ಅಶಿಸ್ತು ತೋರಿ ಅಂಗಳದಿಂದ ಹೊರನಡೆದಿದ್ದ ಜೈಸ್ವಾಲ್
ಫೀಲ್ಡ್ ತೊರೆಯುವಂತೆ ಕ್ಯಾಪ್ಟನ್ ರಹಾನೆ ಖಡಕ್ ಸೂಚನೆ
ವಿಜಯ್ ಹಜಾರೆ-IPL ನಲ್ಲಿ ಜೈಸ್ವಾಲ್ 'ಯಶಸ್ವಿ' ಪ್ರದರ್ಶನ
ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿರುವಂತೆ ಯಶಸ್ಸು ಅವರ ಬೆನ್ನೇರಿದೆ. ಟೀಮ್ ಇಂಡಿಯಾ ಪರ ಆಡುವ ಅವರ ಬಿಗ್ ಡ್ರೀಮ್ ನನಸಾಗುವ ಕಾಲ ದೂರವಿಲ್ಲ. ಇಲ್ಲಿ ತನಕ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದ 21ರ ಜೈಸ್ವಾಲ್ ಟೀಮ್ ಇಂಡಿಯಾ ಪರ ಹೂಂಕರಿಸಲು ಸಜ್ಜಾಗಿದ್ದಾನೆ. ಇದಕ್ಕೆಲ್ಲ ಕಾರಣ ಆ ಒಂದು ಅವಮಾನ. ಅಂದಾದ ಆ ಅಪಮಾನ ಜೈಸ್ವಾಲ್ರಲ್ಲಿ ಭಾರತ ಪರ ಆಡುವ ಕಿಡಿ ಹೊತ್ತಿಸಿದೆ.
ಯಶಸ್ವಿ ಜೈಸ್ವಾಲ್ ಇಷ್ಟು ದಿನ ಈ ಹೆಸರು ಬರೀ ಡೊಮೆಸ್ಟಿಕ್ ಕ್ರಿಕೆಟ್ ವಲಯದಲ್ಲಿ ಮಾತ್ರ ಕೇಳಿ ಬರ್ತಿತ್ತು. ಆದರೆ ಒಂದು ವಾರದ ಹಿಂದೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯ ಅನೌನ್ಸ್ ಆಗಿದ್ದೇ ಬಂತು. 21ರ ಜೈಸ್ವಾಲ್ ನೇಮ್ ಹಾಟ್ಟಾಫಿಕ್ ಆಗಿದೆ. ವಿಂಡೀಸ್ ಸರಣಿಗೆ ಸೆಲೆಕ್ಟ್ ಆಗಿರೋ ಲೆಫ್ಟಿ ಡ್ಯಾಶರ್, ಟೀಮ್ ಇಂಡಿಯಾ ಪರ ಅಬ್ಬರಿಸಲು ವೇದಿಕ್ಕೆ ಸಜ್ಜಾಗಿದೆ.
ಆದರೆ ನಿಮಗೆ ನೆನಪಿರಲಿ. ಈ ಫೈರಿ ಲೆಫ್ಟಿ ಬ್ಯಾಟ್ಸ್ಮನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದೇ ಈ ಒಂದು ಅವಮಾನ. ಈ ಅಪಮಾನ ಜೈಸ್ವಾಲ್ಗೆ ಟೀಮ್ ಇಂಡಿಯಾ ಡೋರ್ ಓಪನ್ ಆಗುವಂತೆ ಮಾಡಿದೆ. ಎಲ್ಲರ ಮುಂದೆ ತಲೆತಗ್ಗಿಸಿ ಹೊರನಡೆದ ಈ ಇನ್ಸಿಡೆಂಟ್ ಜೈಸ್ವಾಲ್ರಲ್ಲಿ ಹೊಸ ಹೋರಾಟದ ಕಿಚ್ಚನ್ನ ಹಚ್ಚಿಸಿತು. ಕಳೆದ ಹೋಗುತ್ತಿದ್ದ ಡೇರಿಂಗ್ ಬ್ಯಾಟ್ಸ್ಮನ್ ನ್ಯೂಸ್ ಪೇಪರ್ಗಳಲ್ಲಿ ಹೆಡ್ಲೈನ್ ಆಗುವಂತೆ ಮಾಡಿತು.
ಅಕಸ್ಮಾತ್ ಈ ಅಪಮಾನ ಆಗದಿದ್ರೆ ಯಶಸ್ವಿ ಆಟ ಬರೀ ದೇಶಿ ಕ್ರಿಕೆಟ್ಗೆ ಸೀಮಿತವಾಗ್ತಿತ್ತು. ಆದರೆ ಕಳೆದ ವರ್ಷ ದುಲೀಪ್ ಟ್ರೋಫಿ ವೇಳೆ ಆದ ಈ ಅಪಮಾನ ಜೈಸ್ವಾಲ್ ಬದುಕಿಗೆ ಹೊಸ ತಿರುವು ನೀಡ್ತು.
ಅಶಿಸ್ತು ತೋರಿ ಅಂಗಳದಿಂದ ಹೊರನಡೆದ ಜೈಸ್ವಾಲ್!
ಅಂಗಳ ತೊರೆಯುವಂತೆ ರಹಾನೆ ಖಡಕ್ ಸೂಚನೆ
ಜೈಸ್ವಾಲ್ ಕಳೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಅಶಿಸ್ತು ತೋರಿ ಬಾರಿ ಸುದ್ದಿಯಾಗಿದ್ರು. ರವಿ ತೇಜರನ್ನ ಪದೇ ಪದೇ ಕೆಣಕಿದ್ದರಿಂದ ಕ್ಯಾಪ್ಟನ್ ರಹಾನೆ ತಾಳ್ಮೆ ಜೈಸ್ವಾಲ್ರನ್ನ ಸ್ಟೇಡಿಯಂನಿಂದ ಹೊರನಡೆಯುವಂತೆ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ರು. ಈ ಘಟನೆಯಿಂದ ಯಂಗ್ ಬ್ಯಾಟ್ಸ್ಮನ್ ಅಂದು ಅವಮಾನಕ್ಕೊಳಗಾದ್ರು.
ಅಪಮಾನದ ಬಳಿಕ ಕೆರಳಿ ನಿಂತ ಯಂಗ್ ಟೈಗರ್
ವಿಜಯ್ ಹಜಾರೆ-IPL ನಲ್ಲಿ ‘ಯಶಸ್ವಿ’ ಪ್ರದರ್ಶನ
ಯಾವಾಗ ಅಶಿಸ್ತು ತೋರಿ ಸ್ಟೇಡಿಯಂನಿಂದ ಹೊರನಡೆದ್ರೋ ಆ ಘಟನೆಯನ್ನ ಚಾಲೆಂಜಸ್ ಆಗಿ ತೆಗೆದುಕೊಂಡ್ರು. ಪರಿಣಾಮ ಡೊಮೆಸ್ಟಿಕ್ನಲ್ಲಿ ಕ್ರಿಕೆಟ್‌ನಲ್ಲಿ ಜೈಸ್ವಾಲ್ ರನ್ ಭರಾಟೆ ನಡೆಸಿದ್ರು. ಯಾರ ಮುಂದೆ ತಲೆತಗ್ಗಿಸಿದ್ರೋ ಅವರೆಲ್ಲಾ ತಲೆ ಎತ್ತಿ ನೋಡುವಂಥ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡಿದ್ರು.
ಜೈಸ್ವಾಲ್ ‘ಯಶಸ್ವಿ’ ಪರ್ಫಾಮೆನ್ಸ್
ವಿಜಯ್ ಹಜಾರೆ 6 396
ರಣಜಿ ಟ್ರೋಫಿ 8 498
IPL 14 652
2022ರ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ ಮಳೆಯನ್ನ ಸುರಿಸಿದ ಯಶಸ್ವಿ ಜೈಸ್ವಾಲ್ 6 ಪಂದ್ಯಗಳಿಂದ 396 ರನ್ ಚಚ್ಚಿದ್ರು. ಬಳಿಕ ನಡೆದ ರಣಜಿ ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಿಂದ 498 ರನ್ ಗಳಿಸಿದ್ರು. ಇನ್ನು ಐಪಿಎಲ್‌ನಲ್ಲಿ ಧೂಳೆಬ್ಬಿಸಿದ ಜೈಸ್ವಾಲ್ 14 ಪಂದ್ಯದಲ್ಲಿ 652 ರನ್ ಬಾರಿಸಿ ಆರೆಂಜ್ ಕ್ಯಾಪ್ ವಿನ್ನರ್ ಆದ್ರು.
ಶೀಘ್ರದಲ್ಲೇ ಜೈಸ್ವಾಲ್ ಬಿಗ್ ಡ್ರೀಮ್ ನನಸು..!
ಡೊಮೆಸ್ಟಿಕ್ ಹಾಗೂ ಐಪಿಎಲ್‌ನಲ್ಲಿ ರನ್ ಗುಡ್ಡೆ ಹಾಕಿದ್ದ 21ರ ಡೇರಿಂಗ್ ಬ್ಯಾಟ್ಸ್ಮನ್ ಮುಂಬರೋ ವಿಂಡೀಸ್ ಟೆಸ್ಟ್ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಡ್ಫಾರ್ಮ್ನಿಂದ ಚೇತೇಶ್ವರ್ ಪೂಜಾರ ಅವರನ್ನ ತಂಡದಿಂದ ಡ್ರಾಪ್ ಮಾಡಲಾಗಿದೆ. ಅವರ ಬದಲಿ ಜೈಸ್ವಾಲ್ಗೆ ಮಣೆ ಹಾಕಲಾಗಿದೆ. ಹೀಗಾಗಿ ವೈಟ್ ಜೈರ್ಸಿಯಲ್ಲಿ ಜೈಸ್ವಾಲ್ ಆಡುವುದು ಬಹುತೇಕ ಖಚಿತ. ಭಾರತ ಪರ ಆಡುವ ಬಿಗ್ ಡ್ರೀಮ್ ಕೂಡ ಈಡೇರಿದಂತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ