newsfirstkannada.com

ಈ ಸ್ಟೋರಿ ಓದಿದ ಮೇಲೆ ಕೊಹ್ಲಿ-ಶರ್ಮಾ ಮೇಲಿನ ನಿಮ್ಮ ಅಭಿಪ್ರಾಯವೇ ಬದಲಾಗಬಹುದು..!

Share :

10-06-2023

    ರೋಹಿತ್-ಕೊಹ್ಲಿ ನಂಬಿ ಕೆಟ್ಟಿದ್ದು ಇದೇ ಮೊದಲಲ್ಲ

    ICC ಟೂರ್ನಿಗಳ ಮುಖಭಂಗಕ್ಕೆ ಕಾರಣ ಇವರೇ

    ಇಬ್ಬರದ್ದೂ ಅದೇ ಕಥೆ, ಅದೇ ವ್ಯಥೆ

ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ. ಇವರಿಬ್ಬರೂ ಟೀಂ​ ಇಂಡಿಯಾ ಮ್ಯಾಚ್​ ವಿನ್ನರ್ಸ್​​. ಎಂತಹ ಒತ್ತಡದಲ್ಲಿ ಬೇಕಾದ್ರೂ ಬೌಲರ್​ಗಳ ಬೆಂಡೆತ್ತಿ ರನ್​ಗಳಿಸ್ತಾರೆ ಅನ್ನೋ ಮಾತಿದೆ. ನೀವೂ ಕೂಡ ಈ ಮಾತನ್ನ ಒಪ್ಪಬಹುದು. ಆದ್ರೆ ಅಸಲಿ ಸತ್ಯ ಬೇರೆನೇ ಇದೆ. ಈ ಸ್ಟೋರಿ ಓದಿದ ಮೇಲೆ ನಿಮ್ಮ ಅಭಿಪ್ರಾಯನೂ ಬದಲಾಗಬಹುದು.

ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್​ ಫೈನಲ್​ ಫೈಟ್​ನಲ್ಲಿ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಐಸಿಸಿ ಟ್ರೋಫಿ ಬರಕ್ಕೆ ಈ ಬಾರಿ ಬ್ರೇಕ್​ ಬೀಳುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್​ ಮತ್ತೆ ಹತಾಶೆಗೆ ಸಿಲುಕಿದ್ದಾರೆ. ಟೀಮ್​ ಇಂಡಿಯಾ ಯಾವುದೇ ಬಿಗ್​ಮ್ಯಾಚ್​ ಆಡಲಿ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮೇಲೆ ಅಪಾರ ನಿರೀಕ್ಷೆ ಇರುತ್ತೆ. ಬಿಗ್​ಸ್ಟೇಜ್​, ಬಿಗ್​ಮ್ಯಾಚ್​​ಗಳಲ್ಲಿ ಹೈ-ಪ್ರೆಶರ್​ ಇದ್ರೂ ಇವರಿಬ್ಬರೂ ಪರ್ಫಾಮ್​ ಮಾಡ್ತಾರೆ ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ. ಹಿಂದೊಮ್ಮೆ ಈ ಮಾತು ಸತ್ಯವಾಗಿತ್ತು ಕೂಡ. ಆದ್ರೆ, ಇತ್ತೀಚಿನ ದಿನಗಳಲ್ಲಿ ಈ ಮಾತು ಸುಳ್ಳಾಗಿದೆ.

ICC ಟೂರ್ನಿಗಳ ಮುಖಭಂಗಕ್ಕೆ ಕೊಹ್ಲಿ, ರೋಹಿತ್​ ಕಾರಣ

ಟೀಮ್​ ಇಂಡಿಯಾ ವಿಶ್ವದ ಬಲಿಷ್ಠ ತಂಡ ಅನ್ನೋದ್ರಲ್ಲಿ ನೋ ಡೌಟ್​. ಆದ್ರೆ ಈ ಮಾತು ಕೇವಲ ದ್ವಿಪಕ್ಷೀಯ ಸರಣಿಗಳಿಗೆ ಮಾತ್ರ ಸೀಮಿತ. ಟೀಮ್​ ಇಂಡಿಯಾ ಅಸಲಿ ಕಥೆ ರಿವೀಲ್​ ಆಗೋದೇ ಐಸಿಸಿ ಟೂರ್ನಿಗಳಲ್ಲಿ. ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಗೆಲ್ಲೋಕೆ ಪರದಾಡ್ತಿರೋದಕ್ಕಿಂತ ಬೇರೆ ಎಕ್ಸಾಂಪಲ್​ ಬೇಕಾ? ಈ ಹೀನಾಯ ಮುಖಭಂಗಗಳಿಗೆಲ್ಲಾ ರೋಹಿತ್​ ಶರ್ಮಾ-ವಿರಾಟ್​ ಕೊಹ್ಲಿ ಮುಖ್ಯ ಕಾರಣವಾಗಿದ್ದಾರೆ.

ಫೈನಲ್​ನಲ್ಲಿ​ ತಡಕಾಡಿದ ರೋಹಿತ್​​, ಕೈಕೊಟ್ಟ ಕೊಹ್ಲಿ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ ಪಂದ್ಯ ರೋಹಿತ್​, ಕೊಹ್ಲಿಯ ಅಸಲಿ ಆಟಕ್ಕೆ ತಾಜಾ ಉದಾಹರಣೆ. ಆಸಿಸ್​​​ ಬೌಲರ್​ಗಳ ಎದುರು ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್ಸ್​ ಅನಿಕೊಂಡಿರೋ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ತಡಕಾಡಿದ್ರು. ಮಹತ್ವದ ಪಂದ್ಯದಲ್ಲಿ ಮಾಜಿ ನಾಯಕ – ಹಾಲಿ ನಾಯಕ ಜವಾಬ್ದಾರಿಯುತ ಆಟ ಆಡ್ತಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿತ್ತು.

ರೋಹಿತ್​-ಕೊಹ್ಲಿ ನಂಬಿ ಕೆಟ್ಟಿದ್ದು ಇದೇ ಮೊದಲಲ್ಲ

ನಡೀತಿರೋ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಮಾತ್ರವಲ್ಲ. ಈ ಹಿಂದೆಯೂ ಐಸಿಸಿ ನಾಕೌಟ್​ ಪಂದ್ಯಗಳಲ್ಲಿ ಕಿಂಗ್​ ಕೊಹ್ಲಿ-ಹಿಟ್​ಮ್ಯಾನ್​ ರೋಹಿತ್​ ಆಟ ತೀವ್ರ ಕಳಪೆಯಾಗಿದೆ. ಯಾರನ್ನು ನಾವು ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್ಸ್​ ಅಂದ್ಕೊಡಿದ್ದೇವೋ ಅವರ ಅಸಲಿ ಆಟ ಬೇರೆನೇ ಇದೆ. ಇದನ್ನ ಅಂಕಿ-ಅಂಶಗಳೇ ಬಿಚ್ಚಿಟ್ಟಿವೆ.

2017ರ ಬಳಿಕ ಕೊಹ್ಲಿ ಖದರ್​ ಮಾಯ

ವಿರಾಟ್​ ಕೊಹ್ಲಿ ಒಬ್ಬ ಛಲದಂಕಮಲ್ಲ.. ಅಸಾಧ್ಯವಾದುದನ್ನ ಸಾಧಿಸೋ ಸಾಧಕ ಎಂದೆಲ್ಲಾ ನೋಡಿದ್ದೀವಿ. ಆದ್ರೆ, ಕೊಹ್ಲಿಯ ಇನ್ನೊಂದು ವರ್ಶನ್​ ಬೇರೆನೇ ಇದೆ. ವಿರಾಟ್​ ಕೊಹ್ಲಿ ನೀರು ಕುಡಿದಷ್ಟು ಸುಲಭಕ್ಕೆ ಬೌಂಡರಿ-ಸಿಕ್ಸರ್​ ಸಿಡಿಸಿ, ಟನ್​ಗಟ್ಟಲೇ ರನ್​​ಗಳಿಸಿದ್ದಾರೆ. ಅದೆಷ್ಟೋ ಪಂದ್ಯಗಳ ಗೆಲುವಿನ ರೂವಾರಿಯೂ ಆಗಿದ್ದಾರೆ. ಆದ್ರೆ ಇದೇ ಐಸಿಸಿ ನಾಕೌಟ್​ ಪಂದ್ಯಗಳ ವಿಚಾರಕ್ಕೆ ಬಂದ್ರೆ, ESPECIALLY 2017ರ ಬಳಿಕ ನೀವು ನಂಬೋದು ಇಲ್ಲ.

2017ರ ಬಳಿಕ ನಾಕೌಟ್​​ ಪಂದ್ಯಗಳಲ್ಲಿ ಕೊಹ್ಲಿ

2017ರ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಕೊಹ್ಲಿ 5 ರನ್​ಗಳಿಸಿ ಔಟಾಗಿದ್ರು. 2019ರ ಏಕದಿನ ವಿಶ್ವಕಪ್​ ಸೆಮಿಸ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಕೊಹ್ಲಿ ಆಟ 1 ರನ್​ಗೆ ಅಂತ್ಯವಾಗಿತ್ತು. ಕಳೆದ ಸೀಸನ್​ನ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನ 2 ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 57 ರನ್​. ಕಳೆದ ವರ್ಷ ನಡೆದ ಇಂಗ್ಲೆಂಡ್​ ಎದುರಿನ ಟಿ20 ವಿಶ್ವಕಪ್​ ಫೈನಲ್​ನಲ್ಲಿ 50 ರನ್​ ಸಿಡಿಸಿದ್ರು.

ರೋಹಿತ್​ದೂ ಅದೇ ಕಥೆ, ಅದೇ ವ್ಯಥೆ

ವಿರಾಟ್​ ಕೊಹ್ಲಿ ಮಾತ್ರವಲ್ಲ, ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಕಥೆನೂ ಇದೆ. ಐಸಿಸಿ ನಾಕೌಟ್​​ ಪಂದ್ಯಗಳಲ್ಲಿ ಮುಂಬೈಕರ್ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ದಾರೆ. ಆಡಿದ ಕಳೆದ 6 ಐಸಿಸಿ ನಾಕೌಟ್​ ಪಂದ್ಯಗಳಲ್ಲಂತೂ ಹೀನಾಯ ಪ್ರದರ್ಶನ ನೀಡಿದ್ದಾರೆ.

2017ರ ಬಳಿಕ ನಾಕೌಟ್​​ ಪಂದ್ಯಗಳಲ್ಲಿ ರೋಹಿತ್

2017ರ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ರೋಹಿತ್​ ಮಾಡಿದ್ದು ಶೂನ್ಯ ಸಾಧನೆ. ನಂತರದ 2019ರ ಏಕದಿನ ವಿಶ್ವಕಪ್​ ಸೆಮಿಸ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ರೋಹಿತ್​ 1 ರನ್​ಗೆ ಪೆವಿಲಿಯನ್​ ಸೇರಿದ್ರು. ಕಳೆದ ಸೀಸನ್​ನ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನ 2 ಇನ್ನಿಂಗ್ಸ್​ಗಳಿಂದ 64 ರನ್​ಗಳಿಸಿದ್ರು. ಕಳೆದ ವರ್ಷ ನಡೆದ ಇಂಗ್ಲೆಂಡ್​ ಎದುರಿನ ಟಿ20 ವಿಶ್ವಕಪ್​ ಫೈನಲ್​ನಲ್ಲಿ 15 ರನ್​ಗಳಿಗೆ ಕೊಹ್ಲಿ ಆಟ ಅಂತ್ಯವಾಗಿತ್ತು.
ಇದು ಟೀಮ್​ ಇಂಡಿಯಾದ ಬಿಗ್​ ಪ್ಲೇಯರ್​ಗಳ ಅಸಲಿ ಆಟ. ಇವರಿಬ್ಬರು ಅನುಭವಿಗಳು, ಮಹತ್ವದ ಪಂದ್ಯಗಳಲ್ಲಿ ಒತ್ತಡವನ್ನ ಹಿಮ್ಮೆಟ್ಟಿಸಿ ಆಡ್ತಾರೆ ಅನ್ನೋದು ಇವರ ಮೇಲಿರೋ ನಿರೀಕ್ಷೆ. ಆದ್ರೆ ಇವರ ಆಟದ ಅಸಲಿಯತ್ತೇ ಬೇರೇ ಇದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಈ ಸ್ಟೋರಿ ಓದಿದ ಮೇಲೆ ಕೊಹ್ಲಿ-ಶರ್ಮಾ ಮೇಲಿನ ನಿಮ್ಮ ಅಭಿಪ್ರಾಯವೇ ಬದಲಾಗಬಹುದು..!

https://newsfirstlive.com/wp-content/uploads/2023/06/VIRAT_ROHITH.jpg

Load More