newsfirstkannada.com

WTC Final INDvsAUS: ಕೊಹ್ಲಿಯ ಈ ವಿಚಾರ ಕೇಳಿಸಿಕೊಂಡು ಆಸಿಸ್ ದಿಗ್ಗಜ​ ತಂಡಕ್ಕೆ ಕೊಟ್ರು ಎಚ್ಚರಿಕೆ! ಅದೇನದು?

Share :

07-06-2023

    ಟೀಂ ಇಂಡಿಯಾದ ರಣಬೇಟೆಗಾರ ಇವರೇ

    ಕೊಹ್ಲಿ ಮೇಲಿದೆ ಆಸಿಸ್​ ಕ್ರಿಕೆಟಿಗರ ಹದ್ದಿನ ಕಣ್ಣು

    ಇಂಗ್ಲೆಂಡ್​ ನೆಲದಲ್ಲಿ ಘರ್ಜಿಸಲಿದ್ದಾರಾ ವಿರಾಟ್​

ದಿ ಓವಲ್​ ರಣಾಂಗಣದಲ್ಲಿ ರಣಕಲಿಗಳ ನಡುವಿನ ಕಾದಾಟಕ್ಕೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಫೈನಲ್​ ಫೈಟ್​ನ ಅಖಾಡಕ್ಕೆ ಎರಡೂ ತಂಡಗಳಿಂದ 22 ಮಂದಿ ರಣಕಲಿಗಳು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ, ಅತಿ ಹೆಚ್ಚು ಸದ್ದು ಮಾಡ್ತಿರೋದು ಮಾತ್ರ ಒಬ್ಬನೇ. ಅದೇ ಒನ್​ ಆ್ಯಂಡ್​​ ಒನ್ಲಿ ಕಿಂಗ್​ ಕೊಹ್ಲಿ!.

ದಿ ಅಲ್ಟಿಮೆಟ್​ ಟೆಸ್ಟ್​ ಫೈಟ್​ಗೆ ಕೆಲವೇ ಗಂಟೆಗಳು ಬಾಕಿ. ಇಂದು ಮಧ್ಯಾಹ್ನ ದಿ ಓವಲ್​ ಅಖಾಡದಲ್ಲಿ ಆರಂಭವಾಗಲಿರೋ ಕದನದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಲು ವಿಶ್ವದ ಬಲಿಷ್ಠ ತಂಡಗಳು ಸಜ್ಜಾಗಿವೆ. ಉಭಯ ತಂಡಗಳು ವಿಶ್ವದ ಟೆಸ್ಟ್​ ಚಾಂಪಿಯನ್​ ಆಗೋ ಕನವರಿಕೆಯಲ್ಲಿವೆ. ಆದ್ರೆ, ಫ್ಯಾನ್ಸ್​ ಚಿತ್ತ ಮಾತ್ರ ಕಿಂಗ್​​ ಕೊಹ್ಲಿಯ ಮೇಲಿದೆ.

ರಿಯಲ್ಕ್ರಿಕೆಟ್ಆಡಲು ರಣಬೇಟೆಗಾರ ರೆಡಿ.!

ಟೆಸ್ಟ್​ ಕ್ರಿಕೆಟ್​, ಕ್ರಿಕೆಟ್​ ಫ್ಯೂರೆಸ್ಟ್​ ಫಾರ್ಮೆಟ್​​ ವಿರಾಟ್​ ಕೊಹ್ಲಿಯ ಫೇವರಿಟ್​ ಫಾರ್ಮೆಟ್​!. ರೆಡ್​ ಹಾಟ್​​ ಫಾರ್ಮ್​ನಲ್ಲಿ ಐಪಿಎಲ್​ ಟೂರ್ನಿಯಲ್ಲಿ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ, ಇದೀಗ ರೆಡ್​​ ಬಾಲ್​ ಮೂಡ್​ಗೆ ಶಿಫ್ಟ್​​ ಆಗಿದ್ದಾರೆ. ಕಳೆದ ಕೆಲ ದಿನಗಳಿಂದ ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸ ನಡೆಸಿರೋ ಕೊಹ್ಲಿ, ಫೈನಲ್​ ಫೈಟ್​​ನಲ್ಲಿ ಆರ್ಭಟಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಆಸಿಸ್​​ ಪಡೆಯನ್ನ ಕಿಂಗ್ಕೊಹ್ಲಿ ಕಾಡೋದು ಫಿಕ್ಸ್..!

‘ವಿರಾಟ್​ ಕೊಹ್ಲಿ ಕಳೆದ ಕೆಲ ವಾರದಿಂದ ತಮ್ಮ ಬೆಸ್ಟ್​ ಫಾರ್ಮ್​ಗೆ ಮರಳಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ನೋಡಿದ್ದೇವೆ. ನಾನು ಅವರ ಜೊತೆ ಕೆಲವು ವಾರಗಳ ಹಿಂದೆ ಮಾತನಾಡಿದಾಗ, ನಾನು ನನ್ನ ಫಾರ್ಮ್​ಗೆ ಮರಳಿದ್ದೇನೆ ಎಂದು ಹೇಳಿದ್ರು. ಇದು ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯನ್ನರಿಗೆ ಎಚ್ಚರಿಕೆ’

ಆಸಿಸ್​ ದಿಗ್ಗಜ ರಿಕಿ ಪಾಂಟಿಂಗ್​ ತಮ್ಮ ತಂಡಕ್ಕೆ ಕೊಡ್ತಿರೋ ಎಚ್ಚರಿಕೆಯಿದು. ಫಾರ್ಮ್​ ಸಮಸ್ಯೆ ಎದುರಿಸಿ ಕರಾಳ ದಿನಗಳನ್ನ ಕಳೆದು ಇದೀಗ ರಿಯಲ್​ ಖದರ್​ಗೆ ಮರಳಿರೋ ಕೊಹ್ಲಿ, ಅಸಾಧ್ಯ ಆತ್ಮವಿಶ್ವಾಸದಲ್ಲಿದ್ದಾರೆ ಅನ್ನೋದು ಪಾಂಟಿಂಗ್​ ಅಭಿಪ್ರಾಯವಾಗಿದೆ. ಅದಲ್ಲದೇ ಈ ಹಿಂದೆ ಆಸಿಸ್ ವಿರುದ್ಧ ಕೊಹ್ಲಿ ಕಟ್ಟಿದ್ದ ಜಬರ್ದಸ್ತ್​ ಇನ್ನಿಂಗ್ಸ್​ಗಳು ಪಾಂಟಿಂಗ್​ ಬಾಯಿಯಿಂದ ಈ ಮಾತು ಹೊರಡುವಂತೆ ಮಾಡಿದೆ.

ಆಸಿಸ್ವಿರುದ್ಧ ಕಾದಾಡಲು ಕೊಹ್ಲಿ ಸದಾ ಸಿದ್ಧ.!

ಬಿಗ್​ ಸ್ಟೇಜ್​ನಲ್ಲಿ ಹೈ ಪ್ರೆಶರ್​ನಲ್ಲಿ ಪರ್ಫಾಮ್​ ಮಾಡೋದೆ ಕೊಹ್ಲಿ ಸ್ಟ್ರೆಂಥ್​.! ಅದರಲ್ಲೂ, ಆಸಿಸ್​ ವಿರುದ್ಧ ಅಂದ್ರೆ, ಕೊಹ್ಲಿ ಗೆಲುವಿಗೆ ಟೊಂಕ ಕಟ್ಟಿ ನಿಲ್ತಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಅಂದ್ರೆ, ಕೊಹ್ಲಿಯ ಅಪ್ರೋಚ್​ ಬೇರೆನೆ ಇರುತ್ತೆ. ಕಾಂಗರೂಗಳನ್ನ ಕಾಡಿ ರನ್​ಗಳಿಸ ಬೇಕು ಅನ್ನೋದಷ್ಟೇ ರನ್​ಮಷೀನ್​ ಏಕೈಕ ಗುರಿಯಾಗಿರುತ್ತೆ. ನಾವಲ್ಲ, ಈ ಹಿಂದಿನ ಟೀಮ್​ ಇಂಡಿಯಾ ಕೋಚ್​ ರವಿ ಶಾಸ್ತ್ರಿಯೇ ಹೇಳಿರೋ ಮಾತಿವು.

20 ರನ್​ ಗಡಿ ದಾಟಿದ್ರೆ ಕಟ್ಟಿ ಹಾಕೋರೆ ಇಲ್ಲ.!

ರವಿ ಶಾಸ್ತ್ರಿ ಹೇಳಿದಂತೆ 20 ರನ್​ಗಳ ಗಡಿ ದಾಟಿದ ಮೇಲೆ ಕೊಹ್ಲಿಯನ್ನ ಕಟ್ಟಿಹಾಕೋದು ಸುಲಭದ ಮಾತು ಅಲ್ಲವೇ ಅಲ್ಲ. ಸೆಟಲ್​ ಆಗಿ ಬ್ಯಾಟಿಂಗ್​ ನಡೆಸೋಕೆ ಆರಂಭಿಸಿದ್ರೆ, ಲೀಲಾಜಾಲವಾಗಿ ರನ್​ಗಳಿಸ್ತಾರೆ. ಎದುರಾಳಿಗಳು ಎಷ್ಟೇ ಪ್ರಯತ್ನಪಡಲಿ. ರಣತಂತ್ರ ರೂಪಿಸಲಿ. ಸ್ಲೆಡ್ಜ್​ ಮಾಡ್ಲಿ ಡೋಂಟ್​​ಕೇರ್​. ಎದುರಾಳಿಗಳ ಪಾಳಯದಲ್ಲಿ ಅಸಮಾಧಾನ ಹೆಚ್ಚಾದಷ್ಟು ಕೊಹ್ಲಿ ಬ್ಯಾಟ್​ನಿಂದ ರನ್​ ಸುರಿಮಳೆ ಸುರಿಯುತ್ತೆ.

ಆಸ್ಟ್ರೇಲಿಯಾದಲ್ಲಿ ವಿರಾಟ ರೂಪ, ಇಂಗ್ಲೆಂಡ್​ನಲ್ಲಿ..?

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡೋದಕ್ಕೆ ಘಟಾನುಘಟಿ ಆಟಗಾರರೇ ಬೆಚ್ಚಿ ಬೀಳ್ತಾರೆ. ಫಾಸ್ಟ್​ & ಬೌನ್ಸಿ ಟ್ರ್ಯಾಕ್​ನಲ್ಲಿ ರನ್​ಗಳಿಸೋಕೆ ಪರದಾಡ್ತಾರೆ. ಆದ್ರೆ, ಕೊಹ್ಲಿ ಆಸಿಸ್​ ನೆಲದಲ್ಲಿ ಕನ್ಸಿಸ್ಟೆಂಟ್​ ಆಗಿ ರನ್​​ಗಳಿಸಿದ್ದಾರೆ. 54.08ರ ಸರಾಸರಿಯಲ್ಲಿ ರನ್​ಗಳಿಸಿದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ನ ಪ್ಲೇಯಿಂಗ್​ ಕಂಡಿಷನ್​ ಬಹುತೇಕ ಒಂದೆ ಆಗಿರೋದ್ರಿಂದ ಇಲ್ಲೂ ವಿರಾಟ ರೂಪ ದರ್ಶನವಾಗಲಿದೆ. ಯಾಕಂದ್ರೆ, ಆಂಗ್ಲರ ನಾಡಲ್ಲೂ ಕೊಹ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ. ​

ಸದ್ಯ ರೆಡ್​ ಹಾಟ್​​ ಫಾರ್ಮ್​ನಲ್ಲಿ ಮಿಂಚ್ತಾ ಇರೋ ಕೊಹ್ಲಿ ಮುಂದೆ ಸದ್ಯ ಹೊಸ ಸವಾಲಿದೆ. ಈ ಸವಾಲಿನಲ್ಲೂ ಕೊಹ್ಲಿ ಜಯಸಲಿ.. ಭಾರತ ಗೆದ್ದು ಟೆಸ್ಟ್​ ಚಾಂಪಿಯನ್​ ಆಗಲಿ ಅನ್ನೋದೇ ಅಸಂಖ್ಯ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WTC Final INDvsAUS: ಕೊಹ್ಲಿಯ ಈ ವಿಚಾರ ಕೇಳಿಸಿಕೊಂಡು ಆಸಿಸ್ ದಿಗ್ಗಜ​ ತಂಡಕ್ಕೆ ಕೊಟ್ರು ಎಚ್ಚರಿಕೆ! ಅದೇನದು?

https://newsfirstlive.com/wp-content/uploads/2023/06/Kohli-8.jpg

Load More