newsfirstkannada.com

WTC: ಕೊಹ್ಲಿ ಮೇಲಿದೆ ಎಲ್ಲರ ನಿರೀಕ್ಷೆ.. ಆಸೀಸ್​ಗೆ ಈಗಲೇ ಶುರುವಾಗಿದೆ ನಡುಕ

Share :

02-06-2023

  ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನತ್ತ ಎಲ್ಲರ ಚಿತ್ತ

  ಕಿಂಗ್​ ಕೊಹ್ಲಿ ಮೇಲಿಗೆ ಆಸೀಸ್​ ಆಟಗಾರರ ಕಣ್ಣು

  ಗೆಲ್ಲುವ ತವಕದಲ್ಲಿದ್ದಾರೆ ಟೀಂ ಇಂಡಿಯನ್​ ಬಾಯ್ಸ್​

ಐಪಿಎಲ್​ ಅಂತ್ಯದ ಬೆನ್ನಲ್ಲೇ ಎಲ್ಲರ ಚಿತ್ತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನತ್ತ ಶಿಫ್ಟ್​ ಆಗಿದೆ. ಇಂಡೋ – ಆಸೀಸ್​​​ ನಡುವಿನ ಅಲ್ಟಿಮೇಟ್​ ಫೈಟ್​​ನಲ್ಲಿ ಕಿಂಗ್​ ಕೊಹ್ಲಿಯೇ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ವಿರಾಟ ರೂಪಕ್ಕೆ ಬ್ರೇಕ್​ ಹಾಕೋದು ಹೇಗಪ್ಪಾ ಅನ್ನೋ ಟೆನ್ಶನ್​ ಕಾಂಗರೂಗಳ ಕ್ಯಾಂಪ್​ನಲ್ಲಿದೆ. ಯಾಕಂದ್ರೆ, ಹಸಿದ ಹುಲಿಯಂತೆ ಮೂರೂ ಮಾದರಿಯಲ್ಲಿ ಘರ್ಜಿಸ್ತಾ ಇರೋ ಕೊಹ್ಲಿಯನ್ನ ಕಟ್ಟಿಹಾಕೋದು ನಿಜಕ್ಕೂ ಸವಾಲಿನ ವಿಚಾರ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಇದೀಗ ಮುಗಿದ ಅಧ್ಯಾಯ. ಈಗೇನಿದ್ರೂ ಮುಂದಿರೋ ಅಲ್ಟಿಮೇಟ್​ ಟೆಸ್ಟ್​ನತ್ತ ಕ್ರಿಕೆಟ್​​ ಜಗತ್ತಿನ ಚಿತ್ತ ನೆಟ್ಟಿದೆ. ವಿಶ್ವದ 2 ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಆಂಗ್ಲರ ನಾಡು ಸಜ್ಜಾಗಿದೆ. ದಿ ಒವಲ್​ನಲ್ಲಿ ನಡೆಯೋ ಅಲ್ಟಿಮೇಟ್​ ಫೈಟ್​ನಲ್ಲಿ ರಣರೋಚಕ ಕಾದಾಟದ ನಿರೀಕ್ಷೆಯಲ್ಲಿ ಕ್ರಿಕೆಟ್​ ವಲಯವಿದೆ.

ರಿಯಲ್​ ಕ್ರಿಕೆಟ್​ ಆಡಲು ಕಿಂಗ್​ ಕೊಹ್ಲಿ ಸಜ್ಜು.!

ಇಂಡೋ – ಆಸೀಸ್​​ ಕದನ ಅಂದ ತಕ್ಷಣ ಮತ್ತೆ ಕಿಂಗ್​ ವಿರಾಟ್​ ಕೊಹ್ಲಿ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ಬಿಗ್​ ಸ್ಟೇಜ್​ನ ಹೈ ಪ್ರಶರ್ ಗೇಮ್​ಗಳಲ್ಲಿ ಕಿಂಚಿತ್ತೂ ಒತ್ತಡಕ್ಕೆ ಒಳಗಾಗದೇ ಲೀಲಾಜಾಲವಾಗಿ ರನ್​ಭೇಟೆಯಾಡೋ ಕಿಂಗ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸದ್ಯ ರೆಡ್​ಹಾಟ್​ ಫಾರ್ಮ್​ನಲ್ಲಿರೋ ಕಿಂಗ್​ ಕೊಹ್ಲಿ, 3 ಮಾದರಿಯಲ್ಲೂ ಸಾಲಿಡ್​​ ರಿಧಮ್​ನಲ್ಲಿ ಬ್ಯಾಟಿಂಗ್​ ನಡೆಸ್ತಿದ್ದಾರೆ.

ಆಸ್ಟ್ರೇಲಿಯನ್ನರಿಗೆ ವಾರ್ನಿಂಗ್​ ಕೊಟ್ಟ ರಿಕಿ ಪಾಂಟಿಂಗ್​.!

ಇಂಡೋ – ಆಸೀಸ್​​ ಟೆಸ್ಟ್​ ಸಿರೀಸ್​​ ಅಂದ್ರೆ ಸಾಕು ಆಸ್ಟ್ರೇಲಿಯಾ ಕ್ಯಾಂಪ್​ನಲ್ಲಿ ತಳಮಳ ಶುರುವಾಗಿಬಿಡುತ್ತೆ. ಕೊಹ್ಲಿ ವಿಕೆಟ್​ ಬೇಟೆಗೆ ತಂತ್ರ ರೂಪಿಸೋದೇ ಕ್ಯಾಪ್ಟನ್​ – ಕೋಚ್​​ಗೆ ತಲೆನೋವಾಗಿ ಬಿಡುತ್ತೆ. ಯಾಕಂದ್ರೆ ಕೊಹ್ಲಿ ಹೆಸರು ಕೇಳಿದ್ರೆ ಸಾಕು ಆಸೀಸ್​​ ಕ್ಯಾಂಪ್​ ಬೆಚ್ಚಿ ಬೀಳುತ್ತೆ. ಆಸ್ಟ್ರೇಲಿಯಾದ ಬೌಲಿಂಗ್​ ಅಟ್ಯಾಕ್​ ಅನ್ನ ಅವರದೇ ನೆಲದಲ್ಲಿ ಚಿಂದಿ ಉಡಾಯಿಸಿದ ಧೀರ ಕೊಹ್ಲಿ. ಹೀಗಾಗಿಯೇ ಅಲ್ಟಿಮೇಟ್​ ಟೆಸ್ಟ್​ಗೂ ಮುನ್ನ ಮಾಜಿ ಕ್ಯಾಪ್ಟನ್​​ ರಿಕಿ ಪಾಂಟಿಂಗ್​, ಆಸ್ಟ್ರೇಲಿಯಾ ತಂಡಕ್ಕೆ ವಾರ್ನಿಂಗ್​ ಕೊಟ್ಟಿದ್ದಾರೆ. ನನ್ನ ಫಾರ್ಮ್​ಗೆ ನಾನು ಮರಳಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ. ಎಚ್ಚರ ಎಂದು ಆಸೀಸ್​ ಪಡೆಗೆ ಸಂದೇಶ ರವಾನಿಸಿದ್ದಾರೆ.

ವಿರಾಟ್​ ಹಾರ್ಡ್​ವರ್ಕ್​ಗೆ ಸಲಾಂ ಅಂದ ಹೇಜಲ್​ವುಡ್​.!

ಒಂದೆಡೆ ರಿಕಿಪಾಂಟಿಂಗ್​ ಕೊಹ್ಲಿ ಬಗ್ಗೆ ಎಚ್ಚರ ಅಂತಿದ್ರೆ, ಇನ್ನೊಂದೆಡೆ ವಿರಾಟ್​ ಕೊಹ್ಲಿ ಹಾರ್ಡ್​ವರ್ಕ್​​​​ಗೆ ಸಲಾಂ ಅಂತಿದ್ದಾರೆ. ಆರ್​ಸಿಬಿಯಲ್ಲಿ ತೀರಾ ಹತ್ತಿರದಿಂದ ಕೊಹ್ಲಿಯನ್ನ ಗಮನಿಸಿರೋ ಹೇಜಲ್​ವುಡ್​, ಕೊಹ್ಲಿ ಅಭ್ಯಾಸದ ವೈಖರಿಯನ್ನ ಕಂಡು ದಂಗಾಗಿದ್ದಾರೆ.  ಕೊಹ್ಲಿಯಿಂದ ಏನ್​ ಕಲಿತ್ರಿ ಅಂದ್ರೆ ದೊಡ್ಡ ಲಿಸ್ಟೇ ಹೇಳ್ತಿದ್ದಾರೆ.

ಆಸೀಸ್​ ವಿರುದ್ಧದ ಘರ್ಜಿಸೋದಂದ್ರೆ ಕೊಹ್ಲಿಗೆ ಪಂಚಪ್ರಾಣ

ಅದು ಭಾರತದಲ್ಲಿರಲಿ.. ಆಸ್ಟ್ರೇಲಿಯಾದಲ್ಲೇ ಇರಲಿ. ಎದುರಾಳಿ ಆಸ್ಟ್ರೇಲಿಯಾ ಅಂದ್ರೆ ಮುಗೀತು. ಕೊಹ್ಲಿಯ ಅಬ್ಬರ ಫಿಕ್ಸ್​. ಇತಿಹಾಸದ ಪುಟಗಳೇ ಕಾಂಗರೂಗಳನ್ನ ಕೊಹ್ಲಿ ಡಿಸೈನ್​ ಡಿಸೈನ್​ ಆಗಿ ಹೇಗೆ ಕಾಡಿದ್ರು ಅನ್ನೋದನ್ನ ಹೇಳ್ತವೆ. ತುಂಬಾ ಹಿಂದಲ್ಲ. ಐಪಿಎಲ್​ಗೂ ಮುನ್ನ ಭಾರತಕ್ಕೆ ಟೆಸ್ಟ್​ ಸರಣಿಯನ್ನಾಡಲು ಬಂದ ಆಸೀಸ್​​​ಗೆ ಕೊಹ್ಲಿಯ ವಿರಾಟರೂಪ ದರ್ಶನ ಸಿಕ್ಕಿತ್ತು.

ಇಂಡೋ – ಆಸೀಸ್​ ಸರಣಿಯಲ್ಲಿ ಕೊಹ್ಲಿ

ಇನ್ನಿಂಗ್ಸ್​                06

ರನ್​                      297

ಸರಾಸರಿ                49.50

ಬೆಸ್ಟ್​                     186

ಇಂಡೋ – ಆಸೀಸ್​ ಸರಣಿಯಲ್ಲಿ 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿದ ವಿರಾಟ್​ ಕೊಹ್ಲಿ, 49.50ರ ಸರಾಸರಿಯಲ್ಲಿ 297 ರನ್​ ಸಿಡಿಸಿದ್ರು. ಒಂದು ಶತಕ ಸಿಡಿಸಿ ಘರ್ಜಿಸಿದ್ದ ಕೊಹ್ಲಿಯ ಬೆಸ್ಟ್​ ಸ್ಕೋರ್​​ 186.

ಕೊಹ್ಲಿ ಮುಂದಿದೆ ಕಠಿಣ ಸವಾಲು, ಗೆದ್ದರಷ್ಟೇ ಸೇಫ್​.!

ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಲಿಡ್​ ರೆಕಾರ್ಡ್​ ಹೊಂದಿದ್ದಾರೆ. ಸದ್ಯ ಮೂರೂ ಮಾದರಿಯಲ್ಲೂ ಭರ್ಜರಿ ಪರ್ಫಾಮೆನ್ಸ್​ ಕೂಡ ನೀಡ್ತಿದ್ದಾರೆ. ಆದ್ರೆ, ಐಪಿಎಲ್​ನಲ್ಲೂ ಅರ್ಭಟಿಸಿದ್ದಾರೆ. ಹಾಗಿದ್ರೂ, ಕೊಹ್ಲಿ ಮುಂದೆ ಸದ್ಯ ದೊಡ್ಡ ಸವಾಲಿದೆ. ಕಳೆದ 2 ತಿಂಗಳಿಂದ ಸತತವಾಗಿ ವೈಟ್​​ ಬಾಲ್​ ಕ್ರಿಕೆಟ್​ ಆಡಿರೋ ಕೊಹ್ಲಿ, ರೆಡ್​ಬಾಲ್​ ಕ್ರಿಕೆಟ್​ಗೆ ಶಿಫ್ಟ್​ ಆಗಬೇಕಿದೆ. ಜೊತೆಗೆ ಇಂಗ್ಲೆಂಡ್​ನ ಪ್ಲೇಯಿಂಗ್​ ಕಂಡಿಷನ್ಸ್​ಗೆ ಒಗ್ಗಿಕೊಳ್ಳಬೇಕಿದೆ. ಈ ಸವಾಲನ್ನ ಗೆದ್ದರೆ ಮಾತ್ರ, ಕೊಹ್ಲಿ ಆರ್ಭಟಿಸೋದು.. ಇಲ್ಲದಿದ್ರೆ, ಹಿನ್ನಡೆ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WTC: ಕೊಹ್ಲಿ ಮೇಲಿದೆ ಎಲ್ಲರ ನಿರೀಕ್ಷೆ.. ಆಸೀಸ್​ಗೆ ಈಗಲೇ ಶುರುವಾಗಿದೆ ನಡುಕ

https://newsfirstlive.com/wp-content/uploads/2023/06/Kohli-7.jpg

Load More