newsfirstkannada.com

Delhi Rain: ಐತಿಹಾಸಿಕ ಪ್ರಸಿದ್ಧ ಕೆಂಪುಕೋಟೆಗೆ ನುಗ್ಗಿದ ಮಳೆ ನೀರು.. ಹಳೇ ದೆಹಲಿ ಬಹುತೇಕ ಜಲಾವೃತ..!

Share :

13-07-2023

    ದೆಹಲಿಯಲ್ಲಿ ಮಳೆ ನಿಂತರೂ ಅವಾಂತರ ನಿಂತಿಲ್ಲ

    ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಯಮುನಾ

    ಮನೆಗಳಿಗೆ ನುಗ್ಗಿದ ನೀರು, ಹೊಳೆಯಂತಾದ ರಸ್ತೆಗಳು

ನವದೆಹಲಿ: ಮಳೆರಾಯನ ಆರ್ಭಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ಇದೀಗ ಐತಿಹಾಸಿಕ ಕೆಂಪು ಕೋಟೆಗೂ ನೀರು ನುಗ್ಗಿದ್ದು, ಆತಂಕ ಸೃಷ್ಟಿಯಾಗಿದೆ.

ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಕೆಂಪು ಕೋಟೆ ಪಕ್ಕದ ರಸ್ತೆಯಲ್ಲಿ ನೀರು ನಿಂತಿದೆ. ಇದೇ ಮೊದಲ ಬಾರಿಗೆ ಕೆಂಪುಕೋಟೆಗೆ ನೀರು ನುಗ್ಗಿದೆ. ಯಮುನಾ ನದಿಯ ನೀರಿನಿಂದ ಹರಿವು ಕ್ಷಣಕ್ಷಣಕ್ಕೂ ಏರಿಕೆ ಆಗ್ತಿದೆ. ಹೀಗಾಗಿ ಕೆಂಪುಕೋಟೆ ಬಳಿಯಿರುವ ರಸ್ತೆ ಮೇಲೆ 6 ರಿಂದ 8 ಅಡಿ ನೀರು ನಿಂತಿದೆ. ಮಳೆಯ ಆರ್ಭಟಕ್ಕೆ ಹಳೆ ದೆಹಲಿ ಬಹುತೇಕ ಜಲಾವೃತಗೊಂಡಿದೆ.

ಸದ್ಯ ದೆಹಲಿಯ ಸುತ್ತಮುತ್ತ ಮಳೆ ಸುರಿಯೋದು ನಿಂತಿದೆ. ಆದರೆ ಮಳೆರಾಯನ ಅವಾಂತ ಮಾತ್ರ ಇನ್ನೂ ನಿಂತಿಲ್ಲ. ಯಮುನಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿರೋದ್ರಿಂದ ನಿವಾಸಿಗಳು ಪ್ರವಾಹದ ಆತಂಕಕ್ಕೆ ಒಳಗಾಗಿದ್ದಾರೆ. ಹಳೆಯ ರೈಲು ನಿಲ್ದಾಣ ಮುಳುಗಡೆಯಾಗಿದೆ. ಅಲ್ಲಲ್ಲಿ ರಸ್ತೆ ತುಂಬಾ ನೀರು ನಿಂತಿದೆ. ಇನ್ನು ಕಳೆದ 10 ವರ್ಷಗಳಲ್ಲೇ ಯಮುನಾ ನದಿ ನೀರಿನ ಮಟ್ಟದಲ್ಲಿ ಅತೀ ಹೆಚ್ಚು ಏರಿಕೆ ಕಂಡಿದೆ.

ದೆಹಲಿಯಲ್ಲಿ 48 ಗಂಟೆಯಲ್ಲಿ 153 ಮಿಲಿ ಮೀಟರ್ ಮಳೆ ಆಗಿದೆ. 1982 ರಿಂದ ದೆಹಲಿಯಲ್ಲಿ ಈ ರೀತಿಯ ಮಳೆ ಬಿದ್ದಿರಲಿಲ್ಲ. ವಾಡಿಕೆಗಿಂತ 107 ಮಿಲಿಮೀಟರ್ ಹೆಚ್ಚು ಮಳೆಯನ್ನು ಸ್ವೀಕರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Delhi Rain: ಐತಿಹಾಸಿಕ ಪ್ರಸಿದ್ಧ ಕೆಂಪುಕೋಟೆಗೆ ನುಗ್ಗಿದ ಮಳೆ ನೀರು.. ಹಳೇ ದೆಹಲಿ ಬಹುತೇಕ ಜಲಾವೃತ..!

https://newsfirstlive.com/wp-content/uploads/2023/07/KEMPUKOTE.jpg

Load More