newsfirstkannada.com

ಗಂಗಾ ನದಿಗೆ ಪದಕ ಎಸೆಯಲು ಮುಂದಾದ ಕುಸ್ತಿಪಟುಗಳ ಮನವೊಲಿಕೆ; 5 ದಿನಗಳ ಸಮಯಾವಕಾಶ

Share :

31-05-2023

    ಬ್ರಿಜ್ ಭೂಷಣ್ ಬಂಧನಕ್ಕೆ ಮಹಿಳಾ ಕುಸ್ತಿಪಟುಗಳ ಪಟ್ಟು

    ಗಂಗಾ ನದಿಗೆ ಪದಕ ಎಸೆಯಲು ಮುಂದಾದ ಕುಸ್ತಿಪಟುಗಳು

    5 ದಿನಗಳ ಸಮಯಾವಕಾಶ ಕೇಳಿದ ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ

ದೆಹಲಿ ಕುಸ್ತಿಪಟ್ಟುಗಳು ನಡೆಸುತ್ತಿರುವ ಹೊಸ ರೂಪ ಪಡೆಸಿದೆ. ಗಂಗಾನದಿಗೆ ಮೆಡಲ್​ಗಳನ್ನು ಎಸೆಯಲು ಹೋರಾಟಕ್ಕೆ ನರೇಶ್ ಟಿಕಾಯತ್ ಬ್ರೇಕ್​ ಹಾಕಿದ್ದಾರೆ. ಕುಸ್ತಿಪಟುಗಳಿಂದ ಪದಕಗಳನ್ನು ಪಡೆದು, ನ್ಯಾಯ ಒದಗಿಸಲು 5 ದಿನಗಳ ಕಾಲಾವಕಾಶ ಕೋರಿದ್ದಾರೆ. ಆದ್ರೆ ಇತ್ತ ತನಿಖೆ ನಡೆಯಲಿ.. ತಪ್ಪು ಕಂಡುಬಂದ್ರೆ ನನ್ನನ ಬಂಧಿಸಲಿ ಎಂದು ಬ್ರಿಜ್ ಭೂಷಣ್ ಸವಾಲ್​ ಹಾಕಿದ್ದಾರೆ. ತಳ್ಳಾಟ..ನೂಕಾಟ..ಕಿರುಚಾಟ.. ರಂಪಾಟ.. ಪರದಾಟಕ್ಕೆ ಮೊನ್ನೆ ದೆಹಲಿಯ ಜಂತರ್‌ಮಂತರ್ ಸಾಕ್ಷಿಯಾಗಿತ್ತು. ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳು ಪಾರ್ಲಿಮೆಂಟ್‌ಗೆ ಮೆರವಣಿಗೆ ಹೊರಟಿದ್ದವರನ್ನ ದೆಹಲಿ ಪೊಲೀಸರು ತಡೆದು ಎಳೆದೊಯ್ದಿದ್ರು. ಎಷ್ಟೇ ಪ್ರತಿಭಟನೆ ನಡೆಸಿದ್ರೂ ಕರಗದ ಕೇಂದ್ರಕ್ಕೆ ಪಾಠ ಕಲಿಸಲು ಕುಸ್ತಿಪಟುಗಳು ಮೆಡಲ್‌ಗಳನ್ನೇ ಎಸೆಯುವ ನಿರ್ಧಾರಕ್ಕೆ ಬಂದಿದ್ರು.

ಗಂಗಾನದಿಗೆ ಪದಕ ಎಸೆಯಲು ಬಂದಿದ್ದ ಕುಸ್ತಿಪಟುಗಳ ಮನವೊಲಿಕೆ

ನಿನ್ನೆ ಗಂಗೆಯ ಮಡಿಲಿನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದವರ ಕಣ್ಣೀರಿನ ಕೋಡಿ ಹರಿದಿತ್ತು.  ಹರಿದ್ವಾರ ಗಂಗಾನದಿಯ ಬಳಿ ಕುಸ್ತಿಪಟುಗಳು ವಿಭಿನ್ನ ಪ್ರತಿಭಟನೆಗೆ ಮುಂದಾಗಿದ್ರು. ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್​ ಭೂಷಣ್ ವಿರುದ್ಧ ಪೈಲ್ವಾನರು ತೊಡೆ ತಟ್ಟಿದ್ರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ತಾವು ಕಷ್ಟಪಟ್ಟು ವಿವಿಧ ಕ್ರೀಡಾಕೂಟಗಳಲ್ಲಿ ಗೆದ್ದಿದ್ದ ಮೆಡಲ್‌ಗಳನ್ನೇ ಗಂಗೆಗೆ ಅರ್ಪಿಸಲು ಮುಂದಾಗಿದ್ರು. ಗಂಗಾ ನದಿಯಲ್ಲಿ ಒಲಂಪಿಕ್ಸ್‌ ಪದಕ ಎಸೆಯಲು ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್, ಹಲವು ಕುಸ್ತಿಪಟುಗಳ ಮುಂದಾಗಿದ್ರು. ಇದೀಗ ಕುಸ್ತಿಪಟುಗಳ ಮನವೊಲಿಸುವಲ್ಲಿ ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಸಕ್ಸಸ್‌​ ಆಗಿದ್ದಾರೆ. 5 ದಿನಗಳ ಕಾಲಾವಕಾಶ ಕೇಳಿ ಪೈಲ್ವಾನ್ಸ್​ಗಳ ಮೆಡಲ್‌ಗಳನ್ನ ನರೇಶ್ ಟಿಕಾಯತ್‌  ಕಲೆಹಾಕಿದ್ದಾರೆ. ಟಿಕಾಯತ್ ನೀಡಿದ ಭರವಸೆ ಹಿನ್ನಲೆಯಲ್ಲಿ ಕುಸ್ತಿಪಟುಗಳು ಹೋರಾಟ ಕೈಬಿಟ್ಟು ಹರಿದ್ವಾರದಿಂದ ಮರಳಿದ್ದಾರೆ.

ತನಿಖೆ ನಡೆಯಲಿ.. ತಪ್ಪು ಕಂಡುಬಂದ್ರೆ ಬಂಧಿಸಲಿ

ಇನ್ನು ಕುಸ್ತಿಪಟುಗಳ ಪ್ರತಿಭಟನೆಗೆ ನಡೆಸ್ತಿದ್ರೆ, ಇತ್ತ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣದ ತನಿಖೆ ದೆಹಲಿ ಪೊಲೀಸರ ಕೈಯಲಿದೆ.. ತಪ್ಪು ಕಂಡುಬಂದರೆ ನನ್ನನ್ನ ಬಂಧಿಸಲಿ ಎಂಬ ಮಾತನ್ನಾಡಿದ್ದಾರೆ.

ಮುಂದೆ  ಏನಾಗುತ್ತೆ ಅಂತ ನೋಡಿ, ತನಿಖೆ ನಡೆಯಲಿ. ವಿಚಾರಣೆ ದೆಹಲಿ ಪೊಲೀಸರ ಕೈಯಲ್ಲಿದೆ. ತಪ್ಪು ಕಂಡುಬಂದರೆ, ಬಂಧನ ಮಾಡಲಿ. ಕುಸ್ತಿಪಟುಗಳ ಮನವಿಯಿಂದಲೇ ತನಿಖೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚು ಏನು ಮಾಡುವುದಕ್ಕೆ ಆಗುತ್ತೆ, ನಮ್ಮ ಕೆಲಸ ಮುಗಿದಿದೆ, ತನಿಖೆ ನಂತರ ಸತ್ಯ ಹೊರಬರುತ್ತೆ..

– ಬ್ರಿಜ್ ಭೂಷಣ್, ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ

ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ನೀಡಿದ ಕುಂಬ್ಳೆ

ಇನ್ನು ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಕ್ರಮ ಮತ್ತು ಬಂಧನದ ವಿರುದ್ಧ ಭಾರತದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರೋ ಕುಂಬ್ಳೆ ಕುಸ್ತಿಪಟುಗಳನ್ನ ದೆಹಲಿ ಪೊಲೀಸರು ನಡೆಸಿಕೊಂಡಿರೋ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.. ಅಲ್ಲದೇ ಸಮಸ್ಯೆಯನ್ನ ಮಾತುಕತೆ ಮೂಲಕ ಪರಿಹರಿಸಬಹುದು ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ಮೇ 28ರಂದು ನಮ್ಮ ಕುಸ್ತಿಪಟುಗಳ ಮೇಲೆ ನಡೆದ ಘಟನೆ ಬಗ್ಗೆ ಕೇಳಲು ತುಂಬಾ ಬೇಸರವಾಯಿತು. ಮಾತುಕತೆಯ ಮೂಲಕ ಸಮಸ್ಯೆಯನ್ನ ಬಗೆಹರಿಸುವ ವಿಶ್ವಾಸವಿದೆ.. ಇದು ಶೀಘ್ರ ಪರಿಹಾರಕ್ಕಾಗಿ ಆಶಿಸುತ್ತೇನೆ..

ಅನಿಲ್ ಕುಂಬ್ಳೆ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ

ನಿಗದಿತ ಸಮಯದಲ್ಲಿ ಚುನಾವಣೆ ನಡೆಸದಿದ್ದರೆ ಅಮಾನತು ಎಚ್ಚರಿಕೆ

ಅಂತಾರಾಷ್ಟ್ರೀಯ ಕುಸ್ತಿ ಆಡಳಿತ ಮಂಡಳಿ ಯುಡಬ್ಲ್ಯೂಡಬ್ಲ್ಯು ಕೂಡಾ ಭಾರತೀಯ ಕುಸ್ತಿ ಪಟುಗಳ ಪ್ರತಿಭಟನೆಯನ್ನ ಖಂಡಿಸಿದೆ. ನಿಗದಿತ ಸಮಯದೊಳಗೆ ಭಾರತೀಯ ಕುಸ್ತಿ ಫೆಡರೇಷನ್‌ ತನ್ನ ಚುನಾವಣೆಯನ್ನು ನಡೆಸಲು ವಿಫಲವಾದರೆ ಅಮಾನತುಗೊಳಿಸುವುದಾಗಿ ಯುಡಬ್ಲ್ಯೂಡಬ್ಲ್ಯು ಎಚ್ಚರಿಕೆ ನೀಡಿದೆ. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ ನಡೆಯನ್ನ ಖಂಡಿಸಿದೆ.

ಒಟ್ಟಾರೆ ಕುಸ್ತಿಪಟ್ಟುಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇಡೀ ವಿಶ್ವದ ಮುಂದೆ ಭಾರತದ ಕುಸ್ತಿಪಟುಗಳ ಕಣ್ಣೀರಿನ ಕಥೆ ತೆರೆದುಕೊಂಡಿದೆ.. ಇಷ್ಟೆಲ್ಲಾ ಆದ್ರೂ ಬ್ರಿಜ್‌ಭೂಷಣ್ ಶರಣ್‌ ಸಿಂಗ್‌ನ ಬಂಧಿಸದೇ ಇರೋದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಗಾ ನದಿಗೆ ಪದಕ ಎಸೆಯಲು ಮುಂದಾದ ಕುಸ್ತಿಪಟುಗಳ ಮನವೊಲಿಕೆ; 5 ದಿನಗಳ ಸಮಯಾವಕಾಶ

https://newsfirstlive.com/wp-content/uploads/2023/05/Wrestlers-1.webp

Load More