newsfirstkannada.com

ಟಿವಿಯಲ್ಲಿ ಮಗನ ಸೆಂಚುರಿ ನೋಡಿ ತಾಯಿ ಕಣ್ಣೀರು, ಯಾತ್ರೆಗೆ ಹೊರಟ ತಂದೆ; ಹೆತ್ತವರಿಗೆ ಯಶಸ್ವಿ ಜೈಸ್ವಾಲ್ ಕೊಟ್ಟ ಗಿಫ್ಟ್ ಏನು?

Share :

16-07-2023

  ವೆಸ್ಟ್​ ಇಂಡೀಸ್​ ವಿರುದ್ಧ ಓಪನರ್​ ಆಗಿ ಜೈಸ್ವಾಲ್ ಬ್ಯಾಟಿಂಗ್​

  ಅಮೋಘವಾದ ಸೆಂಚುರಿ ಸಿಡಿಸಿ ಮೈದಾನದಲ್ಲಿ ಸಂಭ್ರಮ

  ಮುಂಬೈನಲ್ಲಿನ ಕುಟುಂಬಕ್ಕೆ ಉಡುಗೊರೆ ನೀಡಿದ ಜೈಸ್ವಾಲ್

ಇಂಡಿಯನ್ ಪ್ರೀಮಿಯರ್​ ಲೀಗ್ (IPL)ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಎಡಗೈ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​ ಇಂಟರ್​ನ್ಯಾಷನಲ್​ ಕ್ರಿಕಟ್​ಗೆ ಮೊನ್ನೆ ಡೆಬ್ಯು ಮಾಡಿದ್ದರು. ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ ಮ್ಯಾಚ್​ನಲ್ಲಿ ಓಪನರ್​ ಆಗಿ ಬಂದಿದ್ದ ಜೈಸ್ವಾಲ್​, ಕ್ಯಾಪ್ಟನ್​ ರೋಹಿತ್​ ಜೊತೆ ಸೇರಿ ಭಾರತಕ್ಕೆ ಭರ್ಜರಿ ಬುನಾದಿ ಹಾಕಿಕೊಟ್ಟಿದ್ದರು. ಅಲ್ಲದೇ ಸೆಂಚುರಿ ಸಿಡಿಸಿ ಮೈದಾನಲ್ಲಿ ಸಂಭ್ರಮಿಸಿದ್ದ ಜೈಸ್ವಾಲ್ ಇದೀಗ ತನ್ನ ಕುಟುಂಬಕ್ಕೆ ಬಿಗ್​ ಗಿಫ್ಟ್​ ಕೊಟ್ಟಿದ್ದಾರೆ. ​​ ​

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯು ಮಾಡಿದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ ತನ್ನ ಕುಟುಂಬಕ್ಕೆ ಬಿಗ್ ಗಿಫ್ಟ್ ನೀಡಿದ್ದಾರೆ. ಮುಂಬೈನಲ್ಲಿರುವ ಜೈಸ್ವಾಲ್ ಫ್ಯಾಮಿಲಿ 2 BHK (ಬೆಡ್​ರೂಮ್, ಹಾಲ್, ಕಿಚನ್) ಮನೆಯಿಂದ 5 BHK ಫ್ಲಾಟ್​ಗೆ ಶಿಫ್ಟ್ ಆಗಿದ್ದಾರೆ. 21 ವರ್ಷದ ಯಶಸ್ವಿ ಜೈಸ್ವಾಲ್ ಕೆರಿಬಿಯನ್​ ಎದುರು ಆಡಿದ ಪದಾರ್ಪಣೆ ಟೆಸ್ಟ್​ನಲ್ಲಿ ಅಮೋಘ 171 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಇದನ್ನು ಓದಿ: Watch: ಟೀಮ್ ಇಂಡಿಯಾದಲ್ಲಿ ಎಂಟರ್‌ಟೈನರ್ ಅಂದ್ರೆ ಕಿಂಗ್​ ಕೊಹ್ಲಿ.. ಕ್ಯಾಚ್​ ಬಿಟ್ರೂ ಡ್ಯಾನ್ಸ್​ ಮಾತ್ರ ಬಿಡದ ವಿರಾಟ್

ಇನ್ನು ಯಶಸ್ವಿ ಜೈಸ್ವಾಲ್​ ಅವರ ಸಹೋದರ ಹಾಗೂ ತಾಯಿ 5 BHK ಫ್ಲಾಟ್​ನಲ್ಲಿ ಕುಳಿತು ಜೈಸ್ವಾಲ್​ ಸೆಂಚುರಿ ಬಾರಿಸಿದ ಕ್ಷಣಗಳನ್ನು ನೋಡಿ ಖುಷಿ ಪಟ್ಟರು. ಸೆಂಚುರಿ ಬಾರಿಸುತ್ತಿದ್ದಂತೆ ತಂದೆ ಭೂಪೇಂದ್ರ ಅವರು ಮಗನಿಗೆ ಒಳ್ಳೆಯದಾಗಲೆಂದು ಉತ್ತರ ಪ್ರದೇಶದ ಹರಿದ್ವಾರದಲ್ಲಿರುವ ಪವಿತ್ರ ಕನ್ವರ್ ಯಾತ್ರೆಗೆ ಹೋಗಿದ್ದಾರೆ. ಕೈಯಲ್ಲಿ ದಂಡ, ಪವಿತ್ರ ಗಂಗಾಜಲವನ್ನ ಹೊತ್ತು ನೂರಾರು ಕಿಲೋ ಮೀಟರ್‌ ಕಾಲು ನಡಿಗೆಯಲ್ಲಿ ಕನ್ವರ್​ನಲ್ಲಿನ ಶಿವಲಿಂಗದ ಜಲಾಭಿಷೇಕ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಿವಿಯಲ್ಲಿ ಮಗನ ಸೆಂಚುರಿ ನೋಡಿ ತಾಯಿ ಕಣ್ಣೀರು, ಯಾತ್ರೆಗೆ ಹೊರಟ ತಂದೆ; ಹೆತ್ತವರಿಗೆ ಯಶಸ್ವಿ ಜೈಸ್ವಾಲ್ ಕೊಟ್ಟ ಗಿಫ್ಟ್ ಏನು?

https://newsfirstlive.com/wp-content/uploads/2023/07/YASHASVI_JAISWAL.jpg

Load More