newsfirstkannada.com

ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್​​ಗೆ ಫಿಕ್ಸ್​ ಆಯ್ತು ಸೆಮಿಫೈನಲ್​ ಟಿಕೆಟ್​; ಪಾಕ್​-ಅಫ್ಘಾನ್​​ ಕನಸು ಬಹುತೇಕ ಛಿದ್ರ

Share :

10-11-2023

    ಕಿವೀಸ್​​ಗೆ ಫಿಕ್ಸಾಯ್ತು ಸೆಮಿಫೈನಲ್​ ಟಿಕೆಟ್..!

    ಪಾಕ್​-ಅಫ್ಘಾನಿಸ್ತಾನ ಕನಸು ಬಹುತೇಕ ಛಿದ್ರ..

    ಸೆಮಿಸ್​​ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ ?

ನ್ಯೂಜಿಲೆಂಡ್ ಗೆದ್ದಾಯ್ತು. ಸೆಮೀಸ್ ಬಹುತೇಕ ಫಿಕ್ಸಾಯ್ತು. ಟೀಮ್ ಇಂಡಿಯಾ, ಸೆಮೀಸ್ ಎದುರಾಳಿ ಯಾರೆಂದು ಗೊತ್ತಾಯ್ತು. ಆದರೆ, ಆ ಒಂದು ಪವಾಡ ನಡೆಯಲಿಲ್ಲ ಅಂದ್ರೆ, ಮಾತ್ರ. ಹಾಗಾದ್ರೆ, ಸೆಮೀಸ್ ಲೆಕ್ಕಚಾರ ಏನು..?

ಏಕದಿನ ವಿಶ್ವಕಪ್ ಉಪಾಂತ್ಯಕ್ಕೆ ಬಂದಾಯ್ತು. ಸಿಂಹಳೀಯರ ಬೇಟೆಯೊಂದಿಗೆ ಕಿವೀಸ್​, ಗೆಲುವಿನ ಹಳಿಗೇರಾಯ್ತು. ಮತ್ತೆ ಗೆಲುವಿನ ಲಯಕ್ಕೆ ಮರಳಿದ ನ್ಯೂಜಿಲೆಂಡ್, ಬಹುತೇಕ ಸೆಮೀಸ್​ಗೆ ಎಂಟ್ರಿ ಕೊಟ್ಟಾಯ್ತು. ಅಷ್ಟೇ ಅಲ್ಲ. ಸೆಮಿಫೈನಲ್​​ನಲ್ಲಿ ಟೀಮ್ ಇಂಡಿಯಾದ ಎದುರಾಳಿ ಯಾರೆಂಬ ಸ್ಪಷ್ಟ ಚಿತ್ರಣ ಜೊತೆಗೆ ನಾಕೌಟ್​ ರಂಗೇರುವಂತಾಯ್ತ. ಇದಕ್ಕೆಲ್ಲಾ ಕಾರಣವಾಗಿದ್ದು ಚಿನ್ನಸ್ವಾಮಿಯಲ್ಲಿ ನ್ಯೂಜಿಲೆಂಡ್​ ಗೆಲುವು.

ಹೌದು..! ಚಿನ್ನಸ್ವಾಮಿಯಲ್ಲಿ ನಡೆದ ಡು ಆರ್ ಡೈ ಮ್ಯಾಚ್​ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಎದುರಾಳಿ ಶ್ರೀಲಂಕಾವನ್ನ ಬ್ಯಾಟಿಂಗ್​ಗೆ ಆಹ್ವಾನಿಸಿದ್ರು. ಕ್ಯಾಪ್ಟನ್ ಕೇನ್ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ದಾಳಿ ನಡೆಸಿದ ಕಿವೀಸ್ ಮಿಸೈಲ್​ಗಳು, ಸಿಂಹಳೀಯರನ್ನ ಕಟ್ಟಿಹಾಕಿದ್ರು. ಕುಶಾಲ್ ಪೆರಾರ ಅರ್ಧಶತಕ ಹಾಗೂ ಮಹೀಶಾ ತೀಕ್ಷ್ಣ ಅಜೇಯ 38 ರನ್​​ಗಳ ನೆರವಿನ ಪರಿಣಾಮ ಶ್ರೀಲಂಕಾ 46.4 ಓವರ್​ಗಳಲ್ಲಿ 171 ರನ್​ಗಳಿಗೆ ಸರ್ವ ಪತನ ಕಂಡಿತು.

ನ್ಯೂಜಿಲೆಂಡ್ ಸ್ಫೋಟಕ ಆಟ.. ಲಂಕಾ ಔಟ್​..!

ಯೆಸ್! 172 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ನ್ಯೂಜಿಲೆಂಡ್ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಯ್ತು. ಕಾನ್ವೆ, ರಚಿನ್ ಸ್ಪೋಟಕ ಆಟದ ನೆರವಿನಿಂದ ನ್ಯೂಜಿಲೆಂಡ್ 23.2 ಓವರ್​ಗಳಲ್ಲೇ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಇದರೊಂದಿಗೆ ಸೆಮೀಸ್​ ಜೀವಂತವಾಗಿಸಿಕೊಳ್ತು.

ಇದನ್ನು ಓದಿ:ಪಿಎಸ್‌ಐ ನೇಮಕಾತಿ ಹಗರಣ; ಇಂದು ತೀರ್ಪು ಪ್ರಕಟಿಸಲಿದೆ ಕರ್ನಾಟಕ ಹೈಕೋರ್ಟ್‌

ಸೆಮಿಸ್​ನಲ್ಲಿ ಟೀಮ್ ಇಂಡಿಯಾಗೆ ಕಿವೀಸ್ ಎದುರಾಳಿ ?

ಶ್ರೀಲಂಕಾ ಎದುರಿನ ಭರ್ಜರಿ ಗೆಲುವಿನೊಂದಿಗೆ ನ್ಯೂಜಿಲೆಂಡ್, ಸೆಮೀಸ್​ಗೆ ಬಹುತೇಕ ಎಂಟ್ರಿಕೊಟ್ಟಂತಾಗಿದೆ. ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್, ಸೆಮೀಸ್​​ನಲ್ಲಿ ಟೀಮ್ ಇಂಡಿಯಾ ಎದುರಾಳಿ ಆಗೋದು ಖಾಯಂ ಆಗಿದೆ. ಇದಕ್ಕೆಲ್ಲಾ ಕಾರಣ ಲಂಕಾ ಎದುರಿನ ಭಾರೀ ಅಂತರದ ಗೆಲುವು. ಸೆಮೀಸ್ ರೇಸ್​ನಲ್ಲಿರುವ ಪಾಕ್​ ಹಾಗೂ ಅಫ್ಘಾನ್ ತಂಡಗಳ ರನ್​ರೇಟ್​.

​​​​​​
ಪವಾಡ ನಡೆದರಷ್ಟೆ ಪಾಕ್​​​​ ಸೆಮೀಸ್​​ಗೆ ಎಂಟ್ರಿ..!

ಸದ್ಯ ಪಾಕ್​​​​​, ಅಧಿಕೃತವಾಗಿ ಟೂರ್ನಿಯಿಂದ ಔಟಾಗಿಲ್ಲ. ಇತ್ತ ಸೆಮೀಸ್​​ಗೇರುವ ಕನಸು ಕೂಡ ನುಚ್ಚುನೂರಾಗಿಲ್ಲ. ಹೀಗಾದ್ರೂ ಪಾಕ್ ಕೊನೆ ಪಂದ್ಯ ಗೆದ್ದು, ಸೆಮೀಸ್​​ಗೇರುವುದು ನಿಜಕ್ಕೂ ಅಸಾಧ್ಯದ ಮಾತಾಗಿದೆ. ಇದು ನಡೆಯಬೇಕಾದ್ರೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೇ ನ್ಯೂಜಿಲೆಂಡ್​​ ತಂಡವನ್ನ ಮೀರಿಸುವಂತ ರನ್​ರೇಟ್​ನಲ್ಲಿ ಗೆಲ್ಲಬೇಕು. ಇಂಥಹ ಗೆಲುವಿಗೆ ಪವಾಡವೇ ನಡೆಯಬೇಕಿದೆ. ಹೀಗಾಗಿ ಪಾಕ್​ ಹಾಗೂ ಅಫ್ಘಾನಿಸ್ತಾನ ಕನಸು ಬಹುತೇಕ ಛಿದ್ರಗೊಂಡಿದೆ.

ಇದನ್ನು ಓದಿ: ಕೋಟಿ ಒಡೆಯ ಕೊಹ್ಲಿಯ ಸಕ್ಸಸ್​ ಹಿಂದಿದ್ದಾನೆ ಈ ಜೀವದ ಗೆಳೆಯ.. ವರ್ತಿಕ್​ ತಿಹಾರ ಯಾರು ಗೊತ್ತಾ?

ಪಾಕ್ ಸೆಮೀಸ್​​​ ದಾರಿ!
* ಶ್ರೀಲಂಕಾ ಎದುರು 25 ಓವರ್​ಗಳಲ್ಲಿ ಕಿವೀಸ್ ಚೇಸ್ ಹಿನ್ನೆಲೆ
* 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ರನ್​ರೇಟ್​ +0.922
* ಇಂಗ್ಲೆಂಡ್ ಎದುರು ಪಾಕ್ 287 ರನ್​ಗಳಿಂದ ಗೆಲ್ಲಬೇಕು
* 2.3 ಓವರ್​ಗಳಲ್ಲೇ ಟಾರ್ಗೆಟ್ ಚೇಸ್ ಮಾಡಬೇಕು

​​ಶ್ರೀಲಂಕಾ ಎದುರಿನ ಪಂದ್ಯದಲ್ಲಿ ನ್ಯೂಜಿಲೆಂಡ್,23.2 ಓವರ್​ಗಳಲ್ಲೇ ಗುರಿ ತಲುಪಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್, 0.922 ಪ್ಲಸ್ ರನ್​ರೇಟ್​ ಹೊಂದಿದೆ. ಈ ರನ್​ರೇಟ್ ಮೀರಿಸಲು ಪಾಕ್​​​, ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ 287 ರನ್​​ಗಳ ಅಂತರದಲ್ಲಿ ಗೆಲ್ಲಬೇಕು. ಒಂದೇ ವೇಳೆ ಇಂಗ್ಲೆಂಡ್ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ, ಪಾಕ್ 2.3 ಓವರ್​​ಗಳಲ್ಲೇ ಟಾರ್ಗೆಟ್ ಚೇಸ್ ಮಾಡಬೇಕು.

ಹೀಗಾಗಿ ಪಾಕ್​ ಸೆಮೀಸ್​ಗೆ ಎಂಟ್ರಿ ನೀಡಬೇಕಾದ್ರೆ. ಪವಾಡವೇ ನಡೆಯಬೇಕು. ಇದು ನಿಜಕ್ಕೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಷ್ಟದ ಕೆಲಸ. ಸೋ, ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ಎದುರಾಳಿಯಾಗೋದು ಶತಸಿದ್ಧ. ಒಟ್ಟಿನಲ್ಲಿ! ಸೆಮೀಸ್​​ ಫೈನಲ್​ನಲ್ಲಿ ಬಲಾಢ್ಯರ ಮಹಾ ಕಾಳಗವೇ ನಡೆಯಲಿದ್ದು, ಫ್ಯಾನ್ಸ್​ಗೆ ಡಬಲ್ ಟ್ರೀಟ್ ಸಿಗೋದಂತು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್​​ಗೆ ಫಿಕ್ಸ್​ ಆಯ್ತು ಸೆಮಿಫೈನಲ್​ ಟಿಕೆಟ್​; ಪಾಕ್​-ಅಫ್ಘಾನ್​​ ಕನಸು ಬಹುತೇಕ ಛಿದ್ರ

https://newsfirstlive.com/wp-content/uploads/2023/11/Team-India.jpg

Load More