newsfirstkannada.com

ಆ ರಾಣಿಯ ನೆನಪಿಗಾಗಿ ತಯಾರಾಯ್ತು 192 ಕೋಟಿ ಮೌಲ್ಯದ ದುಬಾರಿ ನಾಣ್ಯ! ಇದರಲ್ಲಿದೆ 4 KG ಚಿನ್ನ, 6400 ಡೈಮಂಡ್​ ​​

Share :

09-09-2023

  192 ಕೋಟಿ ವೆಚ್ಚದ ವಿಶ್ವದ ದುಬಾರಿ ನಾಣ್ಯವಿದು

  ಈಸ್ಟ್​ ಇಂಡಿಯಾ ಕಂಪನಿ ಈ ದುಬಾರಿ ನಾಣ್ಯವನ್ನು ಬಿಡುಗಡೆ ಮಾಡಿದೆ

  ಈ ನಾಣ್ಯವನ್ನು ತಯಾರಿಸಲು 16 ತಿಂಗಳು ತೆಗೆದುಕೊಳ್ಳಲಾಗಿದೆ

ದಿವಂಗತ ರಾಣಿ ಎಲಿಜಬೆತ್​ 2nd ಅವರ ಸ್ಮರಣಾರ್ಥವಾಗಿ ದುಬಾರಿ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಳಿಸಲಾದ ನಾಣ್ಯವು 192 ಕೋಟಿ ಮೌಲ್ಯದ್ದಾಗಿದೆ. ಇದು ಬರೋಬ್ಬರಿ 4 ಕೆ.ಜಿ ಚಿನ್ನ ಮತ್ತು 6,400 ಡೈಮಂಡ್​​ಗಳನ್ನು ಬಳಸಿ ತಯಾರಿಸಲಾಗಿದೆ.

ದುಬಾರಿ ಲೈಫ್​​ಸ್ಟೈಲ್​​ ಬ್ರಾಂಡ್​ ಈಸ್ಟ್​ ಇಂಡಿಯಾ ಕಂಪನಿ ಈ ದುಬಾರಿ ನಾಣ್ಯವನ್ನು ಬಿಡುಗಡೆ ಮಾಡಿದೆ. ದಿವಂಗತ ರಾಣಿ ಎಲಿಜಬೆತ್​ 2nd ಅವರು ಸಾವನ್ನಪ್ಪಿ ಒಂದು ವರ್ಷದ ಕಳೆದಿದ್ದು, ಅವರ ಪುಣ್ಯಸ್ಮರಣೆಗಾಗಿ ದುಬಾರಿ ನಾಣ್ಯವನ್ನು ಬಿಡುಗಡೆ ಮಾಡಿದೆ. ಅಂದಹಾಗೆಯೇ ಇದು ವಿಶ್ವದ ದುಬಾರಿ ನಾಣ್ಯವಾಗಿ ಗುರುತಿಸಿಕೊಂಡಿದೆ.

ನಾಣ್ಯವನ್ನು ತಯಾರಿಸಲು 16 ತಿಂಗಳು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಂದಹಾಗೆಯೇ ಈ ನಾಣ್ಯ 9.6 ಇಂಚು ಉದ್ದವಿದ್ದು, ಬಾಸ್ಕೆಟ್​ಬಾಲ್​ನ ಗಾತ್ರವನ್ನು ಹೊಂದಿದೆ. ಹೆಸರಾಂತ ಕಲಾವಿದರಾದ ಮೇರಿ ಗಿಲ್ಲಿಕ್​​, ಅರ್ನಾಲ್ಡ್​​​ ಮಚಿನ್​, ರಾಫೆಲ್​ ಮಕ್ಲೌಫ್​ ಮತ್ತು ಇಯಾನ್​ ರಾಂಕ್​ ಬ್ರಾಡ್ಲಿ ತಯಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ರಾಣಿಯ ನೆನಪಿಗಾಗಿ ತಯಾರಾಯ್ತು 192 ಕೋಟಿ ಮೌಲ್ಯದ ದುಬಾರಿ ನಾಣ್ಯ! ಇದರಲ್ಲಿದೆ 4 KG ಚಿನ್ನ, 6400 ಡೈಮಂಡ್​ ​​

https://newsfirstlive.com/wp-content/uploads/2023/09/Coin.jpg

Load More