ಇಂದಿನಿಂದ INDvsAUS ವಿಶ್ವ ಟೆಸ್ಟ್ ಚಾಂಪಿಯನ್
ವಿಶ್ವ ಟೆಸ್ಟ್ ಚಾಂಪಿಯನ್ನಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ
ಟೀಂ ಇಂಡಿಯಾದ ಭವಿಷ್ಯ ಹೇಗಿದೆ? ಗೆಲ್ಲೋದು ನಿಜಾನಾ?
WTC Final 2023: ವಿಶ್ವದ ನೂತನ ಟೆಸ್ಟ್ ಚಾಂಪಿಯನ್ ಯಾರಾಗ್ತಾರೆ..? ಇಂದಿನಿಂದ ಆರಂಭವಾಗೋ ಫೈನಲ್ ಫೈಟ್ ಇದಕ್ಕೆ ಅಧಿಕೃತ ಉತ್ತರ ಕೊಡಲಿದೆ. ಆದ್ರೆ, ಅದಕ್ಕೂ ಮುನ್ನವೇ ಹಲವರು ಭವಿಷ್ಯವನ್ನ ನುಡಿತಿದ್ದಾರೆ. ಪಕ್ಕಾ ಲೆಕ್ಕ ಹೇಳಬೇಕಂದ್ರೆ ಇಂಡಿಯಾನೇ ಗೆಲ್ಲೋ ಹಾಟ್ ಫೇವರಿಟ್.! ಯಾಕೆ ಅಂತೀರಾ.? ಈ ಸ್ಟೋರಿ ಓದಿ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಫೈಟ್ ಇನ್ನೂ ಸ್ಟಾರ್ಟ್ ಆಗಿಲ್ಲ.. ಆದ್ರೆ, ಯಾರು ಗೆಲ್ತಾರೆ ಅನ್ನೊದರ ಪ್ರಿಡಿಕ್ಷನ್ ಮಾತ್ರ ಜೋರಾಗಿ ನಡೀತಿದೆ. ಎಕ್ಸ್ಪರ್ಟ್ಗಳು, ಫ್ಯಾನ್ಸ್ ಸೇರಿದಂತೆ ಬಹುತೇಕರು ಆಸ್ಟ್ರೇಲಿಯಾ ಗೆಲ್ಲುತ್ತೆ ಅಂತಲೇ ಹೇಳ್ತಿದ್ದಾರೆ. ಇಂಗ್ಲೆಂಡ್ ಕಂಡಿಷನ್ಸ್, ಬಹುತೇಕ ಆಸ್ಟ್ರೇಲಿಯಾದಂತೆ ಇರೋದ್ರಿಂದ ಆಸಿಸ್ಗೆ ಅಡ್ವಾಂಟೇಜ್ ಅನ್ನೋದು ಇದರ ಹಿಂದಿನ ಲೆಕ್ಕಾಚಾರವಾಗಿದೆ. ಆದ್ರೆ, ಅಸಲಿ ಲೆಕ್ಕಾಚಾರ ಬೇರೆನೆ ಇದೆ.
ಭಾರತವೇ ವಿಶ್ವ ಚಾಂಪಿಯನ್ಶಿಪ್ ಗೆಲ್ಲೋ ಫೇವರಿಟ್.!
ಹೌದು..! ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ನಲ್ಲಿ ಟೀಮ್ ಇಂಡಿಯಾನೇ ಗೆಲ್ಲೋ ಫೇವರಿಟ್. ಆಸ್ಟ್ರೇಲಿಯಾ ತಂಡಕ್ಕೆ ಹಲ ಅಡ್ವಾಂಟೇಜ್ ಇರಬಹುದು. ಆದ್ರೆ, ಆನ್ಫೀಲ್ಡ್ನಲ್ಲಿ ಇದು ವರ್ಕೌಟ್ ಆಗಲ್ಲ.. ಯಾಕಂದ್ರೆ, ಆಸಿಸ್ಗೆ ಹೋಲಿಸಿದ್ರೆ, ಭಾರತವೇ ಬಲಿಷ್ಠವಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ದಂಡು.!
ಟೀಮ್ ಇಂಡಿಯಾ ಟಾಪ್ ಆರ್ಡರ್ ಸಖತ್ ಸ್ಟ್ರಾಂಗ್ ಆಗಿದೆ. ಯಂಗ್ ಶುಭ್ಮನ್ ಗಿಲ್, ಅನುಭವಿ ರೋಹಿತ್ ಶರ್ಮಾ ಟೆಸ್ಟ್ನಲ್ಲಿ ಬೆಸ್ಟ್ ಎನಿಸಿಕೊಂಡಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಗುಡ್ ಟಚ್ನಲ್ಲಿದ್ದಾರೆ. ಜವಾಬ್ದಾರಿಯುತ ಬ್ಯಾಟಿಂಗ್ ಕಲೆ ಇವರೆಲ್ಲರಿಗೂ ಕರಗತವಾಗಿದೆ. ಜೊತೆಗೆ ಇಂಗ್ಲೆಂಡ್ ಕಂಡೀಷನ್ನಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಇವರಿಗೆ ಹೆಚ್ಚಿದೆ.
ಮೂರೇ ವಿಕೆಟ್, ಆಸಿಸ್ ಖೇಲ್ ಖತಂ.!
ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಅಡಿಯಿಂದ ಮುಡಿವರೆಗೂ ಬಲಿಷ್ಠವಾಗಿ ಕಾಣ್ತಿದ್ರೆ, ಆಸಿಸ್ ಪಡೆ ದುರ್ಬಲವಾಗಿ ಕಾಣ್ತಿದೆ. ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಇವರನ್ನ ಬಿಟ್ರೆ, ಉಳಿದವರ ಪರ್ಫಾಮೆನ್ಸ್ ಸಾದಾರಣವಾಗಿದೆ. ಈ ಮೂವರ ವಿಕೆಟ್ ಉರುಳಿಸಿದ್ರೆ ಸಾಕು.. ಟೀಮ್ ಇಂಡಿಯಾ ಅರ್ಧ ಪಂದ್ಯ ಗೆದ್ದಂತೆ.
ಕಳೆದ 2 ಪ್ರವಾಸದಲ್ಲಿ ಇಂಗ್ಲೆಂಡ್ನಲ್ಲಿ ಆರ್ಭಟ.!
ಈ ಹಿಂದೆ ಇಂಗ್ಲೆಂಡ್ ಪಿಚ್ಗಳು ಟೀಮ್ ಇಂಡಿಯಾದ ಆಟಗಾರರ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ವು. ಅಲ್ಲೊಂದು, ಇಲ್ಲೊಂದು ಪರ್ಫಾಮೆನ್ಸ್ ಬಿಟ್ರೆ, ತಂಡವಾಗಿ ಅಂಗ್ಲರ ನಾಡಲ್ಲಿ ಭಾರತದ ಪರ್ಫಾಮೆನ್ಸ್ ಅಷ್ಟಕಷ್ಟೇ.! ಆದ್ರೆ, ಕಳೆದ 2 ಟೂರ್ಗಳಿಂದ ಎಲ್ಲವೂ ಬದಲಾಗಿದೆ. ಇಂಗ್ಲೆಂಡ್ನಲ್ಲಿ ಆಂಗ್ಲರನ್ನೇ ಮಣಿಸಿ ಭಾರತದ ದಾಖಲೆ ಬರೆದಿದೆ. ಅಗ್ರೆಸ್ಸಿವ್ ಅಪ್ರೋಚ್ ನಿಂದ ಭರ್ಜರಿ ಪ್ರದರ್ಶನ ನೀಡಿದ ಇತಿಹಾಸವೇ ಇಂದಿನ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿದೆ.
ಫಾಸ್ಟ್ ಟ್ರ್ಯಾಕ್ನಲ್ಲಿ ಸಿರಾಜ್ – ಶಮಿ ಆರ್ಭಟ.!
ಇಂಗ್ಲೆಂಡ್ನ ಫಾಸ್ಟ್ ಟ್ರ್ಯಾಕ್ನಲ್ಲಿ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಆರ್ಭಟಿಸಿದ್ದಾರೆ. ಡ್ಯೂಕ್ ಬಾಲ್ನೊಂದಿಗೆ ಬೆಂಕಿ- ಬಿರುಗಾಳಿ ಎಸೆತಗಳನ್ನ ಹಾಕಿ ಬ್ಯಾಟ್ಸ್ಮನ್ಗಳನ್ನ ಕಾಡಿದ್ದಾರೆ. ಇವರಿಬ್ಬರ ಪ್ರದರ್ಶನಕ್ಕೆ ಹೋಮ್ ಪಿಚ್ ಅಡ್ವಾಂಟೇಜ್ ಇದ್ರೂ, ಆಂಗ್ಲ ಬ್ಯಾಟರ್ಸ್ ಪರದಾಡಿದ ಪರಿಯನ್ನ ಇತಿಹಾಸವೇ ಹೇಳುತ್ತೆ. ಹೀಗಿರೋವಾಗ ಆಸಿಸ್ ಪಡೆಯನ್ನ ಮಣಿಸೋದು ಭಾರತಕ್ಕೆ ಸವಾಲೇ ಆಗಲ್ಲ..
ಇಷ್ಟೇ ಅಲ್ಲ… ಇಂಗ್ಲೆಂಡ್ ಕಂಡಿಷನ್ಸ್ಗೆ ಭಾರತಕ್ಕೆ ಬೇಗ ಹೊಂದಿಕೊಳ್ಳೋಕೆ ಆಗಲ್ಲ ಅನ್ನೋ ಮಾತು ಸದ್ಯ ಚಾಲ್ತಿಯಲ್ಲಿದೆ. ಆದ್ರೆ, ಕಳೆದ 2 ಪ್ರವಾಸದಲ್ಲಿ ಟೀಮ್ ಇಂಡಿಯಾ ಆಡಿದ ರೀತಿಯೇ ಇದಕ್ಕೆ ಉತ್ತರವಾಗಿದೆ. ಈ ಎಲ್ಲಾ ಲೆಕ್ಕಾಚಾರದಲ್ಲೇ ಹೇಳಿದ್ದು, ಭಾರತವೇ ಗೆಲ್ಲೋ ಫೇವರಿಟ್ ಅಂತಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ