newsfirstkannada.com

G-20 Summit: ಹಿಂದಿಯಲ್ಲೇ ವಿಶ್ವದ ಗಣ್ಯರಿಗೆ ಸ್ವಾಗತ.. US ಅಧ್ಯಕ್ಷ ಬೈಡನ್ ಸೇರಿ ಯಾಱರು ಬಂದಿದ್ದಾರೆ ಗೊತ್ತಾ?  

Share :

08-09-2023

    ಅಮೆರಿಕದ ಅಧ್ಯಕ್ಷ ಜೋ ಬೈಡನ್​ರನ್ನ ಸ್ವಾಗತಿಸಿದ ಸಚಿವ ವಿ.ಕೆ.ಸಿಂಗ್

    ದೆಹಲಿಗೆ ಆಗಮಿಸೋ ದಿಗ್ಗಜರಿಗೆ ಸಚಿವರಿಂದ ಹಿಂದಿಯಲ್ಲೇ ಸ್ವಾಗತ  

    ಜಿ20 ಶೃಂಗಸಭೆ, ರಾಷ್ಟ್ರರಾಜಧಾನಿಗೆ ಬಂದ 19 ರಾಷ್ಟ್ರಗಳ ಮಹಾರಥರು 

ಜಿ20 ಶೃಂಗಸಭೆ ಮೂಲಕ ವಿದೇಶಿ ನಾಯಕರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗ್ತಿರೋ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ಅತಿರಥ-ಮಹಾರಥರ ಆಗಮನ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪುಳಕವನ್ನ ಹುಟ್ಟಿಸಿದೆ.. ದೆಹಲಿ ಅಂಗಳಕ್ಕೆ ಆಗಮಿಸುತ್ತಿರೋ ದಿಗ್ಗಜರನ್ನ ಸಚಿವರು ಹಿಂದಿಯಲ್ಲೇ ಸ್ವಾಗತಿಸಿ ಗಮನ ಸೆಳೆದಿದ್ದಾರೆ.

ಇದು ಮಧುವಣಗಿತ್ತಿಯಂತೆ ಶೃಂಗಾರಗೊಂಡ ರಾಷ್ಟ್ರ ರಾಜಧಾನಿ ದೆಹಲಿಯು ಕಂಗೊಳಿಸುತ್ತಿದೆ. ಬೆಳಕಿನ ಸೌಂದರ್ಯ ಹೊತ್ತು ರಾರಾಜಿಸುತ್ತಿರೋ ನವದೆಹಲಿ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಲು ಸಜ್ಜಾಗಿ ನಿಂತಿದೆ. ದೇಶಕ್ಕೆ ಮತ್ತೊಂದು ಮೈಲಿಗಲ್ಲಾಗಲು ಒಲಿದು ಬಂದಿರೋ 100ನೇ ಜಿ20 ಶೃಂಗಸಭೆಯ ನೇತೃತ್ವ ಹೊಸದೊಂದು ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಅತಿರಥರ ಆಗಮನಕ್ಕೆ ಕಾದುಕುಳಿತಿರೋ ಭಾರತ ಮಂಟಪ ದೇಶದ ಕಲೆ ಮತ್ತು ಕರಕುಶಲತೆಯ ಮಹತ್ವ ಸಾರಲು ಸಜ್ಜಾಗಿದೆ. ಇನ್ನೆರೆಡು ದಿನಗಳ ಮಟ್ಟಿಗೆ ಭಾರತದ ರಾಜಧಾನಿ ಜಗತ್ತಿನ ರಾಜಧಾನಿಯಾಗಿ ಬದಲಾಗಲಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್

ರಾಷ್ಟ್ರ ರಾಜಧಾನಿಗೆ ಅತಿರಥ-ಮಹಾರಥರ ಆಗಮನ!

ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು 19 ರಾಷ್ಟ್ರಗಳ ಅತಿರಥ-ಮಹಾರಥರು ರಾಷ್ಟ್ರರಾಜಧಾನಿಗೆ ಆಮಿಸಲಿದ್ದಾರೆ. ಈಗಾಗಲೇ ಪ್ರಮುಖ ನಾಯಕರು ದೆಹಲಿ ಅಂಗಳಕ್ಕೆ ಕಾಲಿಟ್ಟಿದ್ದು ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಯುಕೆ ಪ್ರಧಾನಿ ರಿಷಿ ಸುನಕ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುಎಸ್​ ಅಧ್ಯಕ್ಷ ಜೋ ಬಿಡನ್ ಸೇರಿ ಹಲವು ನಾಯಕರು ಈಗಾಗಲೇ ದೆಹಲಿಗೆ ಬಂದಿಳಿದಿದ್ದಾರೆ.

ಹಿಂದಿ ಭಾಷೆಯಲ್ಲೇ ಗಣ್ಯರಿಗೆ ಸ್ವಾಗತ ಕೋರಿದ ಸಚಿವರು!

ಜಿ20 ಸಭೆಗಾಗಿ ಇಂದು ದೆಹಲಿಗೆ ಆಗಮಿಸಿದ ಗಣ್ಯರನ್ನ ಹಿಂದಿ ಭಾಷೆಯಲ್ಲೇ ಕೇಂದ್ರ ಸಚಿವರು ಸ್ವಾಗತಿಸಿದ್ದಾರೆ. ನಮಸ್ಕಾರ, ಅಪ್‌ ಕಾ  ಭಾರತ್ ಕೀ ಪವಿತ್ರ ಭೂಮಿ ಪರ್ ಸ್ವಾಗತ ಹೈ ಎಂದು ಹೇಳುತ್ತ ಗಣ್ಯರನ್ನ ಸಚಿವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನ ವಿ.ಕೆ.ಸಿಂಗ್ ಸ್ವಾಗತಿಸಿದ್ರೆ, ಇಟಲಿ ಪ್ರಧಾನಿ ಜಾರ್ಜಿಯಾ ಮೇಲೋನಿಗೆ ಶೋಭಾ ಕರಂದ್ಲಾಜೆ ಸ್ವಾಗತ ಕೋರಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಅಲ್ಬೇನಿಸ್‌ಗೆ ರಾಜೀವ್ ಸಚಿವ ಚಂದ್ರಶೇಖರ್ ಸ್ವಾಗತ ಕೋರಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ (ಎಡಗಡೆ ಇರುವರು)

ವಿದೇಶಿ ನಾಯಕರಿಗೆ ವೈಭವದ ಆತಿಥ್ಯ!

ವಿದೇಶಗಳಿಂದ ದೆಹಲಿಯ ಜಿ20 ಸಭೆಗಾಗಿ ಆಗಮಿಸಿರೋ ನಾಯಕರಿಗೆ ವಿಶೇಷ ಬಗೆಯ ಆತಿಥ್ಯ ನೀಡಲು ಸರ್ಕಾರ ಅಣಿಯಾಗಿದೆ. ಪಂಚ ತಾರಾ ಹೋಟೇಲ್​ಗಳಲ್ಲಿ ಗಣ್ಯರಿಗೆ ಚಿನ್ನ ಹಾಗೂ ಬೆಳ್ಳಿ ತಟ್ಟೆಯಲ್ಲಿ ಊಟ ಮತ್ತು ಉಪಹಾರ ನೀಡುವ ವ್ಯವಸ್ಥೆಮಾಡಲಾಗಿದೆ. ಇನ್ನೂ 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾದ ಹಿನ್ನೆಲೆ ವಿದೇಶಿ ಗಣ್ಯರಿಗೆ ಸಿರಿಧಾನ್ಯದ ಭೋಜನದ ವ್ಯವಸ್ಥೆಮಾಡಲಾಗಿದೆ. ರಾಗಿ ದೋಸೆ, ರಾಗಿ ಲಡ್ಡು, ಸಿರಿಧಾನ್ಯದ ಥಾಲಿ, ಪಲಾವ್, ಇಡ್ಲಿ, ರಾಜಸ್ಥಾನದ ದಾಲ್, ಬೆಂಗಾಲಿ ರಸಗುಲ್ಲ, ಕರ್ನಾಟಕದ ಮಸಾಲೆ ದೋಸೆಯ ಭಕ್ಷ್ಯ ಭೋಜನ ನೀಡಲು ಸಿದ್ಧತೆ ನಡೆದಿದೆ.

ಜಿ20 ಶೃಂಗಸಭೆಯಲ್ಲಿ ಕಲೆ ಮತ್ತು ಕರಕುಶಲತೆಯ ಕಲವರ!

G20 ಶೃಂಗಸಭೆಯಲ್ಲಿ ದೇಶದ ಕಲೆ ಮತ್ತು ಕರಕುಶಲತೆಗೆ ಆದ್ಯತೆ ನೀಡಲಾಗಿದೆ. ಶೃಂಗಸಭೆ ನಡೆಯುವ ಭಾರತ ಮಂಟಪದಲ್ಲಿ ಎಲ್ಲ ರಾಜ್ಯಗಳ ಕರಕುಶಲ ಕಲೆಯನ್ನ ಪ್ರದರ್ಶಿಸಲು ಮಳಿಗೆ ತೆರಯಲಾಗಿದೆ. ವಿದೇಶಗಳಿಂದ ಬರುವ ಗಣ್ಯರು ಭಾರತದ ಕಲೆ ಮತ್ತು ಕರಶುಲತೆಯ ಸೌಂದರ್ಯ ಸವಿಯುವ ಜೊತೆಗೆ ಇಷ್ಟವಾದ ವಸ್ತುಗಳನ್ನ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಿಂದ ಬಿದರಿ ಕಲೆಯನ್ನ ಪ್ರದರ್ಶಿಸಲಾಗುತ್ತಿದೆ.

ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ಮೋದಿ

ಭಾರತ ಮಂಟಪದ ಮೆರಗು ಹೆಚ್ಚಿಸಿದ ನಟರಾಜನ ವೈಭವ!

ಶೃಂಗಸಭೆ ನಡೆಯಲಿರೋ ಭಾರತ ಮಂಟಪದ ಮುಂದೆ ಇಡಲಾಗಿರೋ ನಟರಾಜನ ಪ್ರತಿಮೆ ವೇದಿಕೆಯ ಬೆರಗನ್ನ ಇಮ್ಮಡಿಗೊಳಿಸಿದೆ. ವಿದೇಶದಿಂದ ಆಗಮಿಸುವ ಅತಿಥಿಗಳ ಕಣ್ಣನ್ನ ನಟರಾಜನ ಪ್ರತಿಮೆ ಕೋರೈಸುತ್ತಿದ್ದು, ಈ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆಯ ಸಂಭ್ರಮ ಮನೆಮಾಡಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿದೇಶಿ ನಾಯಕರ ಮುಂದೆ ದೇಶದ ವೈಭವನ್ನ ಸಾರಿ ಭಾರತ ನೆಲದ ಸೊಗಡನ್ನ ಬಿತ್ತರಿಸಲು ಸರ್ಕಾರ ಅಣಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

G-20 Summit: ಹಿಂದಿಯಲ್ಲೇ ವಿಶ್ವದ ಗಣ್ಯರಿಗೆ ಸ್ವಾಗತ.. US ಅಧ್ಯಕ್ಷ ಬೈಡನ್ ಸೇರಿ ಯಾಱರು ಬಂದಿದ್ದಾರೆ ಗೊತ್ತಾ?  

https://newsfirstlive.com/wp-content/uploads/2023/09/G_20_PM_MODI_1.jpg

Load More