newsfirstkannada.com

WTC Final: ಟೀಮ್​ ಇಂಡಿಯಾದ ಸೋಲಿಗೆ ಮುಖ್ಯ ಕಾರಣ ಈ ಸ್ಟಾರ್ ಆಟಗಾರರು..!

Share :

12-06-2023

    ಟೆಸ್ಟ್​ನಲ್ಲೂ ಆಸ್ಟ್ರೇಲಿಯಾ ಚಾಂಪಿಯನ್

    ರೋಹಿತ್ ಪಡೆಗೆ 209 ರನ್​ಗಳ ಸೋಲು

    ಭಾರತದ ಸೋಲಿಗೆ ಭಾರೀ ಆಕ್ರೋಶ

ಹೇಳಿಕೊಳ್ಳೋಕೆ ಇವ್ರು ಬಿಗ್​ ಪ್ಲೇಯರ್ಸ್​​. ಭಾರತ ಮಾತ್ರವಲ್ಲ.. ಕ್ರಿಕೆಟ್​ ಲೋಕಕ್ಕೆ ಇವರು ಸೂಪರ್​ ಸ್ಟಾರ್​ಗಳು. ಆದ್ರೆ ಇವ್ರ ಆಟವನ್ನು ಆ ದೇವರೇ ಮೆಚ್ಚಬೇಕು. ಟೀಮ್​ ಇಂಡಿಯಾದ ಅಭಿಮಾನಿಗಳಂತೂ ಒಪ್ಪಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ​ ಭಾರತದ ಸೋಲಿಗೆ ಇವ್ರ ಅಟ್ಟರ್​ಪ್ಲಾಫ್​ ಶೋನೆ ಮೇನ್​ ರೀಸನ್​.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಟೀಮ್​ ಇಂಡಿಯಾ ಮಕಾಡೆ ಮಲಗಿದೆ. ದಿ ಓವಲ್​ ಮೈದಾನದಲ್ಲಿ ಆಡಿದ ಐದೂ ದಿನವೂ ಸತತ ಹಿನ್ನಡೆ ಅನುಭವಿಸಿದ ರೋಹಿತ್​ ಪಡೆಯ ಚಾಂಪಿಯನ್​ ಪಟ್ಟಕ್ಕೇರೋ ಕನಸು ಭಗ್ನವಾಗಿದೆ. ಆಸಿಸ್​ ಕ್ಯಾಂಪ್​​ ಸಂತಸದ ಕಡಲಲ್ಲಿ ತೇಲ್ತಿದ್ರೆ, ಟೀಮ್​ ಇಂಡಿಯಾದಲ್ಲಿ ಸೋಲಿಗೆ ಕಾರಣಗಳ ಹುಡುಕಾಟ ನಡೀತಾ ಇದೆ. ನೋ ಡೌಟ್​ ಸೋಲಿಗೆ ಕಾರಣ ಹಲವಿವೆ.. ಮೇನ್​ ರೀಸನ್ ಒಂದೇ..​ ಅದೇ.., ಸೂಪರ್​ ಸ್ಟಾರ್​​ಗಳ ಅಟ್ಟರ್​ಪ್ಲಾಫ್​ ಶೋ.

ನಾಯಕನದ್ದೇ ಹೀನಾಯ ಆಟ, ಇನ್ಯಾರಿಗ್​ ಹೇಳೋದು?

ಕ್ಯಾಪ್ಟನ್ ಅಫ್ ದ ಶಿಪ್..​ ಮುಂದೆ ನಿಂತು ತಂಡವನ್ನ ಮುನ್ನಡೆಸಬೇಕಾದ ರೋಹಿತ್​ ಶರ್ಮಾನೇ ಓವಲ್​ ಅಖಾಡದಲ್ಲಿ ಎಡವಿದ್ರು. ನಾಯಕನಾಗಿ ಜವಾಬ್ದಾರಿಯುತವಾಗಿ ಆಡಬೇಕಾಗಿದ್ದ ಹಿಟ್​ಮ್ಯಾನ್​ ಅಖಾಡದಲ್ಲಿ ನೀಡಿದ್ದು ಹೀನಾಯ ಪ್ರದರ್ಶನ. ಮೊದಲ ಇನ್ನಿಂಗ್ಸ್​​ನಲ್ಲಿ 15 ರನ್​ಗಳಿಗೆ ಆಟ ನಿಲ್ಲಿಸಿದ್ರೆ, 2ನೇ ಇನ್ನಿಂಗ್ಸ್​ನಲ್ಲಿ ಒಳ್ಳೆ ಸ್ಟಾರ್ಟ್​ ಪಡೆದುಕೊಂಡು 43 ರನ್​ಗಳಿಸಿದ್ರು. ಹೀಗಿದ್ದೂ ಬಿಗ್​ ಸ್ಕೋರ್​​ ಕಲೆ ಹಾಕುವಲ್ಲಿ ಎಡವಿದರು.
ರೆಡ್​​ಬಾಲ್​ನಲ್ಲಿ ತಡವರಿಸಿದ ಗಿಲ್

ಐಪಿಎಲ್​ನಲ್ಲಿ ಶತಕದ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದ ಶುಭ್​ಮನ್ ಗಿಲ್​, ರೆಡ್​ಬಾಲ್​ ಎದುರಿಸೋಕೆ ಪರದಾಡಿದ್ರು. 2ನೇ ಇನ್ನಿಂಗ್ಸ್​ನಲ್ಲಿ ಕಾಂಟ್ರವರ್ಸಿಯಲ್​ ಆಗಿ ಔಟಾದ್ರು ನಿಜ. ಆದ್ರೆ ಮೊದಲ ಇನ್ನಿಂಗ್ಸ್​ನಲ್ಲಿ ಏನ್​ ಮಸ್ತ್​​ ಆಟ ಆಡ್ಲಿಲ್ಲ. ಬಾಲ್​ ಜಡ್ಜ್​ ಮಾಡೋಕೆ ತಿಣುಕಾಡಿದ ಶುಭ್​ಮನ್​, ತಾವೇ ವಿಕೆಟ್​ ಗಿಫ್ಟ್​ ಕೊಟ್ಟರು.

ಆಸಿಸ್​ ಬೋನಿಗೆ ಸಲೀಸಾಗಿ ಬಿದ್ದ ಕೊಹ್ಲಿ

ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿ ಮೇಲೆ ನಿರೀಕ್ಷೆ ದುಪ್ಪಟ್ಟಿತ್ತು. ಆದ್ರೆ ಆಗಿದ್ದು ಮತ್ತದೇ ನಿರಾಸೆ. ಮೊದಲ ಇನ್ನಿಂಗ್ಸ್​ನಲ್ಲಿ 14 ರನ್​ಗಳಿಗೆ ಪೆವಿಲಿಯನ್​ ಸೇರಿದ ವಿರಾಟ್​, 2ನೇ ಇನ್ನಿಂಗ್ಸ್​ನಲ್ಲಿ ಕಮಾಲ್​ ಮಾಡೋ ಸೂಚನೆ ನೀಡಿದ್ರು. ಆದ್ರೆ 5ನೇ ದಿನ ಆರಂಭದಲ್ಲೇ ನಿರೀಕ್ಷೆ ಠುಸ್​ ಪಟಾಕಿಯಾಯ್ತು. ಆಸ್ಟ್ರೇಲಿಯಾದ ಬೋನಿಗೆ ಸಲೀಸಾಗಿ ಬಿದ್ದ, ಕೊಹ್ಲಿ ಸೈಲೆಂಟಾಗಿ ಪೆವಿಲಿಯನ್​ ಸೇರಿಕೊಂಡರು.

ಟೆಸ್ಟ್​ ಸ್ಪೆಷಲಿಸ್ಟ್​​ ಪೂಜಾರ, ಏನಪ್ಪಾ ನಿನ್ನ ಆಟ

ನಾವಲ್ಲ.. ಸೋಷಿಯಲ್​ ಮೀಡಿಯಾಗಳಲ್ಲಿ ಫ್ಯಾನ್ಸ್​ ಹೇಳ್ತಿರೋ ಮಾತಿದು.. ಟೆಸ್ಟ್​ ಸ್ಪೆಷಲಿಸ್ಟ್​ ಅನ್ನೋ ಟ್ಯಾಗ್​ಲೈನ್ ಇಟ್ಟುಕೊಂಡಿರೋ ಚೇತೇಶ್ವರ್​​ ಪೂಜಾರ ಅಲ್ಟಿಮೇಟ್​ ಟೆಸ್ಟ್​ನಲ್ಲಿ ವೈಫಲ್ಯ ಅನುಭವಿಸಿದ್ರು. ಹೋದ ಪುಟ್ಟ ಬಂದ ಪುಟ್ಟ ಎಂಬ ಮಾತಿನಂತೆ ಪ್ಯಾಡ್​ ಕಟ್ಟಿ ಕಣಕ್ಕಿಳಿದಷ್ಟೇ ವೇಗವಾಗಿ ಪೆವಿಲಿಯನ್​ಗೆ ವಾಪಾಸ್ಸಾದ್ರು.

ನಿಮ್ಮ ಆಟ ಸಾಕಾಯ್ತು

ಈ ಸೋಲಿನ ಬಳಿಕವಾದ್ರೂ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಎಚ್ಚೆತ್ತುಕೊಳ್ಳಬೇಕಿದೆ. ಶುಭಮನ್​ ಗಿಲ್​ ಇನ್ನೂ ಯಂಗ್​ಪ್ಲೇಯರ್​, ಟ್ಯಾಲೆಂಟ್​ ಕೂಡ ಇದೆ ಅವರು ತಂಡಕ್ಕೆ ಬೇಕು. ಆದ್ರೆ ಉಳಿದ ಸೀನಿಯರ್​ ಆಟಗಾರರ ಕಥೆ ಏನು? ತಂಡಕ್ಕೆ ಅನುಭವಿಗಳ ಅಗತ್ಯವಿರೋದೆ ಬಿಗ್​ಮ್ಯಾಚ್, ಬಿಗ್​ಸ್ಟೇಜ್​ನಲ್ಲಿ ಆಡ್ತಾರೆ ಅಂತ. ಆದ್ರೆ ಐಸಿಸಿ ಇವೆಂಟ್​ಗಳಲ್ಲಿ ಈ ಅನುಭವಿಗಳೇ ಮಕಾಡೆ ಮಲಗ್ತಿದ್ದಾರೆ. ಹೀಗಾಗಿ, ಟೀಮ್​ ಇಂಡಿಯಾಗೆ ಸರ್ಜರಿ ಮಾಡೋಕೆ ಇದೇ ಬೆಸ್ಟ್​ ಟೈಂ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

WTC Final: ಟೀಮ್​ ಇಂಡಿಯಾದ ಸೋಲಿಗೆ ಮುಖ್ಯ ಕಾರಣ ಈ ಸ್ಟಾರ್ ಆಟಗಾರರು..!

https://newsfirstlive.com/wp-content/uploads/2023/06/Team-India.jpg

Load More