newsfirstkannada.com

WWE ಚಾಂಪಿಯನ್​ ಬ್ರೇ ವ್ಯಾಟ್ ಹಠಾತ್ ನಿಧನ.. ಕೇವಲ 36 ವರ್ಷಕ್ಕೆ ಬದುಕು ಮುಗಿಸಿದ ಸ್ಟಾರ್​

Share :

Published August 25, 2023 at 8:58am

Update August 25, 2023 at 9:01am

    WWE ಚಾಂಪಿಯನ್ ಬ್ರೇ ವ್ಯಾಟ್, ಸಹ ಸ್ಪರ್ಧಿಗಳಿಂದ ಸಂತಾಪ

    ಬ್ರೇ ವ್ಯಾಟ್ ಎಂದೇ ಖ್ಯಾತಿ ಪಡೆದಿದ್ದ ವಿಂಡಮ್ ಲಾರೆನ್ಸ್ ರೋಟುಂಡಾ

    ಎಕ್ಸ್​ನಲ್ಲಿ ಸುದ್ದಿ ಶೇರ್ ಮಾಡಿ ಬೇಸರ ವ್ಯಕ್ತಪಡಿಸಿದ ತ್ರಿಪಲ್ ಹೆಚ್

WWE ಚಾಂಪಿಯನ್​ ಬ್ರೇ ವ್ಯಾಟ್ ಎಂದೇ ಖ್ಯಾತಿ ಪಡೆದಿದ್ದ ವಿಂಡಮ್ ಲಾರೆನ್ಸ್ ರೋಟುಂಡಾ ಅನಾರೋಗ್ಯದ ಕಾರಣದಿಂದ ನಿಧನ ಹೊಂದಿದ್ದಾರೆ. ಇವರಿಗೆ ಕೇವಲ 36 ವಯಸ್ಸು ಆಗಿದ್ದು ಚಿಕ್ಕವಯಸ್ಸಿನಲ್ಲಿಯೇ ಮೃತಪಟ್ಟಿರುವುದಕ್ಕೆ WWE ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸುತ್ತಿದ್ದಾರೆ.

WWE ಚಾಂಪಿಯನ್ ಬ್ರೇ ವ್ಯಾಟ್

14 ಬಾರಿ ವರ್ಲ್ಡ್​ ಚಾಂಪಿಯನ್ ಮತ್ತು ಡಬ್ಲ್ಯೂಡಬ್ಲ್ಯೂಇನ್ ಚೀಫ್​ ಕಂಟೆಂಟ್ ಆಫೀಸರ್ ತ್ರಿಪಲ್ ಹೆಚ್ ಅವರು ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಜಸ್ಟ್​ ಇದೀಗ ಒಂದು ಕೆಟ್ಟ ಸುದ್ದಿಯನ್ನು ಕೇಳಿ ಬೇಸರವಾಗಿದೆ. ಡಬ್ಲ್ಯೂಡಬ್ಲ್ಯೂಇನ್ ಆಲ್ ಆಫ್ ಫಾಮರ್ ಮೈಕ್​ ರೋಟುಂಡಾ ಅವರು ಫೋನ್ ಕಾಲ್ ಮಾಡಿ ಬ್ರೇ ವ್ಯಾಟ್ ನಿಧನ ಹೊಂದಿದ್ದಾರೆ ಎಂದು ಹೇಳಿದರು. ಈ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಈ ನೋವನ್ನು ನುಂಗುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ಸೂಚಿಸಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಫೆಬ್ರವರಿಯಿಂದಲೂ ಬ್ರೇ ವ್ಯಾಟ್ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಚೇತರಿಸಿಕೊಂಡಿದ್ದ ಅವರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಬ್ರೇ ವ್ಯಾಟ್ ಒಂದು ಬಾರಿ ಚಾಂಪಿಯನ್ ಆಗಿದ್ದು ಎರಡು ಬಾರಿ ಡಬ್ಲ್ಯೂಡಬ್ಲ್ಯೂಇನ ಯುನಿವರ್ಸೆಲ್​ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಇವರ ಸಾವಿನ ಸುದ್ದಿ ತಿಳಿದು ಡಬ್ಲ್ಯೂಡಬ್ಲ್ಯೂಇನ್ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WWE ಚಾಂಪಿಯನ್​ ಬ್ರೇ ವ್ಯಾಟ್ ಹಠಾತ್ ನಿಧನ.. ಕೇವಲ 36 ವರ್ಷಕ್ಕೆ ಬದುಕು ಮುಗಿಸಿದ ಸ್ಟಾರ್​

https://newsfirstlive.com/wp-content/uploads/2023/08/WWE_Bray-Wyatt_1.jpg

Load More