newsfirstkannada.com

ರೋಚಕ ಘಟ್ಟದತ್ತ ಟೆಸ್ಟ್​ ವಿಶ್ವಕಪ್​​ ಫೈನಲ್; ಸೋಲಿನಿಂದ ಪಾರು ಮಾಡ್ತಾರಾ ಕೊಹ್ಲಿ-ರಹಾನೆ..?

Share :

Published June 11, 2023 at 3:47am

    ಇದೇನಾ ನಾಯಕ ರೋಹಿತ್ ಶರ್ಮಾ ಆಟ..?

    ವಿವಾದಾತ್ಮಕ ಕ್ಯಾಚ್​​​ಗೆ ಶುಭ್​​ಮನ್​​​ ಗಿಲ್ ಬಲಿ

    ಭಾರತ ಟೆಸ್ಟ್​ ವಿಶ್ವಕಪ್​​ ಗೆಲ್ಲುವ ಚಾನ್ಸ್ ಎಷ್ಟಿದೆ?

ಟೆಸ್ಟ್​ ವಿಶ್ವಕಪ್​​ ರೋಚಕ ಘಟ್ಟ ತಲುಪಿದೆ. ಭಾರತದ ಮುಂದೆ ಬಿಗ್ ಟಾರ್ಗೆಟ್ ಇದೆ. ಆರಂಭಿಕ ಮೂವರು ಪೆವಿಲಿಯನ್ ಸೇರಿದ್ದಾರೆ. ಆದ್ರೆ ಕಿಂಗ್ ಕೊಹ್ಲಿ-ರಹಾನೆ ಕ್ರೀಸ್​​ನಲ್ಲಿದ್ದು ಅಪಾರ ನಿರೀಕ್ಷೆ ಮನೆ ಮಾಡಿದೆ. ಇನ್ನೂ 280 ರನ್​ ಹೊಡೆದು ಬಿಟ್ರೆ ದ ಓವಲ್​​​ನಲ್ಲಿ ಟೀಮ್ ಇಂಡಿಯಾ ಚರಿತ್ರೆ ಸೃಷ್ಟಿಸಲಿದೆ.

444 ಟಾರ್ಗೆಟ್​…ಆರಂಭದಲ್ಲೇ ತ್ರಿಬಲ್ ಶಾಕ್​​..!
123 ರನ್​ಗೆ 4 ವಿಕೆಟ್​​ ಕಳೆದುಕೊಂಡು 4ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ 270 ರನ್​ ಗಳಿಸಿ 2ನೇ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಳ್ತು. ಮೊದಲ ಇನ್ನಿಂಗ್ಸ್​​ನಲ್ಲಿ 173 ರನ್​​ಗಳ ಮುನ್ನಡೆ ಸಾಧಿಸಿದ್ದ ಆಸೀಸ್​​, ಭಾರತ ಗೆಲುವಿಗೆ 444 ರನ್​​ಗಳ ಬೃಹತ್ ಗುರಿ ನೀಡ್ತು. ಆದರೆ ಬಿಗ್ ಟಾರ್ಗೆಟ್ ಕಂಡು ಇಂಡಿಯನ್​​​ ಬ್ಯಾಟ್ಸ್​ಮನ್​​ಗಳು ಸುಸ್ತಾಗಿ ಹೋದ್ರು.

ವಿವಾದಾತ್ಮಕ ಕ್ಯಾಚ್​​​ಗೆ ಶುಭ್​​ಮನ್​​​ ಗಿಲ್ ಬಲಿ..!
ಮೊದಲ ಇನ್ನಿಂಗ್ಸ್​​​ನಲ್ಲಿ ನಿರಾಸೆ ಮೂಡಿಸಿದ್ದ ಶುಭ್​​ಮನ್ ಗಿಲ್​​​​​​ 2ನೇ ಇನ್ನಿಂಗ್ಸ್​ನಲ್ಲಿ ಸಿಡಿದೇಳುವ ನಿರೀಕ್ಷೆಯಲ್ಲಿದ್ರು. ಆದರೆ 18 ರನ್​​ ಗಳಿಸಿದ್ದಾಗ ಕ್ಯಾಮರೂನ್ ಗ್ರೀನ್ ಹಿಡಿದ ವಿವಾದಾತ್ಮಕ ಕ್ಯಾಚ್​ಗೆ ಗಿಲ್​​​​ ಬಲಿಯಾದ್ರು.

ಇದೇನಾ ನಾಯಕ ರೋಹಿತ್ ಶರ್ಮಾ ಆಟ..?
ಕ್ಯಾಪ್ಟನ್ ಅನ್ನಿಸಿಕೊಂಡೋರು ಮುಂಚೂಣಿಯಲ್ಲಿದ್ದು ತಂಡವನ್ನ ಲೀಡ್ ಮಾಡಬೇಕು. ಆದ್ರೆ ರೋಹಿತ್​​​​​​ ಶರ್ಮಾ ಇದಕ್ಕೆ ತದ್ವಿರುದ್ಧ. ಕೇವಲ 43 ರನ್​ ಗಳಿಸಿ ಲಯಾನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ತಂಡವನ್ನ ನಡುನೀರಲ್ಲಿ ಕೈಬಿಟ್ಟರು.

ಕೌಂಟಿನಲ್ಲಿ ಮಿಂಚು, ಟೀಮ್ ಇಂಡಿಯಾ ಪರ ಫ್ಲಾಫ್​​
ಕೌಂಟಿ ಕ್ರಿಕೆಟ್​ನಲ್ಲಿ ಸಾಲು-ಸಾಲು ಶತಕ ಮೂಡಿಸಿ ಬೆರಗು ಮೂಡಿಸಿದ್ದ ಚೇತೇಶ್ವರ್​ ಪೂಜಾರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ವು. ಆದ್ರೆ ಎಲ್ಲಾ ಭರವಸೆ ಹುಸಿಯಾದ್ವು. ಪೂಜಾರ ಆಟ 27ಕ್ಕೆ ಸ್ಟಾಪ್ ಆಯ್ತು.

4ನೇ ವಿಕೆಟ್​ಗೆ ಕೊಹ್ಲಿ -ರಹಾನೆ ಆಸರೆ
93 ರನ್​ಗೆ 3 ವಿಕೆಟ್​​ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ಕಿಂಗ್ ಕೊಹ್ಲಿ-ರಹಾನೆ ಜೊತೆಗೂಡಿ ತಂಡವನ್ನ ಮೇಲೆಕ್ಕೆತ್ತಿದ್ರು. ನಾಲ್ಕನೇ ವಿಕೆಟ್​ಗೆ ಈ ಜೋಡಿ ಅತ್ಯಾಮೂಲ್ಯ 71 ರನ್​ ಪೇರಿಸಿತು.

ಸೋಲಿನಿಂದ ಪಾರು ಮಾಡ್ತಾರಾ ಕೊಹ್ಲಿ-ರಹಾನೆ..?
ಭಾರತ ಗೆಲುವಿಗೆ ಬೇಕಿದೆ ಇನ್ನೂ 280 ರನ್​

4ನೇ ವಿಕೆಟ್​ಗೆ ಕೊಹ್ಲಿ-ರಹಾನೆ ಅರ್ಧಶತಕದ ಜುಗಲ್​​​ಬಂದಿ ಪರಿಣಾಮ ಭಾರತ ತಂಡ 4ನೇ ದಿನದಂತ್ಯಕ್ಕೆ 3 ವಿಕೆಟ್​ಗೆ 164 ರನ್​​​ ಬಾರಿಸಿದೆ. ಗೆಲ್ಲಲು ಇನ್ನೂ 280 ರನ್ ಗಳಿಸಬೇಕಿದೆ. ದ ಓವಲ್​​ನಲ್ಲಿ ಚರಿತ್ರೆ ಸೃಷ್ಟಿಸಬೇಕಾದ್ರೆ ಅದು ಕೊಹ್ಲಿ-ರಹಾನೆ ಜೋಡಿಯಿಂದ ಮಾತ್ರ ಸಾಧ್ಯ. ಯಾಕಂದ್ರೆ ಭಾರತಕ್ಕೆ ಕೊನೆ ಭರವಸೆ ಅಂದ್ರೆ ಇವರಿಬ್ಬರೇ.

ಎನಿವೇ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯ ರೋಚಕ ಘಟ್ಟ ತಲುಪಿದೆ. ಈ ಹೈ ಥ್ರಿಲ್ಲಿಂಗ್ ಗೇಮ್​​​ನಲ್ಲಿ ಕೊಹ್ಲಿ-ರಹಾನೆ ತಂಡವನ್ನ ಸೋಲಿನಿಂದ ಪಾರು ಮಾಡಿ, ಭಾರತ ಟೆಸ್ಟ್​ ವಿಶ್ವಕಪ್​​ ಗೆಲ್ಲುವಂತಾಗಲಿ ಎಂಬುದು ನಮ್ಮ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಚಕ ಘಟ್ಟದತ್ತ ಟೆಸ್ಟ್​ ವಿಶ್ವಕಪ್​​ ಫೈನಲ್; ಸೋಲಿನಿಂದ ಪಾರು ಮಾಡ್ತಾರಾ ಕೊಹ್ಲಿ-ರಹಾನೆ..?

https://newsfirstlive.com/wp-content/uploads/2023/06/Rohit-Sharma-2-1.jpg

Load More