newsfirstkannada.com

‘ಜಿಎಸ್‌ಟಿ ತೆರಿಗೆ YST ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ಆಗಿದ್ಯಂತೆ’- ಹೆಚ್‌.ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ

Share :

02-07-2023

    ಇಷ್ಟು ದಿನ GST ಅಂತಾ ಇದ್ದಿದ್ದು ಅದು ಈಗ YST ತೆರಿಗೆ ಆಗಿದ್ಯಂತೆ

    ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಮೇಲೆ ಕುಮಾರಸ್ವಾಮಿ ಕಿಡಿ

    ಮಧ್ಯರಾತ್ರಿ ಒಂದು ಗಂಟೆವರೆಗೂ ಅಧಿಕಾರಿಗಳ ಜೊತೆ ಸಭೆ ಯಾಕೆ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟು ದಿನ GST ಅಂತಾ ಇತ್ತು. ಅದು ಈಗ YST ತೆರಿಗೆ ಆಗಿದ್ಯಂತೆ. ಅಂದ್ರೆ ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ಪರಿಚಯ ಮಾಡಿದ್ದಾರೆ ಅಂತಾ ಜನ ಮಾತಾಡ್ತಿದ್ದಾರೆ. ಜನ ಮಾತನಾಡೋದನ್ನ ನಾನು ಪ್ರಸ್ತಾಪ ಮಾಡ್ತೇನೆ. ನನಗೆ ಯಾವುದೇ ಮುಜುಗರ ಇಲ್ಲ. ಯಾರ ಬಳಿನೂ ನಾನು 5 ರೂಪಾಯಿ ತಗೊಂಡಿಲ್ಲ ಎಂದು ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಇವತ್ತು ಜೆಡಿಎಸ್ ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಈ ಸಭೆಗೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಇವತ್ತಿಗೆ 50 ದಿನ ಆಗಿದೆ. ನಾನು ಸಿದ್ದರಾಮಯ್ಯರನ್ನ ಕೇಳೋಕೆ ಬಯಸ್ತೀನಿ. ನಾನು ಸಿಎಂ ಆಗಿದ್ದಾಗ ನಿಮ್ಮ ಸಚಿವರು ಯಾವ ರೀತಿ ನಡೆದುಕೊಂಡ್ರು. ಪೊಗಡುದಸ್ತು ಇಲಾಖೆ ಇಟ್ಟುಕೊಂಡಿದ್ರು. ಯಾವ ಟ್ರಾನ್ಸ್‌ಫರ್ ಮಾಡೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಅವರು ಹೇಳಿದವರನ್ನ ನಾನು ಟ್ರಾನ್ಸ್‌ಫರ್ ಮಾಡಬೇಕಿತ್ತು. ಬೆಂಗಳೂರು ಪ್ರಾಧಿಕಾರಕ್ಕೆ ಡಿಮ್ಯಾಂಡ್ ಮಾಡಿದವರನ್ನು ಆಚೆ ಇಟ್ಟಿದ್ದೆ. ಯಲಹಂಕ ತಹಶೀಲ್ದಾರ್‌ ಕಚೇರಿಗೆ 1.5 ಕೋಟಿ ಕೊಡ್ತೀನಿ ಅಂದಿದ್ರು. ಅಂತವರೆನ್ನೆಲ್ಲ ಆಚೆ ಇಟ್ಟಿದ್ದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಈ ಸರ್ಕಾರ ಪಾರದರ್ಶಕ ಸರ್ಕಾರ ಅಲ್ಲ ಅಂತಾ ಜಗಜ್ಜಾಹೀರಾಗಿದೆ. ಟ್ರಾನ್ಸ್‌ಫರ್ ಶುರುವಾಗಿದೆ ಇಷ್ಟು ನಡೆದಿದೆ. ಅಧಿಕಾರಿಗಳನ್ನು ಮಧ್ಯರಾತ್ರಿ ಒಂದು ಗಂಟೆವರೆಗೂ ಕೂರಿಸಿಕೊಂಡು ಯಾಕೆ ಸಭೆ ನಡೆಸಬೇಕು. ಅನೌಪಚಾರಿಕ ಸ್ಥಳದಲ್ಲಿ ಕೂರಿಸಿಕೊಂಡು ಸಭೆ ನಡೆಸುವ ಅನಿವಾರ್ಯತೆ ಏನಿತ್ತು!? ಜನರಿಗೆ ಈಗಾಗಲೇ ಸರ್ಕಾರದ ಬಗ್ಗೆ ಗೊತ್ತಾಗಿದೆ. ಕೆಂಪಯ್ಯ ಅವರು ಮತ್ತೆ ಫೀಲ್ಡ್‌ಗೆ ಇಳಿದಿದ್ದಾರೆ ಅಂತಾ ಕಾಣುತ್ತೆ. ಇದೆಲ್ಲಾ ಒಂದು ಚಕ್ರ, ಮುಂದೆ ಏನಾಗುತ್ತೋ ನೋಡೋಣ. ಅಕ್ಕಿ ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ 15 ದಿನದಲ್ಲಿ ದುಡ್ಡು ಕೊಡ್ತೀವಿ ಅಂತಾ ಹೇಳ್ತಾರೆ. ಸಚಿವ ಸತೀಶ್ ಜಾರಕಿಹೊಳಿ ಆಗಸ್ಟ್ ಅಂತಾರೆ. ಎಷ್ಟು ಜನ ಸಿಎಂ ಇದ್ದೀರಾ. ನಿಮ್ಮ ಹೈಕಮಾಂಡ್ ಎಷ್ಟು ಜನಕ್ಕೆ ಅಧಿಕಾರ ನೀಡಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಜಿಎಸ್‌ಟಿ ತೆರಿಗೆ YST ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ಆಗಿದ್ಯಂತೆ’- ಹೆಚ್‌.ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ

https://newsfirstlive.com/wp-content/uploads/2023/07/HD-Kumaraswamy.jpg

Load More