newsfirstkannada.com

‘ಟೀಂ ಇಂಡಿಯಾಗೆ ಸಿಕ್ಕೇಬಿಟ್ಟ ಮತ್ತೊಬ್ಬ ಗಂಗೂಲಿ..’: ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಸೆಂಚುರಿ.. ಹೇಗಿದೆ ‘ಯಶಸ್ವಿ’ನ ಆಟ..?

Share :

14-07-2023

    ಅಗಾಧವಾದ ತಾಳ್ಮೆ, ಟಾಪ್ ಕ್ಲಾಸ್ ಟೆಂಪರ್ಮೆಂಟ್

    ಕೆರಿಬಿಯನ್ ನಾಡಲ್ಲಿ ಜೈಸ್ವಾಲ್ ಯಶಸ್ವಿನ ಓಟ

    ಯುವ ಆಟಗಾರನಿಗೆ ಅಭಿಮಾನಿಗಳ ಬಹುಪರಾಕ್

ಬಡತನದ ಬೇಗೆ.. ಸುರಿವ ಮಳೆ, ಕೊರೆವ ಚಳಿಯ ನಡುವೆ ಟೆಂಟ್​್ನಲ್ಲಿ ವಾಸ.. ಅದೆಷ್ಟೋ ನಿದ್ದೆಗಳಿಲ್ಲದ ರಾತ್ರಿಗಳು.. ಛಲದ ಬಿಡಿದ ಪ್ರಯತ್ನಗಳು.. ನಿರಾಸೆ.. ಹತಾಶೆ.. ಇವೆಲ್ಲವುಗಳ ಮಧ್ಯೆಯೂ ಗುರಿ ಸ್ಪಷ್ಟವಾಗಿತ್ತು.. ಸಾಧನೆಯ ಹಸಿವು.. ಸಾಧಿಸಿಯೇ ತೀರ್ತಿನಿ ಎಂಬ ಛಲ ಮನದಾಳದಲ್ಲಿ ಭದ್ರವಾಗಿ ನೆಲೆಯೂರಿತ್ತು.. ಕೊನೆಗೂ ಕಂಡು ಕನಸು ನನಸಾಗಿದೆ.

ಕೆರಿಬಿಯನ್ ನಾಡಲ್ಲಿ ಜೈಸ್ವಾಲ್ ಯಶಸ್ವಿನ ಓಟ

ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗಿ ಬಂದ ಕ್ರಿಕೆಟಿಗ ಬೇರಾರೂ ಅಲ್ಲ.. ಒನ್ & ಒನ್ಲಿ ಯಂಗ್ ಟೈಗರ್ ಯಶಸ್ವಿ ಜೈಸ್ವಾಲ್.. ಸಾಲು ಸಾಲಿ ಅಡೆತಡೆಗಳು ಎದುರಾದ್ರೂ ಕ್ರಿಕೆಟನ್ನೇ ಧ್ಯಾನಿಸಿದ ಯಶಸ್ವಿ ಜೈಸ್ವಾಲ್, ಇದೀಗ ಯಶಸ್ಸಿನ ಮೊದಲ ಮೆಟ್ಟಿಲನ್ನ ಹತ್ತಿದ್ದಾರೆ.

ಪದಾರ್ಪಣೆ ಪಂದ್ಯದಲ್ಲೇ ಯಶಸ್ವಿ ಬೊಂಬಾಟ್ ಆಟ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಡೆಬ್ಯೂ ಮಾಡಿದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್, ಸದ್ಯ ಕ್ರಿಕೆಟ್ ಲೋಕದ ಸೆನ್ಸೇಷನ್.! ಡೊಮಿನಿಕಾದಲ್ಲಿ ಡಾಮಿನೇಟಿಂಗ್ ಇನ್ನಿಂಗ್ಸ್ ಕಟ್ಟಿದ ಯಶಸ್ವಿ, ಇಂಟರ್ನ್ಯಾಷನಲ್ ಕ್ರಿಕೆಟ್ಗೆ ತನ್ನದೇ ಸ್ಟೈಲ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲೇ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ.

ಅಗಾಧವಾದ ತಾಳ್ಮೆ, ಟಾಪ್ ಕ್ಲಾಸ್ ಟೆಂಪರ್ಮೆಂಟ್..!

ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್​ನ ಪರ್ಫೆಕ್ಟ್ ಹಾಗೂ ಕಂಪ್ಲೀಟ್ ಪ್ಯಾಕೇಜ್. ವಿಂಡೀಸ್ ವಿರುದ್ಧ ಮೊದಲ ಟೆಸ್ಟ್​ನಲ್ಲೇ ಇದನ್ನು ನಿರೂಪಿಸಿದ್ದಾರೆ. ಪೇಶನ್ಸ್, ಟೆಂಪರ್ಮೆಂಟ್, ಕ್ಲಾಸ್ ಎಲ್ಲವೂ ಜೈಸ್ವಾಲ್ ಆಟದಲ್ಲಿ ಅಡಗಿದೆ. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿದೇಶಿ ಪಿಚ್​ನಲ್ಲಿ 250ಕ್ಕೂ ಹೆಚ್ಚು ಎಸೆತ ಎದುರಿಸೋದು ತಮಾಷೆಯ ಮಾತಲ್ಲ.

ಟೀಮ್ ಇಂಡಿಯಾಗೆ ಮತ್ತೊಬ್ಬ ಗಂಗೂಲಿ ಸಿಕ್ಕೇ ಬಿಟ್ಟ..!

ನಾವಲ್ಲ.. ಸದ್ಯ ಫ್ಯಾನ್ಸ್ ಹೇಳ್ತಿರೋ ಮಾತಿದು.. ಬಹುಕಾಲದಿಂದ ಟೀಮ್ ಇಂಡಿಯಾಗೆ ಸಮರ್ಥ ಎಡಗೈ ಬ್ಯಾಟ್ಸ್​ಮನ್ ಕೊರತೆ ಕಾಡ್ತಿತ್ತು. ಅದನ್ನ ಯಶಸ್ವಿ ಜೈಸ್ವಾಲ್ ನೀಗಿಸ್ತಾರೆ ಅನ್ನೋದು ಫ್ಯಾನ್ಸ್ ಮನದಾಳವಾಗಿದೆ. ಯಶಸ್ವಿಯಲ್ಲಿರೋ ಸಾಧಿಸೋ ಛಲವನ್ನ ಗಮನಿಸಿದ್ರೆ ಅದು ಕಷ್ಟದ್ದೂ ಅಲ್ಲ ಬಿಡಿ.

ಜೀವನದ ಪ್ರತಿ ಹೆಜ್ಜೆಯಲ್ಲೂ ಕಲ್ಲು ಮುಳ್ಳಿನ ಹಾದಿಯಲ್ಲೇ ಸಾಗಿ ಬಂದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್​ನಿಂದ ಕ್ರಿಕೆಟ್​ನ ಕಿಚ್ಚು ಮಾತ್ರ ಆರಿರಲಿಲ್ಲ. ಕ್ರಿಕೆಟ್ ಮೇಲಿನ ಪ್ರೀತಿ.. ಕ್ರಿಕೆಟರ್ ಆಗಬೇಕು ಹಂಬಲವೇ ಇಂದು ಯಶಸ್ವಿಗೂ ಯಶಸ್ಸನ್ನು ತಂದುಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಟೀಂ ಇಂಡಿಯಾಗೆ ಸಿಕ್ಕೇಬಿಟ್ಟ ಮತ್ತೊಬ್ಬ ಗಂಗೂಲಿ..’: ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಸೆಂಚುರಿ.. ಹೇಗಿದೆ ‘ಯಶಸ್ವಿ’ನ ಆಟ..?

https://newsfirstlive.com/wp-content/uploads/2023/07/JAISWAL.jpg

Load More