newsfirstkannada.com

ಜವಾನ್​​ ಸಿನಿಮಾಗಾಗಿ ಶಾರುಖ್​ ಜತೆ ಕೈ ಜೋಡಿಸಿದ್ರಾ ಯಶ್​​..? ರಾಕಿಭಾಯ್​ ರೋಲ್​ ಏನು..?

Share :

28-08-2023

  ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​​ ಹೊಸ ಸಿನಿಮಾ ಜವಾನ್​​

  ಸೆಪ್ಟೆಂಬರ್​ 7ನೇ ತಾರೀಕು ರಿಲೀಸ್​ ಆಗಲಿದೆ ಜವಾನ್​ ಸಿನಿಮಾ!

  ಜವಾನ್​​ ಸಿನಿಮಾಗಾಗಿ ಶಾರುಖ್​​ ಜತೆಗೆ ಕೈ ಜೋಡಿಸಿದ್ರಾ ಯಶ್​​..?

ಬೆಂಗಳೂರು: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌. ಇವರು ತಮ್ಮ ನಟನೆ ಮೂಲಕವೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಇವರ ಹೊಸ ಸಿನಿಮಾ ಜವಾನ್​​​​ ರಿಲೀಸ್​ಗೆ ರೆಡಿಯಾಗಿದೆ. ಅಪಾರ ಜನ ಮನ್ನಣೆ ಗಳಿಸಿರೋ ಈ ಸಿನಿಮಾಗಾಗಿ ಶಾರುಖ್​​ ಖಾನ್​​ ಜತೆ ಪ್ಯಾನ್​ ಇಂಡಿಯಾ ಸ್ಟಾರ್​​ ರಾಕಿಭಾಯ್​​ ಯಶ್​​​ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

ಕಾಲಿವುಡ್​​ ಸೂಪರ್​​ ಹಿಟ್​​ ಡೈರೆಕ್ಟರ್​ ಅಟ್ಲಿ ಈ ಸಿನಿಮಾದ ನಿರ್ದೇಶಕರು. ಇವರ ನಿರ್ದೇಶನದ ಶಾರುಖ್​​​ ಅಭಿನಯದ ಈ ಸಿನಿಮಾ ಟೀಸರ್​​, ಟ್ರೈಲರ್​ ಈಗ ಸಾಕಷ್ಟು ಹಿಟ್​ ಆಗಿದೆ. ಸಿನಿಮಾದ ಹಾಡುಗಳು ಕೂಡ ಜನರ ಗಮನ ಸೆಳೆದಿವೆ.

ಜವಾನ್​ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ. ಹಿಂದಿಯಲ್ಲಿ ಶಾರುಖ್​ ಅವರೇ ಡಬ್​​​ ಮಾಡಿದ್ದು, ಬೇರೆ ಭಾಷೆಗಳಲ್ಲಿ ಮಾತ್ರ ವಿವಿಧ ಕಲಾವಿದರು ಧ್ವನಿ ನೀಡಿದ್ದಾರೆ. ಹೀಗಾಗಿ ಕನ್ನಡದಲ್ಲಿ ಯಶ್​​ ಡಬ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಸಿನಿಮಾಗೆ ರೇಟಿಂಗ್​ ನೀಡುವ ಐಎಂಡಿಬಿಯಲ್ಲಿ ಜವಾನ್​​ ಟಾಪ್​​ನಲ್ಲಿ ಇದೆ. ಈ ಪಟ್ಟಿಯಲ್ಲಿ ಕರಣ್​ ಜೋಹರ್​​, ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​​, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​​ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಗಿದೆ. ಸೆಪ್ಟೆಂಬರ್​​ 7ನೇ ತಾರೀಕು ರಿಲೀಸ್​ ಆಗೋ ಈ ಸಿನಿಮಾಗೆ ಕನ್ನಡದಲ್ಲಿ ಯಶ್​ ಡಬ್​ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜವಾನ್​​ ಸಿನಿಮಾಗಾಗಿ ಶಾರುಖ್​ ಜತೆ ಕೈ ಜೋಡಿಸಿದ್ರಾ ಯಶ್​​..? ರಾಕಿಭಾಯ್​ ರೋಲ್​ ಏನು..?

https://newsfirstlive.com/wp-content/uploads/2023/08/Yash_Shahrukh.jpg

Load More