newsfirstkannada.com

ಮುಂದೆ ಮುಖ್ಯಮಂತ್ರಿಯಾಗಲಿ.. ಬಿ.ವೈ ವಿಜಯೇಂದ್ರ ಪದಗ್ರಹಣದ ಪೂರ್ಣಾಹುತಿ ಪೂಜೆಯಲ್ಲಿ ಪ್ರಾರ್ಥನೆ!

Share :

15-11-2023

    ಜಗನ್ನಾಥ ಭವನದ ದ್ವಾರದಲ್ಲೇ ಕುಳಿತಿದ್ದ ಬಿ.ಎಸ್‌ ಯಡಿಯೂರಪ್ಪ

    ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ವೈ ವಿಜಯೇಂದ್ರಗೆ ಸ್ವಾಗತ

    ಹೋಮ, ಪೂಜಾ ಕಾರ್ಯಕ್ರಮಗಳು ಮುಗಿದ ಬಳಿಕ ಅಧಿಕಾರ ಹಸ್ತಾಂತರ

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಪದಗ್ರಹಣದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಪುತ್ರ ಹಾಗೂ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬಿ.ಎಸ್ ಯಡಿಯೂರಪ್ಪ ಆಶೀರ್ವಾದ ಮಾಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರನ್ನ ನಳಿನ್ ಕುಮಾರ್ ಕಟೀಲ್ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ವಿಜಯೇಂದ್ರ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆ. ಜಗನ್ನಾಥ ಭವನದ ದ್ವಾರದಲ್ಲೇ ಕುಳಿತಿದ್ದ ಯಡಿಯೂರಪ್ಪನವರು ವಿಜಯೇಂದ್ರ ಆಗಮನದ ದೃಶ್ಯವನ್ನ ಕಣ್ತುಂಬಿಕೊಂಡಿದ್ದಾರೆ.

ಗೋವಿನ ಪೂಜೆ ಮಾಡಿದ ಬಳಿಕ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರು ಪೂರ್ಣಾಹುತಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಹೋಮ ಕುಂಡಕ್ಕೆ ಪೂಜೆ ನೆರವೆರಿಸಿದ ಬಿ.ವೈ ವಿಜಯೇಂದ್ರ ಅವರಿಗೆ ಅರ್ಚಕರು ಮುಂದೆ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಹೋಮ, ಪೂಜಾ ಕಾರ್ಯಕ್ರಮಗಳು ಮುಗಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಮೊದಲಿಗೆ ವಿಜಯೇಂದ್ರ ಅವರ ಅಧಿಕಾರ ಹಸ್ತಾಂತರ ಕಾರ್ಯ ನಡೆಯಲಿದೆ.

ಬಿಜೆಪಿ ಕಚೇರಿಗೆ ಆಗಮಿಸಿರೋ ಬಿ.ವೈ ವಿಜಯೇಂದ್ರ ಅವರು ನಮ್ಮ ರಾಷ್ಟ್ರೀಯ ನಾಯಕರು ಪಕ್ಷದ ವರಿಷ್ಠರ ಆದೇಶದಂತೆ ಅಧಿಕಾರ ಸ್ವೀಕಾರ ಮಾಡುತ್ತಿದ್ದೇನೆ. ನಳಿನ್ ಕುಮಾರ್ ಕಟೀಲ್ ಅವರಿಂದ ಜವಾಬ್ದಾರಿ ವಹಿಸುತ್ತಿದ್ದೇನೆ. ರಾಜ್ಯದ ಜನರ ಸಹಕಾರವನ್ನು ಕೋರುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದೆ ಮುಖ್ಯಮಂತ್ರಿಯಾಗಲಿ.. ಬಿ.ವೈ ವಿಜಯೇಂದ್ರ ಪದಗ್ರಹಣದ ಪೂರ್ಣಾಹುತಿ ಪೂಜೆಯಲ್ಲಿ ಪ್ರಾರ್ಥನೆ!

https://newsfirstlive.com/wp-content/uploads/2023/11/By-Vijayendra-7.jpg

Load More