, ನ್ಯೂ ಬಾಲ್​ನಲ್ಲಿ ಸ್ಟನ್ನಿಂಗ್ ಸ್ಪೆಲ್ ಮಾಡ್ತಿದ್ದಾರೆ. ಹೀಗಾಗಿ ಈ ಸ್ಟಾರ್ ಆಟಗಾರರ ಕಾದಾಟ ಪಂದ್ಯಕ್ಕೆ ಮತ್ತಷ್ಟು ರೋಚಕತೆ ನೀಡಲಿದೆ.

ಗ್ಲೆನ್ ಮ್ಯಾಕ್ಸ್​ವೆಲ್ V/S ಕುಲ್​ದೀಪ್ ಯಾದವ್!

ಗ್ಲೆನ್ ಮ್ಯಾಕ್ಸ್​ವೆಲ್ V/S ಕುಲ್​ದೀಪ್.. ಇವತ್ತಿನ ಪಂದ್ಯಕ್ಕೆ ಟ್ವಿಸ್ಟ್​ ನೀಡೋದೇ ಇವರಿಬ್ಬರ ಕಾದಾಟ. ಆಸಿಸ್​​ನ ಸ್ಫೋಟಕ ಬ್ಯಾಟ್ಸ್​ಮನ್ ಆಗಿರುವ ಮ್ಯಾಕ್ಸಿ, ಸಿಂಗಲ್ ಆಗಿಯೇ ಪಂದ್ಯವನ್ನ ಗೆಲ್ಲಿಸಬಲ್ಲರು. ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಬಲ್ಲರು. ಇಂಥಹ ಡೇಂಜರಸ್ ಬ್ಯಾಟರ್​​ಗೆ ಮೂಗುದಾರ ಹಾಕುವಲ್ಲಿ ನಿಪುಣ ಕುಲ್​ದೀಪ್ ಯಾದವ್. ಒಡಿಐನಲ್ಲಿ 3 ಬಾರಿ ಮ್ಯಾಕ್ಸಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಕುಲ್​​ದೀಪ್​, ಲೀಗ್​ ಮ್ಯಾಚ್​​ನಲ್ಲೂ ಪೆವಿಲಿಯನ್ ಹಾದಿ ತೋರಿದ್ದರು. ಕುಲ್​ದೀಪ್ ಯಾದವ್​ ಅಸ್ತ್ರವನ್ನೇ ಸೆಮಿಸ್​​ನಲ್ಲಿ ಪ್ರಯೋಗಿಸಿದ್ದ ಶಂಸಿ, ಮ್ಯಾಕ್ಸಿ ವಿಕೆಟ್ ಪಡೆಯುವಲ್ಲಿ ಸಕ್ಸಸ್​ ಕಂಡಿದ್ದರು. ಹೀಗಾಗಿ ಇವ್ರಿಬ್ಬರ ಫೈಟ್ ಸಾಕಷ್ಟು ಕುತೂಹಲ ಕೆರಳಿಸಿದೆ.

ಸ್ಟೀವ್ ಸ್ಮಿತ್ V/S ರವೀಂದ್ರ ಜಡೇಜಾ..!

ಸ್ಟೀವ್ ಸ್ಮಿತ್, ರವೀಂದ್ರ ಜಡೇಜಾ ಬ್ಯಾಟಲ್.. ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಬ್ಯಾಟಲ್​​​.. ಟೆಸ್ಟ್​ ಚಾಂಪಿಯನ್ ಶಿಪ್​ನಲ್ಲಿ. ಪ್ರಸಕ್ತ ವಿಶ್ವಕಪ್​ನ ಲೀಗ್​ನಲ್ಲಿ ಸ್ಟೀವ್​ ಸ್ಮಿತ್​ಗೆ ಇನ್ನಿಲ್ಲದಂತೆ ಕಾಡಿದ್ದೇ ರವೀಂದ್ರ ಜಡೇಜಾ. ಪ್ರಸಕ್ತ ವರ್ಷವೇ ಬರೋಬ್ಬರಿ 5 ಬಾರಿ ಸ್ಟೀವ್ ಸ್ಮಿತ್ ವಿಕೆಟ್ ಬೇಟೆಯಾಡಿರುವ ಜಡ್ಡು, ಇಂದಿನ ಅಹ್ಮದಬಾದ್​ನಲ್ಲೂ ಸ್ಮಿತ್​​​​​ಗೆ ಕಬ್ಬಿಣದ ಕಡಲೆಯಾಗೋದು ಗ್ಯಾರಂಟಿ.

ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್​ V/S ಮೊಹಮ್ಮದ್ ಶಮಿ

ಡೇವಿಡ್ ವಾರ್ನರ್​ ಮೋಸ್ಟ್ ಡೇಜಂರಸ್ ಬ್ಯಾಟ್ಸ್​​ಮನ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇಂಡಿಯನ್ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಅರಿತಿರುವ ವಾರ್ನರ್​ ಯಾವುದೇ ಕ್ಷಣದಲ್ಲಾದರೂ ಟೀಮ್ ಇಂಡಿಯಾಗೆ ಕಂಟಕವಾಗಬಲ್ಲರು. ಹೀಗಾಗಿ ನಿರಾಸವಾಗಿ ರನ್ ಕಲೆಹಾಕುವ ವಾರ್ನರ್​ಗೆ ಗೋಲ್ಡನ್ ಬಾಲ್​ ರೇಸ್​ನಲ್ಲಿರುವ ಸ್ವಿಂಗ್ ಕಿಂಗ್ ಶಮಿ ಬ್ರೇಕ್ ಹಾಕಬೇಕಿದೆ. ಇನ್​ಫ್ಯಾಕ್ಟ್​_ ಪ್ರಸಕ್ತ ವಿಶ್ವಕಪ್​​ನಲ್ಲಿ 23 ವಿಕೆಟ್ ಉರುಳಿಸಿರುವ ಶಮಿ, ಈ ಪೈಕಿ 8 ಎಡಗೈ ಬ್ಯಾಟ್ಸ್​ಮನ್​​ಗಳಿಗೆ ಪೆವಿಲಿಯನ್ ದಾರಿ ​​​​​​​​​​​​​​​​​​​​​​​​ ತೋರಿಸಿದ್ದಾರೆ.

ಇಂಟ್ರೆಸ್ಟಿಂಗ್ ಅಂದ್ರೆ, ಪ್ರಸಕ್ತ ಮೆಗಾ ಟೂರ್ನಿಯಲ್ಲಿ ಪ್ರತಿ 7 ಎಸೆತಗಳಿಗೊಮ್ಮೆ ಎಡಗೈ ಬ್ಯಾಟರ್​ನ ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಡೇವಿಡ್ ವಾರ್ನರ್ ಜೊತೆಗೆ ಟ್ರಾವಿಸ್ ಹೆಡ್​​​ಗೂ ಶಮಿಯೇ ಮೇನ್ ವೆಪನ್.! ಒಟ್ನಲ್ಲಿ.. ವಿಶ್ವಕಪ್​​​ನ ಈ ಸ್ಟಾರ್ ವಾರ್ ನೋಡಲು ಇಡೀ ವಿಶ್ವವೇ ಕಾದುಕುಳಿತಿದೆ. ಹೀಗಾಗಿ ಈ ಬ್ಯಾಟಲ್​​​​ನಲ್ಲಿ ಯಾರು ಗೆಲ್ತಾರೆ.. ಯಾರು ಸೋಲ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೈವೋಲ್ಟೇಜ್​ ಪಂದ್ಯದಲ್ಲಿ ಸ್ಟಾರ್​ವಾರ್​​​​​​​​.. ಕೊಹ್ಲಿ, ರೋಹಿತ್ ಯಾರ ಬೌಲಿಂಗ್​​ನಲ್ಲಿ ಎಚ್ಚರದಿಂದ ಆಡಬೇಕು..?

https://newsfirstlive.com/wp-content/uploads/2023/08/Kohli-rohit.jpg

Load More