newsfirstkannada.com

ಟೆಸ್ಟ್​ ಕ್ರಿಕೆಟ್​ನ ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ 171 ರನ್.. ಶ್ರಮಕ್ಕೆ ಸಿಕ್ಕ ಪ್ರತಿಫಲದ ‘ಮೊದಲ ಶತಕ’ ಅರ್ಪಿಸಿದ್ದು ಯಾರಿಗೆ..?

Share :

15-07-2023

    ಮಗನ ಕ್ರಿಕೆಟ್​ಗಾಗಿಯೇ ಯುಪಿ ಬಿಟ್ಟು ಮುಂಬೈಗೆ ಬಂದಿದ್ದರು

    ಕಡುಕಷ್ಟದಲ್ಲೇ ಜೈಸ್ವಾಲ್​​ಗೆ ಬೆನ್ನುಲುಬಾಗಿ ನಿಂತಿದ್ದ ಪೋಷಕರು

    ಕೆರಿಬಿಯನ್​ರಿಗೆ ಬೆವರಿಳಿಸಿತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್

ವಿಂಡೀಸ್ ಎದುರು ವಿಜೃಂಭಿಸಿದ ಯಶಸ್ವಿ ಜೈಸ್ವಾಲ್, ಟೆಸ್ಟ್​ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು. ಆದರೆ, ಒಂದು ಕಡೆ ಯಶಸ್ವಿ ಅಬ್ಬರಿಸಿ ತಂದೆ-ತಾಯಿಗೆ ಶತಕವನ್ನ ಅರ್ಪಿಸಿದರೆ, ಮತ್ತೊಂದೆಡೆ ಮಗನ ಆಟ ಕಣ್ತುಂಬಿಕೊಂಡ ತಂದೆ ಕವಾಡ ಯಾತ್ರೆಗೆ ತೆರಳಿದ್ದಾರೆ.

ಇದು ನಿಜಕ್ಕೂ ರೆಕಾರ್ಡ್​ ಬ್ರೇಕಿಂಗ್ ಇನ್ನಿಂಗ್ಸ್. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಯಶಸ್ವಿ ಜೈಸ್ವಾಲ್​ರ ಈ ಸೂಪರ್ ಸಾಲಿಡ್ ಇನ್ನಿಂಗ್ಸ್​ ನಿಜಕ್ಕೂ ಹೊಸ ಹುಮ್ಮಸ್ಸು. ಹೊಸ ನಿರೀಕ್ಷೆಯನ್ನೇ ಹುಟ್ಟು ಹಾಕಿದೆ. ಇದಕ್ಕೆಲ್ಲ ಕಾರಣ ಟೀಮ್ ಇಂಡಿಯಾದ ಬದಲಾವಣೆಯ ಪರ್ವ. ಈ ಬದಲಾವಣೆಯ ಪರ್ವದಲ್ಲಿ ಸಿಕ್ಕ ಒಂದೇ ಚಾನ್ಸ್​ನಲ್ಲಿ ತನ್ನ ಸಾಮರ್ಥ್ಯವನ್ನ ಹೊರಗಾಕಿದ ಯಶಸ್ವಿ, ಭವಿಷ್ಯದ ಯಶಸ್ವಿ ನಾವಿಕನಾಗೋ ಎಲ್ಲ ಭರವಸೆಯನ್ನು ಮೂಡಿಸಿದ್ದಾರೆ.

ಚೊಚ್ಚಲ ಪಂದ್ಯದಲ್ಲೇ ವಯಸ್ಸಿಗೂ ಮೀರಿದ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೊಚ್ಚಲ ಶತಕ ತಂದೆ-ತಾಯಿಗೆ ಅರ್ಪಣೆ

ಡೆಬ್ಯು ಮ್ಯಾಚ್​ನಲ್ಲಿ ಮಿಂಚಿದ ಯಶಸ್ವಿ ಸಕ್ಸಸ್​ ಹಿಂದೆ, ತಂದೆ ತಾಯಿಯ ಪಾತ್ರ ಅತ್ಯಮೂಲ್ಯ. ಕಡುಕಷ್ಟದಲ್ಲೇ ಯಶಸ್ವಿ ಜೈಸ್ವಾಲ್​​ಗೆ ಬೆನ್ನುಲುಬಾಗಿ ನಿಂತಿದ್ದ ಪೋಷಕರು, ಮಗ ಕ್ರಿಕೆಟರ್ ಆಗೋ ಆಸೆಗೆ ಇನ್ನಷ್ಟು ಬಲ ತುಂಬಿದ್ದರು. ಆ ಕಡುಕಷ್ಟದ ನಡುವೆ ಯಶ್ವಲ್​​ರ ಪರಿಶ್ರಮದ ಪ್ರತಿಫಲವೇ ಇಂದು ಜೈಸ್ವಾಲ್, ಟೀಮ್ ಇಂಡಿಯಾ ಎಂಟ್ರಿ ಅನ್ನೋದನ್ನ ಮರೆಯುವಂತಿಲ್ಲ. ಆದ್ರೆ, ಈ ಅದ್ಭುತ ಇನ್ನಿಂಗ್ಸ್​ ಬಳಿಕ ಹಿಂದಿನ ಕಷ್ಟವನ್ನ ಮರೆಯದ ಯಶಸ್ವಿ ಜೈಸ್ವಾಲ್, ಚೊಚ್ಚಲ ಶತಕವನ್ನ ತಮ್ಮ ಪೋಷಕರಿಗೆ ಅರ್ಪಿಸುವುದನ್ನ ಮರೆಯಲಿಲ್ಲ.

ಇತ್ತ ಮಗ ಯಶಸ್ವಿ ಜೈಸ್ವಾಲ್​​ ತಂದೆ-ತಾಯಿಗೆ ಸೆಂಚುರಿ ಅರ್ಪಿಸಿ ಭಾವುಕರಾದ್ರೆ. ಅತ್ತ ಮಗನ ಸಾಧನೆ ಬಗ್ಗೆ ತಂದೆ-ತಾಯಿಯ ಹರ್ಷ ಮುಗಿಲು ಮುಟ್ಟಿತ್ತು.

ತೀರ್ಥಯಾತ್ರೆಗೆ ಹೊರಟ ಯಶಸ್ವಿ ತಂದೆ..!

ವಿಂಡೀಸ್ ನೆಲದಲ್ಲಿ ಯಶಸ್ವಿ ಪರಾಕ್ರಮ ಆಟಕ್ಕೆ ಮನಸೋತಿದ್ದ ತಂದೆ ಭೂಪೇಂದ್ರ, ಸಂತೋಷದ ಅಲೆಯಲ್ಲಿದ್ದರು. ಅಷ್ಟೇ ಅಲ್ಲ, ಮಗನ ಆಸೆ ಪೂರ್ಣಗೊಳ್ಳಲಿ ಅನ್ನೋ ಕಾರಣಕ್ಕೆ ತೀರ್ಥಯಾತ್ರೆಕ್ಕೆ ಹೊರಟರು. ಅದು ಕೂಡ ಬರಿ ಕಾಲಿನಲ್ಲೇ ಅನ್ನೋದು ವಿಶೇಷ.

ಉತ್ತರ ಪ್ರದೇಶದ ಹರಿದ್ವಾರದಲ್ಲಿರುವ ಪವಿತ್ರ ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಕೈಯಲ್ಲಿ ದಂಡವನ್ನ ಹೊತ್ತಿರುವ ಯಶಸ್ವಿ ತಂದೆ, ಕೇಸರಿ ಬಣ್ಣದ ಬಟ್ಟೆ ಧರಿಸಿ, ಪವಿತ್ರ ಗಂಗಾಜಲವನ್ನ ಹೊತ್ತು ನೂರಾರು ಕಿಲೋ ಮೀಟರ್‌ ಕಾಲ್ನಡಿಗೆಯಲ್ಲೇ ಕನ್ವರ್​ಗೆ ತಲುಪಿರುವ ಯಶಸ್ವಿ ಜೈಸ್ವಾಲ್ ತಂದೆ, ಶಿವಲಿಂಗದ ಜಲಾಭಿಷೇಕವನ್ನ ಮಾಡಲಿದ್ದಾರೆ.

ಈ ವೇಳೆ ಮಗನ ಬಗ್ಗೆ ಮಾತನಾಡಿರೋ ಭೂಪೇಂದ್ರ ಶಿವನಿಗೆ ಕೃತಜ್ಞತೆ ಸಲ್ಲಿಸಲು ಹೊರಟರು.

ನಮ್ಮ ಕುಟುಂಬದಲ್ಲಿ ತುಂಬಾ ಖುಷಿಯಿದೆ. ನಮ್ಮ ಊರಿನ ಜನರೂ ಕೂಡ ತುಂಬಾ ಖುಷಿಯಲ್ಲಿದ್ದಾರೆ. ಯಶಸ್ವಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನನ್ನ ಮಗ ಡಬಲ್ ಸೆಂಚೂರಿ ಹೊಡೆದು, ದೇಶ, ನಮ್ಮ ಜಿಲ್ಲೆ, ಉತ್ತರ ಪ್ರದೇಶದ ಕೀರ್ತಿ ಹೆಚ್ಚಿಸಲಿ. ಬಾಬಾ ಮಗನ ಆಸೆ ಪೂರೈಸಲಿ ಅಂತಾ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.

ಭೂಪ್ರೇಂದ್ರ, ಯಶಸ್ವಿ ತಂದೆ

ಯಶಸ್ವಿ ಜೈಸ್ವಾಲ್​​ ತಂದೆಯ ಈ ಆಸೆಯ ಹಿಂದೆ ಹಲವು ವರ್ಷಗಳ ತಪಸ್ಸೇ ಇದೆ. ಯಾಕಂದ್ರೆ, ಎಲ್ಲೋ ದೂರ ಉತ್ತರ ಪ್ರದೇಶದಲ್ಲಿದ್ದ ಜೈಸ್ವಾಲ್ ಕುಟುಂಬ, ಮಗ ಕ್ರಿಕೆಟಿಗನಾಗಬೇಕೆಂಬ ಆಸೆಗಾಗಿ 11ನೇ ವಯಸ್ಸಿನಲ್ಲಿ ಮುಂಬೈಗೆ ಬಂದಿಳಿದ್ದರು. ಮಳೆ ಗಾಳಿ ಎನ್ನದೆ 3 ವರ್ಷಗಳ ಕಾಲ ಟೆಂಟ್‌ನಲ್ಲಿ ವಾಸವಿದ್ದರು. ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಪಾನಿಪುರಿ ಮತ್ತು ಹಣ್ಣುಗಳನ್ನು ಮಾರುತ್ತಾ ಬದುಕು ಸಾಗಿಸಿದ್ರು.

ಒಂದು ಕಡೆ ಕುಟುಂಬ ಕಡುಕಷ್ಟದಲ್ಲಿ ತೇಲಾಡಿದ್ರೆ. ಇತ್ತ ಯಶಸ್ವಿ ಜೈಸ್ವಾಲ್​ರ ಗೆಲ್ಲುವ ಛಲದಲ್ಲೇ ಅಂಗಳದಲ್ಲಿ ಹೋರಾಟ ನಡೆಸಿದ್ರು. ಆ ಹಾರ್ಡ್​​ ವರ್ಕ್​, ಡೆಡಿಕೇಶನ್, ಕಮಿಟ್​​ಮೆಂಟ್​ನ ಪ್ರತಿಫಲವೇ ಟೀಮ್ ಇಂಡಿಯಾ ಎಂಬ ಅದೃಷ್ಟ ಬಾಗಿಲು ತೆಗೆದಿತ್ತು ಅನ್ನೋದನ್ನ ಮರೆಯುವಂತಿಲ್ಲ. ಅದೇನೇ ಆಗಲಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕ ಮೊದಲ ಪ್ರಯತ್ನದಲ್ಲೇ ಸಕ್ಸಸ್​​ ಕಂಡಿರುವ ಯಶಸ್ವಿ, ಮತ್ತಷ್ಟು ಯಶಸ್ಸು ಸಾಧಿಸಲಿ ಅನ್ನೋದೇ ಎಲ್ಲರ ಅಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೆಸ್ಟ್​ ಕ್ರಿಕೆಟ್​ನ ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ 171 ರನ್.. ಶ್ರಮಕ್ಕೆ ಸಿಕ್ಕ ಪ್ರತಿಫಲದ ‘ಮೊದಲ ಶತಕ’ ಅರ್ಪಿಸಿದ್ದು ಯಾರಿಗೆ..?

https://newsfirstlive.com/wp-content/uploads/2023/07/YASHASVI_JAISWAL_FATHER.jpg

Load More