ಬೆಂಗಳೂರಲ್ಲಿ ಸಂಜೆ ಸುರಿದ ಮಳೆಯಿಂದ ಅವಾಂತರ
ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ..ತಪ್ಪಿದ ಅನಾಹುತ
ಮತ್ತೆ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಳೆರಾಯನ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಸಣ್ಣ ಮಳೆಗೆ ಸಾಗರದಂತಾಗೋ ಸಿಲಿಕಾನ್ ಸಿಟಿ ರಸ್ತೆಗಳು ಜಲಾವೃತವಾಗುತ್ತಿವೆ. ರಾಜಕಾಲುವೆ ಆರ್ಭಟಕ್ಕೆ ಮನೆಗಳೇ ಮುಳುಗಡೆಯಾಗಿವೆ. ನಿನ್ನೆ ಸಂಜೆ ಸುರಿದ ಭಾರೀ ಮಳೆ ಬೆಂಗಳೂರಲ್ಲಿ ಭಾರೀ ಅವಾಂತರ ಸೃಷ್ಠಿಸಿದೆ. ಜೊತೆಗೆ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರಲ್ಲಿ ಸಂಜೆ ಸುರಿದ ಮಳೆಯಿಂದ ಅವಾಂತರ
ಸಹಕಾರ ನಗರದ ಜೆ ಬ್ಲಾಕ್ ಸಂಪೂರ್ಣ ಜಲಾವೃತ
ನಿನ್ನೆ ಸಂಜೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಅವಾಂತರಗಳೇ ಸೃಷ್ಠಿಯಾಗಿದೆ. ಸಹಕಾರ ನಗರದ ಸಿಟಿ ಮಾರ್ಕೆಟ್ ಹಿಂಭಾಗ ಇರುವ ಜೆ ಬ್ಲಾಕ್ ರಸ್ತೆ ಮೇಲೆ ಸುಮಾರು ನಾಲ್ಕು ಅಡಿಗಳಷ್ಟು ನೀರು ನಿಂತಿತ್ತು. ರಸ್ತೆಯ ತುಂಬೆಲ್ಲಾ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಜನರು ಹಾಗೂ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯ್ತು.
ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ನೀರು
ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ರಾಜಕಾಲುವೆ ನೀರು ನುಗ್ಗಿ ಸಂಪೂರ್ಣವಾಗಿ ಜಲಾವೃತವಾಗಿತ್ತು. ಮಾರ್ಕೆಟ್‌ನ ಹಿಂಭಾಗದ ಮನೆಗಳಿಗೂ ನೀರು ನುಗ್ಗಿದ್ದರಿಂದ ಜನರು ಸಂಕಷ್ಟ ಪಡುವಂತಾಯ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂದು ಪಾಲಿಕೆ ವಿರುದ್ಧ ನಿವಾಸಿಗಳು ಹಿಡಿಶಾಪ ಹಾಕಿದ್ದಾರೆ.
ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ
ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ನಿಂತಿದ್ದ ಕಾರು-ಬೈಕ್ ಮೇಲೆ ಲೈಟ್ ಕಂಬ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನು, ಭಾರೀ ಮಳೆಗೆ ಮನೆ.. ರಸ್ತೆ.. ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಕಾರು ಬೈಕ್‌ಗಳು ಮುಳುಗಡೆಯಾಗಿದ್ದವು. ಸಹಕಾರ ನಗರದ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಜನರು ಒಳಗೆ ಹೋಗಲಾಗದೇ ಮೈನ್ ರಸ್ತೆಯಲ್ಲಿ ನಿಲ್ಲುವಂತ ಪರಿಸ್ಥಿತಿ ಎದುರಾಗಿತ್ತು. ಇದೇ ವೇಳೆ ಪ್ರತಿಭಟನೆಗೆ ಮುಂದಾಗಿದ್ದವರನ್ನ ಪೊಲೀಸರು ಸಮಾಧಾನ ಪಡಿಸಿದ್ದರು.
ನೀರು ಹೊರಹಾಕಿದ SDRF ಸಿಬ್ಬಂದಿ
ಮಳೆ ನೀರು.. ರಾಜಕಾಲುವೆ ನೀರಿನಿಂದ ಮುಳುಗಡೆಯಾದ ಸಹಕಾರ ನಗರಕ್ಕೆ ಬಂದ ಎಸ್‌ಡಿಆರ್‌ಎಫ್ ಸಿಬ್ಬಂದಿ ನೀರು ಹೊರಹಾಕುವಲ್ಲಿ ನಿರತರಾಗಿದ್ದರು. ಮನೆ, ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದ ನೀರನ್ನ ಮೋಟಾರ್ ಮೂಲಕ ಖಾಲಿ ಮಾಡಿದ್ದರು.
ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ
12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಇನ್ನೂ 3 ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಬೆಂಗಳೂರು ನಗರ ಸೇರಿ 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆರಾಯನ ಆರ್ಭಟ ಮುಂದುವರಿಯಲಿದೆ. ಪ್ರತಿ ದಿನ ಸಂಜೆ ವೇಳೆಗೆ ಸುರಿಯುತ್ತಿರೋ ಮಳೆ ಬೆಂಗಳೂರಲ್ಲಿ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಮಾಡ್ತಿದೆ. ಇನ್ನೂ 3 ದಿನ ಹೆಚ್ಚು ಮಳೆಯಾಗಲಿದ್ದು, ಅಕಾಲಿಕ ಮಳೆಗೆ ನಗರ ಮತ್ತಷ್ಟು ತತ್ತರಿಸೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ