newsfirstkannada.com

ಪುತ್ರನಿಗೆ MLC ಸ್ಥಾನ ನೀಡಲು ಸಿದ್ದರಾಮಯ್ಯ ಕಸರತ್ತು; ಇದರ ಹಿಂದಿದ್ಯಂತೆ ಒಂದು ಬಲವಾದ ಕಾರಣ..!

Share :

26-06-2023

  ಕಳೆದ ಚುನಾವಣೆ ಅಪ್ಪನಿಗಾಗಿ ಡಾ.ಯತೀಂದ್ರ ಕ್ಷೇತ್ರ ತ್ಯಾಗ

  ಸಿದ್ದರಾಮಯ್ಯ ಗೆಲುವಿನ ಹಿಂದಿದೆ ಯತೀಂದ್ರ ಪರಿಶ್ರಮ

  ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಅತಿರೋದ್ಯಾಕೆ..

ಬೆಂಗಳೂರು: ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತಂದೆಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಡಾ.ಯತೀಂದ್ರ ರಾಜ್ಯ ರಾಜಕಾರಣದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಪುತ್ರನನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ರಾಜಕಾರಣದಲ್ಲಿಯೇ ಯತೀಂದ್ರಗೆ ಹೆಚ್ಚು ಆಸಕ್ತಿ

ಅಪ್ಪನಿಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ ಬೆನ್ನಲ್ಲೇ, ಡಾ.ಯತೀಂದ್ರ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಯತೀಂದ್ರ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಆಸಕ್ತಿ ಇರದ ಕಾರಣ ಅವರನ್ನು ಎಂಎಲ್​ಸಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಚರ್ಚೆಗಳು ಕೇಳಿಬಂದಿವೆ.
ರಾಜ್ಯ ರಾಜಕಾರಣದಲ್ಲಿಯೇ ಯತೀಂದ್ರಗೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಸದ್ಯ ದೆಹಲಿ ರಾಜಕೀಯ ಬೇಡ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎನ್ನಲಾಗಿದೆ. ಇನ್ನು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಗೆಲುವಿನ ಹಿಂದೆ ಯತೀಂದ್ರ ಪಾತ್ರ ಪ್ರಮುಖವಾಗಿದೆ.

ಸಿದ್ದರಾಮಯ್ಯರ ಅನುಪಸ್ಥಿತಿಯಲ್ಲೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ಅನುಭವ ಇದೆ. ಈಗ ಶಾಸಕರಾಗದ ಕಾರಣ ಪಕ್ಷದಲ್ಲಿ ಕಾಣಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ. ಇನ್ನು ಕ್ಷೇತ್ರದಲ್ಲಿ ಅಥವಾ ಪಕ್ಷದಲ್ಲಿ ಗುರುತಿಸಿಕೊಂಡರೆ ಸಿಎಂ ಮಗ, ಅದಕ್ಕೆ ಓಡಾಡ್ತಿದ್ದಾರೆ ಎಂಬ ಮಾತುಗಳು ಕೇಳಿಬರಬಹುದು. ಈ ರೀತಿಯ ಮಾತುಗಳು ಕೇಳಿಬರೋದು ಬೇಡ ಎಂದೇ, ಪರಿಷತ್ ಸದಸ್ಯರನ್ನಾಗಿ ಮಾಡುವ ಲೆಕ್ಕಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರ ಬೇಡಿಕೆಗೆ ಅಸ್ತು ಅಂದರೆ, ಯತೀಂದ್ರಗೆ ಪರಿಷತ್ ಸ್ಥಾನ ಫಿಕ್ಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುತ್ರನಿಗೆ MLC ಸ್ಥಾನ ನೀಡಲು ಸಿದ್ದರಾಮಯ್ಯ ಕಸರತ್ತು; ಇದರ ಹಿಂದಿದ್ಯಂತೆ ಒಂದು ಬಲವಾದ ಕಾರಣ..!

https://newsfirstlive.com/wp-content/uploads/2023/06/SIDDARAMAIAH-12-1.jpg

Load More