newsfirstkannada.com

ಯಕ್ಷಗಾನಕ್ಕೆ ಅಗೌರವ ತೋರಿದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ.. ಕಣ್ಣೀರಿಟ್ಟ ಪಾತ್ರಧಾರಿ ಮಕ್ಕಳು; ಏನಾಯ್ತು?

Share :

10-11-2023

    ಕುಂದಾಪುರ ತಾಲೂಕಿನ ಹೇರಿಕುದ್ರು ಗ್ರಾಮದಲ್ಲಿ ಘಟನೆ

    ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಯಕ್ಷಗಾನ ರದ್ದು ಮಾಡಿದ್ರಾ?

    ಸಮಯದ ನೆಪವೊಡ್ಡಿ ಮಕ್ಕಳ ಯಕ್ಷಗಾನಕ್ಕೆ ಅಡ್ಡಗಾಲು

ಉಡುಪಿ: ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಒಂದು ಚಟುವಟಿಕೆಯಲ್ಲಿ ಆಸಕ್ತಿ ತೋರಿಸಿದರೆ ಅದನ್ನ ಮನಸ್ಸಿನಿಂದ ಇಷ್ಟ ಪಟ್ಟು ತೊಡಗಿಸಿಕೊಳ್ತಾರೆ. ಒಂದು ವೇಳೆ ಅವಮಾನ ಆದ್ರೆ ಮಕ್ಕಳ‌ ಮನಸ್ಸೇ ಮುರಿದೋಗುತ್ತೆ ಬಹಳಷ್ಟು ನೊಂದುಕೊಳ್ಳೋದು ಉಂಟು. ಆದ್ರೆ, ಉಡುಪಿಯಲ್ಲಿ ವ್ಯಕ್ತಿಯೊಬ್ಬ ಮಕ್ಕಳ ಮನಸ್ಸಿಗೆ ನೋವಾಗುವಂತ ಕೆಲಸ ಮಾಡಿದ್ದಾರೆ. ಜೊತೆಗೆ ಯಕ್ಷಗಾನಕ್ಕೆ ಅಪಮಾನ ಮಾಡಿದ್ದಾರೆ.

ಕರಾವಳಿಯಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ವಿಶೇಷ ಮಹತ್ವ ಇದೆ. ಗಂಡು ಕಲೆಯಾದ ಯಕ್ಷಗಾನದಲ್ಲಿ ಮಹಿಳೆಯರು, ಪುಟ್ಟ ಮಕ್ಕಳು ಕೂಡ ಪ್ರತಿಭೆಯನ್ನ ತೋರಿಸುತ್ತಾರೆ. ರಾತ್ರಿ ಸಮಯ ಎಷ್ಟೇ ಆದ್ರೂ ಯಕ್ಷಗಾನವನ್ನ ಆಸಕ್ತಿಯಿಂದ ನೋಡುವವರ ಸಂಖ್ಯೆ ಹೆಚ್ಚು. ಆದ್ರೆ ಇಲ್ಲೊಬ್ಬರು ಪಂಚಾಯತ್ ಉಪಾಧ್ಯಕ್ಷ ಸಮಯದ ನೆಪವೊಡ್ಡಿ ಮಕ್ಕಳ ಯಕ್ಷಗಾನಕ್ಕೆ ಅಡ್ಡಗಾಲು ಹಾಕಿದ್ದಾರೆ.

ಯಕ್ಷಗಾನಕ್ಕೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಿಂದ ಅಡ್ಡಿ!
ಮನೆಯಲ್ಲಿ ಕಣ್ಣೀರಿಟ್ಟ ಯಕ್ಷಗಾನ ಪಾತ್ರಧಾರಿ ಮಕ್ಕಳು!

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೇರಿಕುದ್ರು ಗ್ರಾಮದಲ್ಲಿ ಮಕ್ಕಳ ಯಕ್ಷಗಾನಕ್ಕೆ ಅದೇ ಗ್ರಾಮದ ವ್ಯಕ್ತಿಯೊಬ್ಬ ಅಡ್ಡಿಪಡಿಸಿದ್ದಾರೆ. ಮಹಾಗಣಪತಿ ಮಾನಸ ಮಂದಿರದ ಯಕ್ಷಗಾನ ಕೇಂದ್ರದಲ್ಲಿ ಏಳೆಂಟು ಮಕ್ಕಳು ಬಹಳ ಆಸಕ್ತಿಯಿಂದ ಯಕ್ಷಗಾನದಲ್ಲಿ ತೊಡಗಿಕೊಂಡಿದ್ರು. ಬಹಳಷ್ಟು ಸಮಯದಿಂದ ತರಬೇತಿ ಪಡೆದು ಮೊದಲ ಬಾರಿ ಯಕ್ಷಗಾನ ಪಾತ್ರ ಮಾಡುತ್ತಿದ್ರು. ಆ ಸಮಯದಲ್ಲೇ ರಾಕ್ಷಸನಂತೆ ಎಂಟ್ರಿ ಕೊಟ್ಟ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಉದಯ ಪೂಜಾರಿ ಯಕ್ಷಗಾನಕ್ಕೆ ಅಡ್ಡಿಪಡಿಸಿದ್ದಾರೆ. ಸಮಯ ಮೀರಿದೆ ಎಂಬ ನೆಪವೊಡ್ಡಿದ ಉದಯ ಪೂಜಾರಿ ಪೊಲೀಸರ ಮೂಲಕ ಆಟವನ್ನೇ ರದ್ದುಪಡಿಸಿದ್ದಾನೆ. ಇದರಿಂದ ನೊಂದ ಮಕ್ಕಳು ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ವೈಯಕ್ತಿಕ ವೈಮನಸ್ಸಿನಿಂದ ಯಕ್ಷಗಾನ ರದ್ದು ಮಾಡಿದ್ರಾ?

ಯಕ್ಷಗಾನ ಆಯೋಜಕ ಮಹಾಬಲ ಹೇರಿಕುದ್ರು ಹಾಗೂ ಉದಯ್ ಪೂಜಾರಿ ನಡುವಿನ ವೈಯುಕ್ತಿಕ ವೈಮನಸ್ಸೇ ಯಕ್ಷಗಾನ ರದ್ದಿಗೆ ಕಾರಣವಂತೆ. ಇದೇ ಮಹಾಗಣಪತಿ ಮಾನಸ ಮಂದಿರದ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತ ಯುವಕ ಉದಯಪೂಜಾರಿ. ಯಾವಾಗ ಈತ ಕಾಂಗ್ರೆಸ್ ಪಕ್ಷದಿಂದ ಗೆದ್ದು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಆದ್ನೋ ಯಕ್ಷಗಾನ ಕೇಂದ್ರದ ಮೇಲೆ ಜಿದ್ದನ್ನ ತೋರಿಸಿದ್ದಾನೆ. ತನ್ನ ಹಿಡಿತದಲ್ಲಿ ಯಕ್ಷಗಾನ ಕೇಂದ್ರವನ್ನು ಇಟ್ಟುಕೊಳ್ಳಲು ಯತ್ನಿಸಿದ್ದಾನೆ. ಹೀಗಾಗಿ ಮಕ್ಕಳ ಯಕ್ಷಗಾನಕ್ಕೆ ಅಡ್ಡಿಪಡಿಸಿದ್ದಾನೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೇ ಉದಯ್ ಪೂಜಾರಿ ಕ್ಷಮೆ ಕೇಳಬೇಕು ಅಂತ ಮೂರು ದಿನಗಳ ಕಾಲ ಡೆಡ್‌ಲೈನ್ ಕೊಡಲಾಗಿದೆ. ಇಲ್ಲದಿದ್ರೆ ಆತನ ಮನೆ ಹಾಗೂ ಕಚೇರಿ ಮುಂದೆ ಸಂಘಟನೆ ಜೊತೆ ಪ್ರತಿಭಟನೆ ನಡೆಸುತ್ತೇವೆ ಅಂತ ಮಹಾಬಲ ಹೇಗಿಕುದ್ರು ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಾರೆ, ಯಕ್ಷಗಾನ ಕಲೆ ಮೇಲೆ ಮಕ್ಕಳಿಗಿದ್ದ ಆಸಕ್ತಿಯನ್ನ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಾಗಿ ಗೌರವಿಸಬೇಕಿತ್ತು. ಆದ್ರೆ ವೈಯಕ್ತಿಕ ದ್ವೇಷ, ರಾಜಕೀಯ ವೈಷಮ್ಯದಿಂದ ಮಕ್ಕಳ ಮನಸ್ಸಿಗೆ ಘಾಸಿಯುಂಟು ಮಾಡಿದ್ದು ಎಷ್ಟು ಸರಿ? ಇನ್ನಾದರೂ ಕ್ಷಮೆ ಕೇಳಿ ಉಪಾಧ್ಯಕ್ಷ ಗ್ರಾಮದಲ್ಲಿ ಒಂದೊಳ್ಳೆ ವಾತಾವರಣ ನಿರ್ಮಿಸುತ್ತಾರಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಕ್ಷಗಾನಕ್ಕೆ ಅಗೌರವ ತೋರಿದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ.. ಕಣ್ಣೀರಿಟ್ಟ ಪಾತ್ರಧಾರಿ ಮಕ್ಕಳು; ಏನಾಯ್ತು?

https://newsfirstlive.com/wp-content/uploads/2023/11/udupi-3.jpg

Load More