newsfirstkannada.com

‘ಜನಪ್ರಿಯ ಮುಖ್ಯಮಂತ್ರಿ, ನುಡಿದಂತೆ ನಡೆದ CM ಅಂದ್ರೆ ಸಿದ್ದರಾಮಯ್ಯ’- ಹಾಡಿ ಹೊಗಳಿದ ಬಿಜೆಪಿ ಶಾಸಕ

Share :

02-07-2023

    ಹೇಳಿದಂತೆ, ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ

    ರಾಜ್ಯದ ಜನರ ನಾಡಿಮಿಡಿತ ಸಿಎಂ ಚೆನ್ನಾಗಿ ಗೊತ್ತಿದೆ

    ನಾನು ಸಿಎಂ ಸಿದ್ದರಾಮಯ್ಯರ ಅಭಿಮಾನಿ ಮತ್ತು ಶಿಷ್ಯ

ಬೆಂಗಳೂರು: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮಂತ್ರಿಯಾಗಿದ್ದ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್ ಇವತ್ತು ಸಿಎಂ ಸಿದ್ದರಾಮಯ್ಯರನ್ನು ಬಾಯ್‌ ತುಂಬಾ ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಕೇತೋಹಳ್ಳಿಯಲ್ಲಿ ಇವತ್ತು ಕುರುಬ ಸಮುದಾಯದ ಶಾಸಕರು, ಸಚಿವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಈಶ್ವರಪ್ಪ, ಹೆಚ್‌.ವಿಶ್ವನಾಥ್ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿದ್ದರು.

ಕುರುಬ ಸಮುದಾಯದ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ, ಜನಪ್ರಿಯ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ ಎಂದು ಹೇಳಿದ್ರು. ಇನ್ನು ಸಿದ್ದರಾಮಯ್ಯ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಕ್ಕಿದೆ. ಯಶವಂತಪುರ ಕ್ಷೇತ್ರದ ಅಭಿವೃದ್ಧಿಗೆ ಯಾವತ್ತೂ ಸಹ ಇಲ್ಲ ಅಂತಾ ಅವರು ಹೇಳಿಲ್ಲ. ಅವರು ಕೊಟ್ಟ ಅನುದಾನದಲ್ಲೇ ನಾನು ಬೆಳೆದು, ಎರಡನೇ ಬಾರಿ ಶಾಸಕನಾದೆ. ಪಕ್ಷಾಂತರ ಹೋಗಿದ್ರೂ ನಾನು ಯಾವತ್ತೂ ಸಿದ್ದರಾಮಯ್ಯರನ್ನ ಮರೆತಿರಲಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಎಸ್‌.ಟಿ ಸೋಮಶೇಖರ್, ಹೇಳಿದಂತೆ, ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನರ ನಾಡಿಮಿಡಿತ ಅವರಿಗೆ ಗೊತ್ತಿದೆ. ಕರ್ನಾಟಕ ಜನರ ಋಣ ತೀರಿಸುವ ಕೆಲ ಮಾಡ್ತಾರೆ. ನುಡಿದಂತೆ ನಡೆದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ. ಬಾಯಲ್ಲಿ ಹೇಳಿದ್ದನ್ನು ಮಾಡಿ ತೊರಿಸುತ್ತಾರೆ. ರಾಜ್ಯದ ಜನರ ನಾಡಿಮಿಡಿತ ಸಿದ್ದರಾಮಯ್ಯರಿಗೆ ಗೊತ್ತಿದೆ. ಎಲ್ಲಾ ಘೋಷಣೆಗಳನ್ನು ಜಾರಿ ಮಾಡಲು ಸಿಎಂ ಬದ್ಧರಾಗಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯರ ಅಭಿಮಾನಿ ಮತ್ತು ಶಿಷ್ಯ ಎಂದು ಎಸ್.ಟಿ ಸೋಮಶೇಖರ್ ಹಾಡಿ ಹೊಗಳಿದರು.

ಭಾಷಣದ ಬಳಿಕ ಸಿಎಂ ಸಿದ್ದರಾಮಯ್ಯ ಶಾಸಕ ಎಸ್‌.ಟಿ ಸೋಮಶೇಖರ್ ಅವರನ್ನು ಸನ್ಮಾನಿಸಿದರು. ಈ ವೇಳೆ ಸೋಮಶೇಖರ್ ಹೆಗಲ ಮೇಲೆ ಕೈ ಹಾಕಿ ಕೆಲ‌ ಕಾಲ ಸಿದ್ದರಾಮಯ್ಯ ಆತ್ಮೀಯವಾಗಿ ಮಾತನಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಜನಪ್ರಿಯ ಮುಖ್ಯಮಂತ್ರಿ, ನುಡಿದಂತೆ ನಡೆದ CM ಅಂದ್ರೆ ಸಿದ್ದರಾಮಯ್ಯ’- ಹಾಡಿ ಹೊಗಳಿದ ಬಿಜೆಪಿ ಶಾಸಕ

https://newsfirstlive.com/wp-content/uploads/2023/07/ST-Somashekar.jpg

Load More