newsfirstkannada.com

ಧೋನಿ, ಕೊಹ್ಲಿ ಹೇರ್​ಸ್ಟೈಲ್ ಮೀರಿಸುತ್ತಾರಾ ಯಶಸ್ವಿ ಜೈಸ್ವಾಲ್​.. ಯಂಗ್ ಪ್ಲೇಯರ್ ಸೆನ್ಸೇಷನ್ ಯಾಕೆ?

Share :

Published July 5, 2024 at 6:14am

  ಪ್ರಧಾನಿ ಭೇಟಿ ಮಾಡಿದ್ದ ಟೀಮ್ ಇಂಡಿಯಾದ ಎಲ್ಲ ಆಟಗಾರರು

  ಧೋನಿ, ಕೊಹ್ಲಿ ಕೇಶವಿನ್ಯಾಸದ ಫೋಟೋ ಸಲೂನ್​ನಲ್ಲಿ​ ಇರ್ತವೆ

  ನ್ಯೂ ಲುಕ್​​ನಲ್ಲಿ ಜೈಸ್ವಾಲ್ ಕಾಣಿಸಿದ್ದಕ್ಕೆ ನೆಟ್ಟಿಗರು ಏನು ಅಂತಿದ್ದಾರೆ?

ಎಂ.ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿಯವರು ವಿಧವಿಧವಾದ ಹೇರ್​ಸ್ಟೈಲ್​​ನಿಂದ ಅಭಿಮಾನಿಗಳ ಮನ ಗೆದ್ದವರು. ಇವರ ಒಂದೊಂದು ಹೇರ್​ಸ್ಟೈಲ್ ಫ್ಯಾಶನ್​ಗೆ ಇಡೀ ಭಾರತದ ಯುವಕರು ಮಾರು ಹೋಗಿದ್ದರು ಎನ್ನಬಹುದು. ಏಕೆಂದರೆ ಇವರ ಕೂದಲಿನ ವಿನ್ಯಾಸದ ಫೋಟೋಗಳನ್ನು ಈಗಲೂ ಸಲೂನ್​ಗಳಲ್ಲಿ ಕಾಣಬಹುದು. ಆದರೆ ಇದೇ ಹೇರ್​ಸ್ಟೈಲ್​ ವಿಚಾರಕ್ಕೆ ಟೀಮ್ ಇಂಡಿಯಾದ ಯಂಗ್ ಮ್ಯಾನ್ ಫುಲ್ ವೈರಲ್ ಆಗುತ್ತಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?

ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡ ನಿನ್ನೆ ಪ್ರಧಾನಿ ಮೋದಿಯವರನ್ನ ದೆಹಲಿಯ ಲೋಕ್​ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ಭೇಟಿ ಮಾಡಿತ್ತು. ಪ್ರಧಾನಿ ಭೇಟಿಗೆ ಪ್ಲೇಯರ್ಸ್ ಬರುವಾಗ ಕೆಲ ನಿಯಮಗಳನ್ನು ಪಾಲಿಸಲಾಗಿತ್ತು. ಕ್ರಿಕೆಟಿಗರು ನ್ಯೂ ಲುಕ್​​ನಲ್ಲಿ ಕಣಿಸಿಕೊಂಡಿದ್ದರು. ಆದರೆ ಈ ವೇಳೆ ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಹೇರ್​​ಸ್ಟೈಲ್​ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್​ ಸೃಷ್ಟಿಸಿದೆ. ಏಕೆಂದರೆ ಮಗು ಶಾಲೆಗೆ ಹೋಗುವಾಗ ಅಮ್ಮ ಯಾವ ರೀತಿ ತಲೆ ಬಾಚುತ್ತಾರೋ ಆ ರೀತಿ ಯಶಸ್ವಿ ಜೈಸ್ವಾಲ್ ಕೇಶವಿನ್ಯಾಸವಿತ್ತು. ಇದನ್ನೇ ಟ್ರೋಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: 9 ಕಿ.ಮೀ ವರ್ಲ್ಡ್‌ಕಪ್ ಟ್ರೋಫಿ ಮೆರವಣಿಗೆ.. ವಾಂಖೇಡೆಗೆ ಹರಿದು ಬಂದ ಜನಸಾಗರ; ಉಚಿತ ಪ್ರವೇಶ!

ಯಶಸ್ವಿ ಜೈಸ್ವಾಲ್​​ ಪೇರೆಂಟ್ಸ್ ಮೀಟಿಂಗ್ ಹೋಗುವುದಕ್ಕಾಗಿ ನೀಟ್​ ಆಗಿ ಬಾಚಿಕೊಂಡಿದ್ದಾರೆ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಭಾರತದ ಪ್ರತಿ ಅಮ್ಮನ ಪ್ರೀತಿಯ ಹೇರ್​ಸ್ಟೈಲ್ ಇದು ಎಂದು ಜೈಸ್ವಾಲ್ ಫೋಟೋ ಶೇರ್ ಮಾಡಿದ್ದಾನೆ. ಮತ್ತೊಬ್ಬ ಯಾವಾಗ ನಿಮ್ಮ ಅಮ್ಮ ತಲೆ ಬಾಚುತ್ತಾರೋ ಈ ಹೇರ್​ಸ್ಟೈಲ್ ಬರುವುದು ಕಾಮನ್ ಎಂದು ಜೈಸ್ವಾಲ್ ಮತ್ತು ಬೇಬಿ ಫೋಟೋ ಶೇರ್ ಮಾಡಿದ್ದಾರೆ. ಹೀಗೆ ವಿವಿಧ ರೀತಿಯ ಕಾಮೆಂಟ್ಸ್​​ ಬರೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ, ಕೊಹ್ಲಿ ಹೇರ್​ಸ್ಟೈಲ್ ಮೀರಿಸುತ್ತಾರಾ ಯಶಸ್ವಿ ಜೈಸ್ವಾಲ್​.. ಯಂಗ್ ಪ್ಲೇಯರ್ ಸೆನ್ಸೇಷನ್ ಯಾಕೆ?

https://newsfirstlive.com/wp-content/uploads/2024/07/JAISWAL.jpg

Load More