ಎಕ್ಸ್‌ಎಲ್ ಬುಲ್ಲಿ ಶ್ವಾನಗಳು ಅಷ್ಟೊಂದು ಅಪಾಯಕಾರಿನಾ?
ಎಕ್ಸ್‌ಎಲ್ ಬುಲ್ಲಿ ಶ್ವಾನಗಳನ್ನ ಬ್ಯಾನ್ ಮಾಡುತ್ತಿರುವುದು ಏಕೆ?
ಎಕ್ಸ್‌ಎಲ್ ಬುಲ್ಲಿ ಶ್ವಾನದ ಮೂಲವೇನು, ಪಾಪ್ಯುಲರ್ ಯಾಕೆ ಗೊತ್ತಾ?
ಬ್ಯಾನ್ ಅನ್ನೋ ಶಬ್ದ ಕೇಳಿದ ತಕ್ಷಣ ಏಕೆ ? ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಪುಸ್ತಕ ಬ್ಯಾನ್, ಆ್ಯಕ್ಟರ್ಸ್ ಬ್ಯಾನ್ ಅನ್ನೋ ಸುದ್ದಿಯನ್ನೆಲ್ಲಾ ಕೇಳಿರುತ್ತೇವೆ. ಆದರೆ ಯುಕೆ ಗೌವರ್ನಮೆಂಟ್, ಅಮೆರಿಕನ್ ಬುಲ್ಲಿ ಡಾಗ್‌ನ ಬ್ಯಾನ್ ಮಾಡ್ತಿದೆ. ಸ್ವತಃ ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಈ ಬಗ್ಗೆ ಮಾತನಾಡಿದ್ದು, ಈ ವರ್ಷದ ಕೊನೆಯಲ್ಲಿ ಈ ನಾಯಿ ಬ್ಯಾನ್ ಆಗೋದು ಪಕ್ಕಾ. ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ಡಾಗ್ಸ್. ಬ್ರಿಟನ್‌ನಲ್ಲಿ ಈ ಶ್ವಾನದ ಹೆಸರು ಕೇಳಿದ ತಕ್ಷಣ ಜನರು ಬೆದರುವುದು ಹೆಚ್ಚಾಗಿದೆ. ಶ್ವಾನಕ್ಕೆ ಮನುಷ್ಯರೇ ಹೆದರುತ್ತಾರೆ ಅಂದ್ರೆ ಆ ತಳಿ ತುಂಬಾ ಡೇಂಜರಸ್ ಅಂತಾನೇ ಅರ್ಥ. ಹೌದು, ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ಡಾಗ್ಸ್ ತುಂಬಾ ಅಗ್ರೆಸಿನ್ ಜೊತೆಗೆ ಡೇಂಜರಸ್ ಕೂಡ. ಹಾಗಾಗಿ ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್, ಈ ವರ್ಷದ ಕೊನೆಯಲ್ಲಿ ಅಮೆರಿಕನ್ ಬುಲ್ಲಿ ಡಾಗ್ಸ್‌ನ ಬ್ಯಾನ್ ಮಾಡುವುದಾಗಿ ಘೋಷಿಸಿದ್ದಾರೆ.
ಇಲ್ಲಿ ಅರ್ಥವಾಗಬೇಕಾದ ವಿಚಾರ ತುಂಬಾ ಇದೆ. ಓರ್ವ ಪ್ರಧಾನ ಮಂತ್ರಿ, ಶ್ವಾನದ ತಳಿಯನ್ನ ನಿಷೇಧ ಮಾಡೋದಾಗಿ ಹೇಳ್ತಾರೆ ಅಂದ್ರೆ, ಅದು ಸರಳವಾದ ವಿಚಾರ ಅಲ್ಲವೇ ಅಲ್ಲ. ಒಂದೇ ಒಂದು ಸರ್ಕ್ಯುಲರ್ ಹೊರಡಿಸಿ ಈ ಮಾಹಿತಿ ನೀಡಬಹುದಿತ್ತು. ಆದ್ರೆ, ಬ್ರಿಟನ್ ಸರ್ಕಾರ ಆ ರೀತಿ ಮಾಡಿಲ್ಲ. ಒಂದಂತೂ ಸ್ಪಷ್ಟ. ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ಡಾಗ್ಸ್‌ಗೆ ನಿಷೇಧ ಹೇರುತ್ತಿರೋದಕ್ಕೆ ಕಾರಣ ನಿರಂತರವಾಗಿ ಆಗುತ್ತಿರುವ ಅಟ್ಯಾಕ್ ಮತ್ತು ಅಮಾಯಕರ ಸಾವುಗಳು. ಬ್ರಿಟನ್‌ನಲ್ಲಿ 10 ಶ್ವಾನ ಅಟ್ಯಾಕ್ ಕೇಸ್‌ಗಳ ಪೈಕಿ 6 ಪ್ರಕರಣಗಳು ಅಮೆರಿಕನ್ ಬುಲ್ಲಿ ಡಾಗ್ಸ್‌ನದ್ದೇ ಆಗಿವೆ. ಸಾವು ನೋವುಗಳು ಸಂಭವಿಸುತ್ತಿರೋದರಿಂದ ಮತ್ತು ಬ್ಯಾನ್ ಮಾಡಬೇಕು ಅನ್ನೋ ಕ್ಯಾಂಪೇನ್ ಶುರುವಾದ್ದರಿಂದ, ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಬ್ರಿಟನ್ ಸರ್ಕಾರ ಈ ತಳಿಯ ಶ್ವಾನವನ್ನ ಬ್ಯಾನ್ ಮಾಡೋದಾಗಿ ಘೋಷಿಸಿದೆ.
ಎಕ್ಸ್‌ಎಲ್ ಬುಲ್ಲಿ ಶ್ವಾನದ ಮೂಲವೇನು?
ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ಒಂದು ಮಾಡ್ರನ್ ತಳಿಯ ಶ್ವಾನ. ಈ ಬ್ರಿಡ್‌ನ ಡೆವಲಪ್ ಮಾಡಿದ್ದು 1990ರಲ್ಲಿ. ಅಮೆರಿಕಲ್ ಎಕ್ಸ್ ಬುಲ್ಲಿಯಲ್ಲಿ ಪಾಕೆಟ್ ಬುಲ್ಲಿ ಮತ್ತು ಸ್ಟ್ಯಾಂಡರ್ಡ್ ಬುಲ್ಲಿ ಕೂಡ ಸೇರ್ಪಡೆಗೊಳ್ಳುತ್ತವೆ. ಇದು ಅನೇಕ ಬ್ರಿಡ್‌ಗಳ ಮಿಶ್ರಣದ ಫಲಿತಾಂಶ ಅಂತಾ ಹೇಳಲಾಗುತ್ತದೆ. ಅದರಲ್ಲೂ 1991ರಲ್ಲಿ ಬ್ರಿಟನ್ ಸರ್ಕಾರ ಬ್ಯಾನ್ ಮಾಡಿರುವ ಅಮೆರಿಕನ್ ಪಿಟ್ ಬುಲ್ ಟೆರಿಯರ್ ಕೂಡ ಸೇರಿದೆ. ಎಕ್ಸ್‌ಎಲ್ ಬುಲ್ಲಿ ಶ್ವಾನ ತುಂಬಾ ಸ್ಟ್ರಾಂಗ್ ಇರುವಂತಹ ದೇಹ ಹೊಂದಿದೆ. ಮೂಳೆಯಂತೂ ತುಂಬಾ ಗಟ್ಟಿಮುಟ್ಟು. ಮಸಲ್ ಹೆಚ್ಚು ಹೊಂದಿರುವ ಶ್ವಾನ ಇದಾಗಿದೆ. ಪರಿಪೂರ್ಣವಾಗಿ ಬೆಳದ ಗಂಡು ಶ್ವಾನದ ತೂಕ ಬರೋಬ್ಬರಿ 57 ಕೆ.ಜಿ ಮತ್ತು 53 ಸೆಂಟಿ ಮೀಟರ್ ಉದ್ದ ಬೆಳೆಯುವ ಸಾಮರ್ಥ್ಯ ಹೊಂದಿದೆ.
ಈ ತಳಿಗಳು ಎಷ್ಟು ಪಾಪ್ಯುಲರ್ ಮತ್ತು ಏಕೆ?
2014ರಲ್ಲಿ ಬ್ರಿಟನ್ಗೆ ಈ ತಳಿಯ ಶ್ವಾನಗಳು ಕಾಲಿಟ್ಟವು. ಇತ್ತೀಚಿನ ವರ್ಷಗಳಲ್ಲಿ ಈ ತಳಿಯ ಶ್ವಾನಗಳು ಹೆಚ್ಚು ಪ್ರಖ್ಯಾತಿ ಪಡೆದವು. ತುಂಬಾ ಕಾಸ್ಟ್ಲಿಯಾಗಿರುವ ಈ ತಳಿಯ ಶ್ವಾನಗಳನ್ನ ರಾಯಲ್ ಕೆನಲ್ ಕ್ಲಬ್‌ನ ಶ್ವಾನಗಳ ಪಟ್ಟಿಯಲ್ಲಿ ಗುರುತಿಸೋದಿಲ್ಲ. ಬ್ರಿಟನ್‌ನಲ್ಲಿ ಈ ತಳಿಯ ಶ್ವಾನಗಳು ಸಾವಿರದ ಮೇಲಿರುವ ಸಾಧ್ಯತೆ ಇದೆ. ಈ ತಳಿಯನ್ನ ಬ್ಯಾನ್ ಮಾಡ್ಬೇಕು ಅಂತಾ ಕ್ಯಾಂಪೇನ್ ಮಾಡಿದ್ದ ಗುಂಪೊಂದು ನಡೆಸಿದ ಸರ್ವೆ ಪ್ರಕಾರ, ಬ್ರಿಟನ್ ಒಟ್ಟು ಸಾಕು ನಾಯಿಗಳ ಪೈಕಿ ಶೇ.1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಈ ತಳಿಯ ನಾಯಿಗಳಿವೆ ಅಂತಾ ಹೇಳಿದ್ದಾರೆ.
ಎಕ್ಸ್‌ಎಲ್ ಬುಲ್ಲಿ ಶ್ವಾನಗಳು ಎಷ್ಟು ಡೇಂಜರಸ್?
ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ಶ್ವಾನಗಳು ಅಪಾಯಕಾರಿನಾ? ಅಥ್ವಾ ಇದ್ದರೆ ಏಕೆ ಅನ್ನೋದರ ಬಗ್ಗೆ ಬ್ರಿಟನ್‌ನಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. ಕಳೆದ ವರ್ಷದಲ್ಲಿ ಬ್ರಿಟನ್‌ನಲ್ಲಿ ದಾಖಲಾಗಿರುವ ಶ್ವಾನ ದಾಳಿಯ 10 ಪ್ರಕರಣಗಳ ಪೈಕಿ 6 ಈ ತಳಿಯ ಶ್ವಾನಗಳದ್ದೇ. ಈ ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಶೇ.44ರಷ್ಟು ಕೇಸ್‌ಗಳಿಗೆ ಈ ಶ್ವಾನಗಳೇ ಜವಾಬ್ದಾರಿ ಅನ್ನೋ ವರದಿಯೂ ಇದೆ. ಕೆಲವರ ಪ್ರಕಾರ, ಈ ತಳಿಯ ಶ್ವಾನಗಳು ತುಂಬಾ ಡೇಂಜರಸ್. ಈ ಶ್ವಾನಗಳು ತುಂಬಾ ಕೋಪಗೊಳ್ಳುತ್ತವೆ. ಈ ನಾಯಿಯ ಸ್ಟ್ರೆಂತ್ ಗಮನಿಸಿದಾಗ, ಅಟ್ಯಾಕ್‌ಗೆ ಒಳಪಟ್ಟವರು ಗಂಭೀರ ಸ್ಥಿತಿ ತಲುಪುತ್ತಾರೆ.
ಎಕ್ಸ್‌ಎಲ್ ಬುಲ್ಲಿ ಶ್ವಾನಗಳನ್ನ ಈಗ ಬ್ಯಾನ್ ಮಾಡ್ತಿರೋದೇಕೆ?
ಎಕ್ಸ್‌ಎಲ್ ಬುಲ್ಲಿ ಶ್ವಾನಗಳನ್ನ ಬ್ಯಾನ್ ಮಾಡಲು ದೊಡ್ಡ ಅಭಿಯಾನವೇ ನಡೆದಿದೆ. ಈ ಶ್ವಾನದ ದಾಳಿಯಿಂದ ಮೃತಪಟ್ಟ 10 ವರ್ಷದ ತಾಯಿಯೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕಳೆದ ವಾರವೂ ತಳಿಯ ಕ್ರಾಸ್ ಬ್ರಿಡ್ ಶ್ವಾನಗಳು ಅಟ್ಯಾಕ್ ಮಾಡಿರುವ ವಿಡಿಯೋಗಳು ಬ್ರಿಟನ್‌ನಲ್ಲಿ ವೈರಲ್ ಆಗಿವೆ. 11 ವರ್ಷದ ಬಾಲಕಿಯ ಮೇಲೂ ಈ ಶ್ವಾನಗಳು ತೀವ್ರವಾಗಿ ದಾಳಿ ನಡೆಸಿವೆ. ಪ್ರಧಾನಿ ರಿಷಿ ಸುನಕ್ ಬ್ಯಾನ್ ಘೋಷಣೆ ಮಾಡಿದ ನಂತರವೂ ವ್ಯಕ್ತಿಯೊರ್ವ ಈ ಶ್ವಾನಗಳ ಅಟ್ಯಾಕ್‌ನಿಂದ ಮೃತಪಟ್ಟಿದ್ದಾನೆ ಅಂತಾ ತಿಳಿದುಬಂದಿದೆ. ಪ್ರಧಾನಿ ರಿಷಿ ಸುನಕ್ ಅವರ ವಕ್ತಾರರು ಹೇಳಿರೋ ಪ್ರಕಾರ, ಬ್ಯಾನ್‌ನ ಪ್ರಕ್ರಿಯೆಗಳು ನಡೆಯುತ್ತಿವೆ. ಆದ್ರೆ, ಎಕ್ಸ್‌ಎಲ್ ಬುಲ್ಲಿ ಶ್ವಾನಗಳ ಬ್ರಿಡ್ ಕಾನೂನಾತ್ಮಕವಾಗಿ ಪರಿಗಣಿಸಲ್ಪಿಟ್ಟಿಲ್ಲ ಅಂತಾ ಹೇಳಿದ್ದಾರೆ.
ಬ್ಯಾನ್ ಕಾನೂನು ಹೇಗೆ ವರ್ಕ್ ಆಗುತ್ತದೆ?
ಬ್ರಿಟನ್‌ನಲ್ಲಿ ಡೇಂಜರಸ್ ಡಾಗ್ಸ್ ಆ್ಯಕ್ಟ್ 1991ರಲ್ಲಿ ಅನುಷ್ಠಾನಗೊಳಿಸಲಾಯ್ತು. ಇಲ್ಲಿಯವರೆಗೂ ನಾಲ್ಕು ಶ್ವಾನಗಳನ್ನ ಬ್ಯಾನ್ ಮಾಡಲಾಗಿದೆ. ಪಿಟ್ ಬುಲ್ ಟೆರಿಯರ್, ಜಪಾನಿಸ್, ತೋಸಾ, ಡೋಗೋ ಅರ್ಜೆಂಟಿನೋ ಮತ್ತು ಫಿಲಾ ಬ್ರೆಜ್ಹಿಲಿಯಾರೋ ಶ್ವಾನಗಳನ್ನ ಬ್ಯಾನ್ ಮಾಡಲಾಗಿದೆ. ಅಪಾಯಕಾರಿ ಶ್ವಾನಗಳ ನಿಯಂತ್ರಣ ಕಾಯ್ದೆಯ ಪ್ರಕಾರ, ನಿಷೇಧಕ್ಕೆ ಒಳಪಡುವ ಶ್ವಾನಗಳನ್ನ ಭೌತಿಕ ಗುಣಲಕ್ಷಣಗಳ ಮೂಲಕ ಗುರುತಿಸಲಾಗುತ್ತದೆ. ಶ್ವಾನಗಳನ್ನ ಹ್ಯಾಂಡಲ್ ಮಾಡುವಲ್ಲಿ ಪರಿಣಿತಿ ಹೊಂದಿರುವ ಪೊಲೀಸರ್ ಈ ಕ್ರಮ ಕೈಗೊಳ್ಳುತ್ತಾರೆ. ಬ್ಯಾನ್ ಮಾಡಿರುವ ಶ್ವಾನಗಳನ್ನ ವಶಕ್ಕೆ ಪಡೆದು, ಸಾಯಿಸುವ ಅಧಿಕಾರ ಸಂಬಂಧಪಟ್ಟ ಇಲಾಖೆಗೆ ಇರುತ್ತದೆ.
ಬ್ಯಾನ್ ನಂತರ ಈ ಬ್ರಿಡ್‌ನ ಶ್ವಾನಗಳನ್ನ ಮಾರುವಂತಿಲ್ಲ, ಸಂತಾನ ಮಾಡಿಸುವಂತಿಲ್ಲ. ಶ್ವಾನದ ಮಾಲೀಕರು ಕೋರ್ಟ್‌ನಿಂದ ವಿನಾಯಿತಿ ಪಡೆದರೇ, ಅಂದ್ರೆ ಎಲ್ಲಾ ಜವಾಬ್ದಾರಿಗಳನ್ನ ತೆಗೆದುಕೊಂಡು ಸಾಕೋದಕ್ಕೆ ಪರ್ಮಿಶನ್ ಪಡೆದರೇ ಅವರನ್ನ ಈ ಕಾಯ್ದೆಯಿಂದ ಹೊರಗಿಡಲಾಗುತ್ತದೆ. ಶ್ವಾನವೂ ಡೇಂಜರಸ್ ಅಲ್ಲದಿದ್ದ ಪಕ್ಷದಲ್ಲಿ ಕೋರ್ಟ್ ಈ ಅನುಮತಿ ನೀಡುತ್ತೆ. ಈ ಆದೇಶದಿಂದ ಈ ಬ್ರಿಡ್‌ನ ಶ್ವಾನಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ರೆ ಸಂಪೂರ್ಣ ನಾಶವಾಗೋದಿಲ್ಲ. ಆದ್ರೆ, ಬ್ಯಾನ್‌ನ ನಂತರ ಇದೇ ರೀತಿಯ ಗುಣಲಕ್ಷಣ ಹೊಂದಿರುವ ಹೊಸ ಶ್ವಾನದ ತಳಿಯನ್ನ ಅಭಿವೃದ್ಧಿಪಡಿಸುವ ಬಗ್ಗೆ ಬ್ರಿಟನ್‌ನಲ್ಲಿ ಆತಂಕವಿದೆ. ಒಟ್ಟಾರೆ, ಬ್ರಿಟನ್‌ನಲ್ಲಿ ಅಮೆರಿಕನ್ ಎಕ್ಸ್‌ಎಲ್ ಬುಲ್ಲಿಸ್ ಶ್ವಾನ ಬ್ಯಾನ್ ಆಗಿರೋದು, ಸಂಚಲನವನ್ನೇ ಸೃಷ್ಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ