newsfirstkannada.com

×

ವಿಶ್ವಕಪ್​​ ಸೆಮೀಸ್​ಗೆ ನ್ಯೂಜಿಲೆಂಡ್​ ಬಹುತೇಕ ಫಿಕ್ಸ್​​.. ಕೊನೆ ಮ್ಯಾಚ್​​ ಗೆದ್ರೆ ಪಾಕ್​ಗಿದ್ಯಾ ಚಾನ್ಸ್​​?

Share :

Published November 10, 2023 at 6:04am

    ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಮ್ಯಾಚ್​

    ನ್ಯೂಜಿಲೆಂಡ್ ಪಂದ್ಯ ಗೆದ್ದಿದ್ದಕ್ಕೆ ಪಾಕಿಸ್ತಾನ, ಅಫ್ಘಾನ್​ ತಂಡಕ್ಕೆ ಭಾರೀ ನಷ್ಟ

    ಸೆಮಿಫೈನಲ್​ ಪಂದ್ಯಕ್ಕೆ ಹೋಗಬೇಕಾದ್ರೆ ಪಾಕಿಸ್ತಾನ ಏನು ಮಾಡಬೇಕು..?

ಶ್ರೀಲಂಕಾ ವಿರುದ್ಧ ವಿಶ್ವಕಪ್​ ಪಂದ್ಯದಲ್ಲಿ ನ್ಯೂಜಿಲೆಂಡ್ ಟೀಮ್ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಸೆಮಿಫೈನಲ್​ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಕಿವೀಸ್​ ಗೆದ್ದಿದ್ದರಿಂದ ಪಾಕಿಸ್ತಾನ ಮತ್ತು ಅಫ್ಘಾನ್​ ತಂಡಗಳಿಗೆ ಹೆಚ್ಚು ನಷ್ಟವಾಗಿದ್ದು ಬಹುತೇಕ ಸೆಮಿಸ್​ ಹೋಗುವ ಕನಸನ್ನು ಕೈಚೆಲ್ಲಿದಂತೆ ಆಗಿದೆ. ಈ ಎರಡು ತಂಡಗಳು ಕೊನೆ ಪಂದ್ಯದಲ್ಲಿ ಬೃಹತ್​ ರನ್​ಗಳ ಅಂತರದಲ್ಲಿ ಗೆದ್ದರೇ ಮಾತ್ರ ಸೆಮಿಫೈನಲ್​ ಕನಸು ಲೆಕ್ಕಾಚಾರ ಬೇರೆ ಆಗಲಿದೆ. ಇಲ್ಲದಿದ್ದರೇ ಕೇನ್​ ವಿಲಿಯಮ್​​ಸನ್ ತಂಡ ಸೆಮಿಸ್​​ನಲ್ಲಿ ಭಾರತದ ವಿರುದ್ಧ ತೊಡೆ ತಟ್ಟಲಿದೆ.

ಶ್ರೀಲಂಕಾ ವಿರುದ್ಧ ಕಿವೀಸ್​ಗೆ ವಿನ್

ಟಾಸ್​​ ಗೆದ್ದುಕೊಂಡ ಕಿವೀಸ್​ ಕ್ಯಾಪ್ಟನ್​ ಕೇನ್​ ವಿಲಿಯಮ್​​ಸನ್ ಫೀಲ್ಡಿಂಗ್ ಆಯ್ದುಕೊಂಡರು. ಎದುರಾಳಿ ಶ್ರೀಲಂಕಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್ ಆಗಿ ಕ್ರೀಸ್​ ಆಗಮಿಸಿದ ಪಾತುಂ ನಿಸ್ಸಾಂಕ ಮತ್ತು ಕುಸಾಲ್ ಪೆರೆರಾ ಉತ್ತಮ ಆರಂಭವೇನು ಪಡೆಯಲಿಲ್ಲ. ಕೇವಲ 2 ರನ್​ಗೆ ನಿಸ್ಸಾಂಕ ಕ್ಯಾಚ್​ ನೀಡಿ ಪೆವಿಲಿಯನ್​ಗೆ ನಡೆದ್ರೆ ಪೆರೆರಾ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿ ಹಾಫ್​ ಸೆಂಚುರಿ ಸಿಡಿಸಿ ಔಟ್ ಆದರು. ಎಂ ತೀಕ್ಷಣ 38 ರನ್​ ಬಿಟ್ಟರೇ ಉಳಿದವಱರು 20ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ ಲಂಕಾ 46 ಓವರ್​​ಗೆ ಆಲೌಟ್ ಆಗಿ 171 ರನ್ ಮಾತ್ರ ಗಳಿಸಿತು.

ಈ ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್ ಪಡೆ ಕೇವಲ 23 ಓವರ್​ಗೆ 5 ವಿಕೆಟ್​ ಕಳೆದುಕೊಂಡು 172 ರನ್​ ಗಳಿಸಿತು. ಇದರಿಂದ ಕಿವೀಸ್ 5 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿ ಸೆಮಿಸ್​ಗೆ ಬಹುತೇಕವಾಗಿ ಎಂಟ್ರಿ ಕೊಟ್ಟಂತೆ ಆಗಿದೆ. ಕೊನೆ ಪಂದ್ಯದಲ್ಲಿ ಪಾಕಿಸ್ತಾನ ಭಾರೀ ರನ್​ಗಳ ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ವಿನ್ ಆದರೆ ಸೆಮಿಸ್​​ಗೆ ಹೋಗು ಚಾನ್ಸ್​ ಇದೆ. ಇಲ್ಲದಿದ್ದರೇ ಪಾಕ್ ತವರಿಗೆ ಗಂಟುಮೂಟೆ ಕಟ್ಟಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ಪಶ್ಚಾತ್ತಾಪ ಪಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​​ ಸೆಮೀಸ್​ಗೆ ನ್ಯೂಜಿಲೆಂಡ್​ ಬಹುತೇಕ ಫಿಕ್ಸ್​​.. ಕೊನೆ ಮ್ಯಾಚ್​​ ಗೆದ್ರೆ ಪಾಕ್​ಗಿದ್ಯಾ ಚಾನ್ಸ್​​?

https://newsfirstlive.com/wp-content/uploads/2023/11/PAK_NZ.jpg

Load More