newsfirstkannada.com

WTC Final: ಸೋಲಿನ ಸುಳಿಯಲ್ಲಿ ಭಾರತ.. ರಹಾನೆ, ಭರತ್​​ ಮೇಲೆ ಕೊಂಚ ನಿರೀಕ್ಷೆ..!

Share :

09-06-2023

    ಸ್ಟ್ರಾಂಗ್ ಕಂಬ್ಯಾಕ್ ಮಾಡಿದ ಟೀಂ ಇಂಡಿಯಾ ಬೌಲರ್ಸ್..!

    ಕೇವಲ 2 ರನ್​​ಗಳಿಂದ ಅರ್ಧ ಶತಕ ಮಿಸ್​ ಮಾಡ್ಕೊಂಡ ಜಡ್ಡು

    2ನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 151ರನ್​ ​

ವರ್ಲ್ಡ್ ಟೆಸ್ಟ್ ಚಾಂಪಿಯನ್​​ ಫೈನಲ್​ನ ಎರಡನೇ ದಿನ, ಟೀಮ್ ಇಂಡಿಯಾ ಬೌಲರ್ಸ್​ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದರು. ಆದರೆ ಬ್ಯಾಟ್ಸ್​ಮನ್​​ಗಳು ಮಾತ್ರ ಆಸಿಸ್​​ ದಾಳಿಗೆ ಉಡೀಸ್ ಆದರು. ಕ್ಯಾಪ್ಟನ್ ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಪೂಜಾರ, ನಿರೀಕ್ಷೆಗಳನ್ನು ಮತ್ತೆ ಹುಸಿ ಮಾಡಿದ್ದಾರೆ.

ಎರಡನೇ ದಿನದ ಟೀಮ್ ಇಂಡಿಯಾ, ಬ್ಯಾಕ್​ಫೂಟ್​ನಲ್ಲೇ ಇನ್ನಿಂಗ್ಸ್ ಆರಂಭಿಸಿತು. ದಿನದಾಟದ ಆರಂಭದಲ್ಲೇ ಸ್ಟೀವ್ ಸ್ಮಿತ್, ಸತತ 2 ಬೌಂಡ್ರಿ ಬಾರಿಸಿ ಶತಕ ಸಿಡಿಸಿದ್ರು. ಮತ್ತೊಂದೆಡೆ ಟ್ರಾವಿಸ್ ಹೆಡ್, 150 ರನ್​​ ಬಾರಿಸಿದ್ರು. ಮೊದಲ ದಿನ ಹೆಡ್ ವಿರುದ್ಧ ಗೇಮ್​ಪ್ಲಾನ್ ಮಾಡಿದ್ದ ಟೀಮ್ ಇಂಡಿಯಾ, ಎರಡನೇ ದಿನವೂ ಅದೇ ಪ್ಲಾನ್ ಮುಂದುವರೆಸಿತು. ಪ್ಲಾನ್ ವರ್ಕ್​ಔಟ್ ಕೂಡ ಆಯ್ತು. 163 ರನ್​ಗಳಿಸಿದ ಹೆಡ್, ಸಿರಾಜ್​​​ಗೆ ವಿಕೆಟ್ ಒಪ್ಪಿಸಿದರು.

ಕ್ಯಾಮರೂನ್ ಗ್ರೀನ್​​ 6 ರನ್​ಗಳಿಸಿ ಸ್ಲಿಪ್​​ನಲ್ಲಿ ಕ್ಯಾಚ್ ನೀಡಿದ್ರು. ಪ್ಲಾನ್​​ಗೆ ತಕ್ಕನಂತೆ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ಬೌಲರ್ಸ್​, 121 ರನ್​ಗಳಿಸಿದ ಸ್ಟೀವ್ ಸ್ಮಿತ್​ಗೆ ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಸೆಷನ್​ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಟೀಮ್ ಇಂಡಿಯಾ, 13 ಓವರ್​ಗಳಲ್ಲಿ ಆಸ್ಟ್ರೇಲಿಯಾದ ಉಳಿದ ಬ್ಯಾಟ್ಸ್​ಮನ್​​ಗಳನ್ನ ಕಟ್ಟಿಹಾಕ್ತು. ಅಂತಿಮವಾಗಿ ಆಸ್ಟ್ರೇಲಿಯಾ 469 ರನ್​ಗಳಿಗೆ ಆಲೌಟಾಯ್ತು. ಸಿರಾಜ್ 4 ವಿಕೆಟ್ ಪಡೆದು ಗಮನ ಸೆಳೆದರು.

ಆಸಿಸ್ ಸವಾಲಿಗೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಒಳ್ಳೆ ಸ್ಟಾರ್ಟ್ ಸಿಗಲೇ ಇಲ್ಲ. ಸ್ಕೋರ್ 30 ರನ್ ಆಗುವಷ್ಟರಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ಚೆತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ತಲಾ 14 ರನ್​ಗಳಿಸಿದ ಉಭಯ ಬ್ಯಾಟ್ಸ್​ಮನ್​​ಗಳು, ಬೇಗ ಪೆವಿಲಿಯನ್ ಸೇರಿಕೊಂಡರು.

17 ರನ್​ಗಳಿಸಿದಾಗ ಜೀವದಾನ ಪಡೆದ ಅಜಿಂಕ್ಯಾ ರಹಾನೆ, ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ರಹಾನೆ ಜತೆಯಾದ ಜಡೇಜಾ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಜಡೇಜಾ, 48 ರನ್​ಗಳಿಸಿದ್ದಾಗ ಸ್ಟೀವ್ ಸ್ಮಿತ್​ಗೆ ಕ್ಯಾಚ್​ ನೀಡಿ ಹೊರ ನಡೆದರು.
2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್​ ಗಳಿಸಿರೋ ಟೀಮ್ ಇಂಡಿಯಾ, 318 ರನ್​​ಗಳ ಹಿನ್ನೆಯಲ್ಲಿದ್ದು. ಸೋಲಿನ ಸಂಕಷ್ಟಕ್ಕೆ ಸಿಲುಕಿದೆ. ಆದ್ರೀಗ ಆಪತ್ತಿನಿಂದ ಪಾರು ಮಾಡಬೇಕಾದ ಜವಾಬ್ದಾರಿ ಅಜಿಂಕ್ಯಾ ರಹಾನೆ ಹಾಗೂ ಕೆ.ಎಸ್.ಭರತ್ ಮೇಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

WTC Final: ಸೋಲಿನ ಸುಳಿಯಲ್ಲಿ ಭಾರತ.. ರಹಾನೆ, ಭರತ್​​ ಮೇಲೆ ಕೊಂಚ ನಿರೀಕ್ಷೆ..!

https://newsfirstlive.com/wp-content/uploads/2023/06/TEAM_INDIA-1.jpg

Load More