newsfirstkannada.com

World Cup​ ಮ್ಯಾಚ್​ಗಳನ್ನು ಎಷ್ಟು ಕೋಟಿ ಜನ ನೋಡಿದ್ದಾರೆ.. ಈ ಬಗ್ಗೆ BCCI ಕಾರ್ಯದರ್ಶಿ ಏನ್ ಹೇಳಿದ್ರು?

Share :

29-10-2023

    ಭಾರತ-ಪಾಕ್ ಪಂದ್ಯದ ವೀಕ್ಷಣೆ ಮೀರಿಸಿತ್ತು ವಿರಾಟ್ ಬ್ಯಾಟಿಂಗ್​

    ವಿಶ್ವಕಪ್ ಪಂದ್ಯಾವಳಿಗಳನ್ನ ಎಷ್ಟು ಕೋಟಿ ಜನ ನೋಡಿದ್ದಾರೆ?

    ವರ್ಲ್ಡ್​ಕಪ್​ ಪೈನಲ್​ ಪಂದ್ಯ ಎಲ್ಲ ದಾಖಲೆಗಳನ್ನ ಮೀರಿಸುತ್ತಾ?

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್​ ಪಂದ್ಯಾವಳಿಗಳು ಸಾಕಷ್ಟು ವೀಕ್ಷಣೆ ಆಗುತ್ತಿದ್ದು ಅಭಿಮಾನಿಗಳು ಹೆಚ್ಚಿನ ಮಟ್ಟದಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ. ಸ್ಟೇಡಿಯಂನ ಕೌಂಟರ್​ಗಳಲ್ಲಿ ಅಲ್ಲದೇ ಆನ್​ಲೈನ್​ ಮೂಲಕವು ಸಾಕಷ್ಟು ಟಿಕೆಟ್​ಗಳು ಸೇಲ್ ಆಗುತ್ತಿವೆ. ಅಲ್ಲದೇ ಟಿವಿಗಳಲ್ಲಿ ಅತ್ಯಧಿಕ ಜನ ವಿಶ್ವಕಪ್​ ಮ್ಯಾಚ್​ಗಳನ್ನು ನೋಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇದೀಗ ಸಿಕ್ಕಿದೆ.

ಈ ಬಗ್ಗೆ ಎಕ್ಸ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐನ ಕಾರ್ಯದರ್ಶಿ ಜೈ ಶಾ ಅವರು, 2023ರ ವಿಶ್ವಕಪ್​ ಮೊದಲ 18 ಪಂದ್ಯ​ಗಳನ್ನು ಬರೋಬ್ಬರಿ 36.42 ಕೋಟಿ ಜನರು ಟಿವಿಯಲ್ಲಿ ವೀಕ್ಷಣೆ ಮಾಡಿರುವುದು ಹೊಸ ದಾಖಲೆಯಾಗಿದೆ. ನಿಮಿಷಗಳಂತೆ ಶೇಕಡಾ 43 ರಷ್ಟು ಟಿವಿ ವೀಕ್ಷಕರ ಸಂಖ್ಯೆ ಹೆಚ್ಚುತ್ತ ಹೋಗಿದೆ. ಇದು ನಮ್ಮ ಕ್ರೀಡೆಯ ಜನಪ್ರಿಯತೆ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಸಕ್ತಿಗೆ ಸಾಕ್ಷಿಯಾಗಿದೆ ಎಂದು ಪೋಸ್ಟ್​​ನಲ್ಲಿ ಜೈ ಶಾ ತಿಳಿಸಿದ್ದಾರೆ.

ನ್ಯೂಜಿಲೆಂಡ್-ಭಾರತ ನಡುವಿನ ಪಂದ್ಯದ ವೇಳೆ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಅನ್ನು ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಮೊನ್ನೆ ವರದಿಯಾಗಿತ್ತು. ಕಿವೀಸ್​ ವಿರುದ್ಧ ಬ್ಯಾಟಿಂಗ್​ ಮಾಡುವಾಗ ವಿರಾಟ್​ ಕೊಹ್ಲಿ ಸೆಂಚುರಿ ಸಮೀಪಕ್ಕೆ ಹೋದಂಗೆಲ್ಲ ಕ್ಷಣ ಕ್ಷಣಕ್ಕೆ ಟಿವಿ ನೋಡುವರ ಸಂಖ್ಯೆಯ ಗಣನೀಯವಾಗಿ ಹೆಚ್ಚಾಗಿತ್ತು ಎನ್ನಲಾಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಇಂಡಿಯಾ-ಪಾಕ್​ ಪಂದ್ಯವನ್ನು ಆಡುವಾಗ ನೋಡುವ ವೀಕ್ಷಕರಿಗಿಂತ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಅನ್ನು ಅತಿ ಹೆಚ್ಚು ಜನರು ನೋಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

World Cup​ ಮ್ಯಾಚ್​ಗಳನ್ನು ಎಷ್ಟು ಕೋಟಿ ಜನ ನೋಡಿದ್ದಾರೆ.. ಈ ಬಗ್ಗೆ BCCI ಕಾರ್ಯದರ್ಶಿ ಏನ್ ಹೇಳಿದ್ರು?

https://newsfirstlive.com/wp-content/uploads/2023/10/ROHIT_SHARMA_TEAM_1.jpg

Load More