ತುಂಬಾ ದಿನಗಳ ಬಳಿಕ ರೋಹಿತ್ ಬ್ಯಾಟ್ನಿಂದ ಶತಕ
ವಿಕೆಟ್ ಉರುಳಿಸಲು ಕೆರಿಬಿಯನ್ ಪಡೆ ಸುಸ್ತೋ.. ಸುಸ್ತು
ಇಂದಿಗೂ ಕ್ರೀಸ್ ಕಾಯ್ದುಕೊಂಡಿರುವ ಯಶಸ್ವಿ ಜೈಸ್ವಾಲ್..!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನ 2ನೇ ದಿನದಾಟದಲ್ಲೂ ಟೀಮ್ ಇಂಡಿಯಾದ್ದೇ ದರ್ಬಾರ್. ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಲೀಲಾಜಾಲವಾಗಿ ರನ್ಗಳಿಸ್ತಾ ಇದ್ರೆ, ವಿಂಡೀಸ್ ಪಡೆ ವಿಕೆಟ್ಗಾಗಿ ಪರದಾಟ ನಡೆಸ್ತು. ಇಂಡೋ- ಕೆರಿಬಿಯನ್ ಫೈಟ್ನ 2ನೇ ದಿನದಾಟ ಹೇಗಿತ್ತು ಗೊತ್ತಾ..?
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಮೊದಲ ದಿನದಾಟದಲ್ಲಿ ಬೌಲಿಂಗ್ನಲ್ಲಿ ಕಮಾಲ್ ಮಾಡಿದ ರೋಹಿತ್ ಪಡೆ, 2ನೇ ದಿನದಾಟದಲ್ಲಿ ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಮೆರೆಯಿತು.
2ನೇ ದಿನದಾಟದಲ್ಲೂ ಟೀಮ್ ಇಂಡಿಯಾ ಪ್ರಾಬಲ್ಯ
ವಿಕೆಟ್ ನಷ್ಟವಿಲ್ಲದೆ 80 ರನ್ಗಳೊಂದಿಗೆ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, 2ನೇ ದಿನದಾಟದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸ್ತು. ಟೀಮ್ ಇಂಡಿಯಾ ಆಟಗಾರರ ತಾಳ್ಮೆಯ ಆಟಕ್ಕೆ ವಿಂಡೀಸ್ ಪಡೆ ತತ್ತರಿಸಿತು. ತವರಿನ ಅಂಗಳದಲ್ಲಿ ಕೆರಿಬಿಯನ್ ಬೌಲರ್ಸ್ ವಿಕೆಟ್ ಬೇಟೆಗೆ ಹೆಣಗಾಡಿದ್ರು.
ಸೆಂಚೂರಿ ಸಿಡಿಸಿ ಘರ್ಜಿಸಿದ ಯಶಸ್ವಿ ಜೈಸ್ವಾಲ್
40 ರನ್ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಜೈಸ್ವಾಲ್, 2 ದಿನದಾಟದಲ್ಲೂ ಸಾಲಿಡ್ ಆಟವಾಡಿದ್ರು. ಕ್ಯಾಪ್ಟನ್ ರೋಹಿತ್ ಜೊತೆಗೆ ಮನಮೋಹಕ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್, ಡೆಬೂ ಮ್ಯಾಚ್ನಲ್ಲೇ ಸೆಂಚುರಿ ಸಿಡಿಸಿ ಘರ್ಜಿಸಿದ್ರು. 215 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದ್ರು.
ನಾಯಕ ರೋಹಿತ್ ಶರ್ಮಾ ಶತಕ ವೈಭವ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ವಿಂಡೀಸ್ ಬೌಲರ್ಗಳನ್ನ ಕಾಡಿದ್ರು. ತಾಳ್ಮೆಯ ಆಟವಾಡಿದ ಹಿಟ್ಮ್ಯಾನ್, ಜಬರ್ದಸ್ತ್ ಇನ್ನಿಂಗ್ಸ್ ಕಟ್ಟಿದ್ರು. ಫಾರ್ಮ್ ಬಗೆಗಿನ ಟೀಕೆಗಳಿಗೆ ಶತಕದ ಉತ್ತರ ನೀಡಿದ್ರು. ಟೆಸ್ಟ್ ಕರಿಯರ್ನ 10ನೇ ಸೆಂಚೂರಿ ಪೂರೈಸೋದ್ರೊಂದಿಗೆ ವಿದೇಶದಲ್ಲಿ 2ನೇ ಟೆಸ್ಟ್ ಶತಕ ಸಿಡಿಸಿದ ಸಾಧನೆ ಮಾಡಿದ್ರು.
ಸೆಂಚೂರಿ ಸ್ಟಾರ್ಗಳ ದ್ವಿಶತಕದ ಜೊತೆಯಾಟ
ಡೊಮಿನಿಕಾದಲ್ಲಿ ಡಾಮಿನೇಟಿಂಗ್ ಇನ್ನಿಂಗ್ಸ್ ಕಟ್ಟಿದ ರೋಹಿತ್ ಶರ್ಮಾ- ಯಶಸ್ವಿ ಜೈಸ್ವಾಲ್ ದ್ವಿಶತಕದ ಜೊತೆಯಾಟ ವಾಡಿದ್ರು. ಮೊದಲ ವಿಕೆಟ್ಗೆ 229 ರನ್ಗಳ ಕಾಣಿಕೆ ನೀಡಿ ಮುನ್ನಡೆಗೆ ಕಾರಣರಾದ್ರು. 103 ರನ್ಗಳಿಸಿ ರೋಹಿತ್ ಶರ್ಮಾ ಔಟಾದ್ರು.
3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಫೇಲ್.!
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಪ್ಲಾಫ್ ಆದ್ರು. ಜೊಮೆಲ್ ವಾರಿಕನ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿದ್ದ ಅಲಿಕ್ ಅಥಾನಝೆಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
ಕಿಂಗ್ ಕೊಹ್ಲಿಯ ತಾಳ್ಮೆಯ ಮಂತ್ರ, ಜೈಸ್ವಾಲ್ ಅಜೇಯ
ಗಿಲ್ ನಿರ್ಗಮನದ ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ ತಾಳ್ಮೆಯ ಆಟದ ಮೊರೆ ಹೋಗಿದ್ದಾರೆ. ಬರೋಬ್ಬರಿ 96 ಎಸೆತಗಳನ್ನ ಎದುರಿಸಿದ ಕೊಹ್ಲಿ, ಕೇವಲ 1 ಬೌಂಡರಿ ಸಿಡಿಸಿದ್ದು, 36 ರನ್ ಗಳಿಸಿದ್ದಾರೆ. ಇನ್ನು ಸಾಲಿಡ್ ಇನ್ನಿಂಗ್ಸ್ ಬ್ಯುಲ್ಡ್ ಮಾಡಿರೋ ಯಶಸ್ವಿ ಜೈಸ್ವಾಲ್ ರನ್ಬೇಟೆ ಮುಂದುವರೆಸಿದ್ದಾರೆ.
2ನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 312 ರನ್ಗಳಿಸಿದ್ದು, 162 ರನ್ಗಳ ಮುನ್ನಡೆ ಸಾಧಿಸಿದೆ. ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಇಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ