ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಇದು
ಈ ಹಣ್ಣಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ
'ಮಿಯಾಜಾಕಿ' ಮಾವಿನ ಮೋಡಿ ಇಲ್ಲಿದೆ ನೋಡಿ
ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಮಾವು ಎಂದರೆ ಪಂಚಪ್ರಾಣ. ಮಾವಿನ ಹಣ್ಣನ್ನು ನೋಡಿದ ಕೂಡಲೇ ಎಂಥವರ ಬಾಯಲ್ಲಿ ನೀರೂರುತ್ತೆ. ಈ ವರ್ಷದ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಎಲ್ಲೆಡೆ ಮಾವಿನದ್ದೇ ಕಾರುಬಾರು. ಜನರು ಮಾವಿನ ಹಣ್ಣನ್ನು 100, 200 ರೂಪಾಯಿಯನ್ನು ಕೊಟ್ಟು ಖರೀದಿಸುತ್ತಾರೆ. ಆದರೆ ಇಲ್ಲಿ ಒಂದು ಕೆಜಿ ಮಾವಿನ ಹಣ್ಣಿನ ಬೆಲೆ ಎಷ್ಟು ಎಂದು ಹೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ಅದುವೆ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ‘ಮಿಯಾಜಾಕಿ’.
‘ಮಿಯಾಜಾಕಿ’ ಎಂಬ ಹೆಸರಿನ ಮಾವಿನ ಹಣ್ಣು ಇದೀಗ ಭಾರೀ ಸುದ್ದಿಯಲ್ಲಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ. ಮಿಯಾಜಾಕಿ ತಳಿಯ ಮಾವುಗಳು ವಿಶ್ವದ ದುಬಾರಿ ಮಾವಿನ ಹಣ್ಣು ಎಂದು ಖ್ಯಾತಿ ಪಡೆದುಕೊಂಡಿದೆ. ಮಿಯಾಜಾಕಿ ತಳಿಯ ಮಾವು ಬೆಲೆಯು ಅಬ್ಬಾ.. ಒಂದು ಕೆಜಿಗೆ 2.75 ಲಕ್ಷ ರೂಪಾಯಿ; ‘ಮಿಯಾಜಾಕಿ’ ಮಾವಿನ ಹಣ್ಣಿನ ವಿಶೇಷ ಏನು ಗೊತ್ತಾ? . ಇದೀಗ ಸಿಲಿಗುರಿಯಲ್ಲಿ ನಡೆಯುತ್ತಿರುವ 7ನೇ ಆವೃತ್ತಿಯ ಮಾವು ಮೇಳದಲ್ಲಿ ಈ ದುಬಾರಿ ಮಾವಿನ ಹಣ್ಣನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇನ್ನು, ಈ ಮಾವು ಮೇಳದಲ್ಲಿ ಮಿಯಾಜಾಕಿ ಹಣ್ಣನ್ನು ನೋಡಲು ಬಂದ ಗ್ರಾಹಕರು ಅದರ ಬೆಲೆ ಕೇಳಿ ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಈ ಮಾವಿನ ತಳಿಯ ವಿಶೇಷತೆ ಏನು..?
‘ಮಿಯಾಜಾಕಿ’ ಮಾವಿನ ಹಣ್ಣು ಕೇವಲ 2-3 ವರ್ಷಗಳಲ್ಲೇ ಫಲ ನೀಡಲು ಪ್ರಾರಂಭಿಸುತ್ತವೆ. ಒಂದು ಹಣ್ಣಿನ ತೂಕ 200 ರಿಂದ 300 ಗ್ರಾಂ ಇರುತ್ತದೆ. ಈ ಮಿಯಾಜಾಕಿ ಹಣ್ಣುಗಳನ್ನು ಬೆಳೆಸಿದ ಮಾಲೀಕರು ಇದನ್ನು ಮಾರುವ ಬದಲು ಅದರಿಂದ ಮತ್ತಷ್ಟು ಗಿಡಗಳನ್ನು ತಯಾರು ಮಾಡಿ ಮಾರಾಟ ಮಾಡಲು ಶುರು ಮಾಡಿದ್ದಾರೆ. ಈ ತಳಿಯ ಮಾವಿನ ಹಣ್ಣನ್ನು ಬೆಳೆಯಲು ಉತ್ತಮ ಬಿಸಿಲು ಮತ್ತು ನೀರಿನ ಅಗತ್ಯವಿರುತ್ತದೆ. ಈ ಮಿಯಾಜಾಕಿ ಮಾವಿನ ಹಣ್ಣು ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ ಒಳಗೆ ಹಳದಿ ಬಣ್ಣ ಇರುತ್ತದೆ. ಮಿಯಾಜಾಕಿ ಮಾವಿನ ವಿಶೇಷತೆಯೆಂದರೆ ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ. ಇದರಲ್ಲಿ ಫೋಲಿಕ್ ಆಸಿಡ್, ಆ್ಯಂಟಿ ಆಕ್ಸಿಡೆಂಟ್, ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳೂ ಇದ್ದು ಆರೋಗ್ಯಕ್ಕೆ ಒಳ್ಳೆಯದು. ಈ ಮಾವಿನ ಹಣ್ಣಿನ ಸಿಪ್ಪೆಯನ್ನು ಕೂಡ ಸುಲಭವಾಗಿ ತಿನ್ನಬಹುದು ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ