ಅಶ್ವಿನ್ ಟೆಸ್ಟ್ ನಂ.1 ಬೌಲರ್, ಟೆಸ್ಟ್ ನಂ.2 ಆಲ್ರೌಂಡರ್
ಇಂಗ್ಲೆಂಡ್ ಪಿಚ್ನಲ್ಲಿ ಅಶ್ವಿನ್ ಬೊಂಬಾಟ್ ಬೌಲಿಂಗ್
ಕೇರಂ ಸ್ಪೆಷಲಿಸ್ಟ್ ಆಡಿದ್ರೆ ತಂಡಕ್ಕೆ ಏನು ಲಾಭ?
ದ ಓವಲ್ ಅಂಗಳದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕಾವೇರಿದೆ. ಹೈವೋಲ್ಟೇಜ್ ಗೇಮ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ ಆ ಒಂದು ತಪ್ಪು ನಿರ್ಧಾರ. ಆ ಮ್ಯಾಚ್ ವಿನ್ನರ್ ನನ್ನ ಬೆಂಚ್ ಕಾಯಿಸಿದ್ದು ಎಷ್ಟು ಸರಿ ಅಂತ ಹಿಟ್ಮ್ಯಾನ್ ವಿರುದ್ಧ ಎಲ್ಲರೂ ಬಾಣಾಸ್ತ್ರ ಪ್ರಯೋಗಿಸ್ತಿದ್ದಾರೆ. ಇಂತಹ ಬಿಗ್ ಗೇಮ್ನಲ್ಲೆ ಕ್ಯಾಪ್ಟನ್ ರೋಹಿತ್ ಶರ್ಮಾ ಒಂದು ದೊಡ್ಡ ತಪ್ಪು ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದ್ದಾರೆ.
WTC ಫೈನಲ್ ಗೇಮ್ನಿಂದ ಅಶ್ವಿನ್ಗೆ ಗೇಟ್ಪಾಸ್
WTC ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಒಂದು ಬಿಗ್ ಶಾಕ್ ಕಾದಿತ್ತು. ಅದೇನಂದ್ರೆ ಆಡುವ ಹನ್ನೊಂದರ ಬಳಗದಿಂದ ಸ್ಪಿನ್ ಮ್ಯಜಿಶಿಯನ್ ಅಶ್ವಿನ್ ಹೆಸರು ಮಾಯವಾಗಿತ್ತು. ಇವರ ಬದಲು 4ನೇ ವೇಗಿಯನ್ನ ಆಡಿಸಲಾಯ್ತು. ಇದು ಎಲ್ಲರನ್ನ ಅಚ್ಚರಿಗೆ ತಳ್ಳಿದೆ. ಯಾಕಂದ್ರೆ ಅಶ್ವಿನ್ ಆಡುವುದು ಫಿಕ್ಸ್ ಎಂದು ಬಹುತೇಕರು ಭಾವಿಸಿದ್ರು. ಆದ್ರೆ ಟಾಸ್ ವೇಳೆ ಆಗಿದ್ದೇ ಬೇರೆ. ಕ್ಯಾಪ್ಟನ್ ರೋಹಿತ್ ಕೇರಂ ಸ್ಪೆಷಲಿಸ್ಟ್ರನ್ನ ಹೊರಗಿಟ್ಟು ಬಿಗ್ ಶಾಕ್ ನೀಡಿದ್ರು. ನಿಜಕ್ಕೂ ರೋಹಿತ್ರ ಈ ಡಿಸಿಷನ್ ಎಷ್ಟರ ಮಟ್ಟಿಗೆ ಸರಿ ಅನ್ನೋದೆ ತಿಳಿತಿಲ್ಲ.

ಪ್ರತಿಷ್ಠಿತ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲು ಇಂತಹ ಲೆಜೆಂಡ್ ಸ್ಪಿನ್ನರ್ಗಿಂತ ಇನ್ನೊಬ್ಬ ಬೇಕಾ ಹೇಳಿ? ಹೇಳಿಕೇಳಿ ಆ್ಯಷ್ ಸಾಮಾನ್ಯ ಪ್ಲೇಯರ್ ಅಲ್ಲ. ಅವರು ಟೆಸ್ಟ್ ಕ್ರಿಕೆಟ್ನ ನಂಬರ್. 1 ಬೌಲರ್..ಅಷ್ಟೇ ಏಕೆ ಟೆಸ್ಟ್ನ ನಂ. ಟು ಆಲ್ರೌಂಡರ್ ಕೂಡ. ಜೊತೆಗೆ WTC 2ನೇ ಆವೃತ್ತಿಯಲ್ಲಿ ಭಾರತ ಪರ ಹೈಯೆಸ್ಟ್ ವಿಕೆಟ್ ಟೇಕರ್ ಕೂಡ. ಇಂತಹ ಮ್ಯಾಚ್ ವಿನ್ನರೇ ಕ್ಯಾಪ್ಟನ್ ರೋಹಿತ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಬೇಡವಾಗಿದ್ದಾರೆ.

ಈ ಅಂಶವೂ ಕೂಡ ಅಶ್ವಿನ್ ತಂಡದಲ್ಲಿ ಇರಬೇಕಿತ್ತು ಅಂತ ಹೇಳುತ್ತೆ. ಇಂಗ್ಲೆಂಡ್ ಕಂಡೀಷನ್ ನಲ್ಲಿ ಕೇರಂ ಸ್ಪೆಷಲಿಸ್ಟ್ರ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಸಿಕ್ಕ ಅವಕಾಶಗಳಲ್ಲಿ ವಿಕೆಟ್ಗಳ ಗೊಂಚಲು ಕಟ್ಟಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಆರ್ ಅಶ್ವಿನ್ ಒಟ್ಟು 7 ಟೆಸ್ಟ್ ಪಂದ್ಯಗಳನ್ನ ಆಡಿದ್ದಾರೆ. 2.52 ರ ಎಕಾನಮಿಯಲ್ಲಿ 18 ವಿಕೆಟ್ ಕಬಳಿಸಿದ್ದಾರೆ.
ಇದು ನಿಜಕ್ಕೂ ಕಠಿಣ ನಿರ್ಧಾರ. ಅಶ್ವಿನ್ ಮ್ಯಾಚ್ ವಿನ್ನರ್. ಅವರನ್ನ ತಂಡದಿಂದ ಕೈಬಿಡುವುದು ನಿಜಕ್ಕೂ ಕಷ್ಟವೆನಿಸಿದೆ. ಆದರೆ ತಂಡಕ್ಕೆ ಇಂತಹ ನಿರ್ಧಾರದ ಅಗತ್ಯವಿತ್ತು.
ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ

ಅಶ್ವಿನ್ ಆಡದಿರೋದು ತಂಡಕ್ಕೆ ಬಿಗ್ ಲಾಸ್. ಒಂದು ವೇಳೆ ಅದೇ ಕೇರಂ ಸ್ಪೆಷಲಿಸ್ಟ್ ಆಡಿದ್ರೆ ತಂಡಕ್ಕೆ ದೊಡ್ಡ ಲಾಭವಿತ್ತು. ಹೇಳಿಕೇಳಿ ಅಶ್ವಿನ್ ದಿಗ್ಗಜ ಸ್ಪಿನ್ನರ್. ಅಪಾರ ಅನುಭವಿದೆ. ವಿಭಿನ್ನ ರೀತಿಯಲ್ಲಿ ಬೌಲಿಂಗ್ ಮಾಡಿ ಬ್ಯಾಟ್ಸ್ಮನ್ಗಳ ಖೆಡ್ಡಾಗೆ ಬೀಳಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಆಸೀಸ್ ದಿಗ್ಗಜ ಅಶ್ವಿನ್ ಪರ ಬ್ಯಾಟ್ ಬೀಸಿದ್ದು, ಎದುರಾಳಿ ತಂಡದಲ್ಲಿ ಅನೇಕರು ಎಡಗೈ ಬ್ಯಾಟ್ಸ್ಮನ್ಗಳಿದ್ರು. ಜಡ್ಡುಗಿಂತ ಇವರೇ ಲೆಫ್ಟ್ಹ್ಯಾಂಡ್ ಬ್ಯಾಟ್ಸ್ಮನ್ಗಳಿಗೆ ನಿಜವಾಗಿ ಪ್ರಾಬ್ಲಂ ತಂದೊಡ್ಡುತ್ತಿದ್ದರು ಎಂದು ಹೇಳಿದ್ದಾರೆ. ಮಿಂಚಿಹೋದ ಕಾಲಕ್ಕೆ ಚಿಂತಿಸಿದರೇ ಯಾವುದೇ ಪ್ರಯೋಜನವಿಲ್ಲ. ಇನ್ಮುಂದಾದರೂ ಕ್ಯಾಪ್ಟನ್ ರೋಹಿತ್, ಪ್ಲೇಯಿಂಗ್-11 ಆಯ್ಕೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ