newsfirstkannada.com

ಇವತ್ತು ವಿಶ್ವ ಆನೆಗಳ ದಿನ; ಅಕ್ರಮ ವಿದ್ಯುತ್​ ಲೈನ್​​ಗೆ ಕಾಡಾನೆ ದಾರುಣ ಸಾವು

Share :

12-08-2023

  ಚಾಮರಾಜನಗರ ಜಿಲ್ಲೆ ಗೋಪಿನಾಥಂನಲ್ಲಿ ದುರಂತ

  ನಾಗರಾಜು, ಸೆಲ್ವಂ ಅನ್ನೋರ ಜಮೀನಿನಲ್ಲಿ ಸಾವು

  ಪ್ರಕರಣ ದಾಖಲು, ಅರಣ್ಯಾಧಿಕಾರಿಗಳಿಂದ ತನಿಖೆ

ಅಕ್ರಮ ವಿದ್ಯುತ್ ಲೈನ್​​ಗೆ ಆನೆಯೊಂದು ಬಲಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಡ್ಯಾಂ ಸಮೀಪ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ಆನೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಗರಾಜು ಮತ್ತು ಸೆಲ್ವಂ ಎಂಬುವವರ ಜಮೀನಿನಲ್ಲಿ 12 ವರ್ಷದ ಗಂಡಾನೆ ಸಾವನ್ನಪ್ಪಿದೆ. ವೀರಪ್ಪನ್ ಸ್ವಗ್ರಾಮ ಗೋಪಿನಾಥಂನಲ್ಲಿ ಆನೆ ಸಾವನ್ನಪ್ಪಿದೆ. ಮಲೆ ಮಹದೇಶ್ವರ ಬೆಟ್ಟದ ಬಳಿ ಇರುವ ಗೋಪಿನಾಥಂ, ಈ ಹಿಂದೆ ಕಾಡುಗಳ್ಳ ವೀರಪ್ಪನ್​ ತಾಣವಾಗಿತ್ತು.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಆನೆಯ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳುವಂತೆ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವತ್ತು ವಿಶ್ವ ಆನೆಗಳ ದಿನ; ಅಕ್ರಮ ವಿದ್ಯುತ್​ ಲೈನ್​​ಗೆ ಕಾಡಾನೆ ದಾರುಣ ಸಾವು

https://newsfirstlive.com/wp-content/uploads/2023/08/RMG_ELEPHANT.jpg

Load More