newsfirstkannada.com

ಬೆಂಗಳೂರಿಗೆ ಯೋಗಗುರು ಬಾಬಾ ರಾಮದೇವ್‌ ಆಗಮನ; ಶ್ರೀ ವಚನಾನಂದ ಸ್ವಾಮೀಜಿಗಳಿಂದ ಆತ್ಮೀಯ ಸ್ವಾಗತ

Share :

07-06-2023

  ಬೆಂಗಳೂರಲ್ಲಿ ಯೋಗ ಗುರು ಬಾಬಾ ರಾಮದೇವ್‌ ಹವಾ

  ವಚನಾನಂದ ಸ್ವಾಮೀಜಿಗಳಿಂದ ಆತ್ಮೀಯವಾದ ಸ್ವಾಗತ

  ನಾಳೆ ಬೆಂಗಳೂರಲ್ಲಿ ವಿಶೇಷ ಯೋಗ ಮತ್ತು ಧ್ಯಾನ ಶಿಬಿರ

ನಾಳೆ ಬೆಂಗಳೂರಿನಲ್ಲಿ ಯೋಗ ಗುರು ಬಾಬಾ ರಾಮದೇವ್‌ ಅವರ ಉಪಸ್ಥಿತಿಯಲ್ಲಿ ಒಂದು ದಿನದ ಉಚಿತ ವಿಶೇಷ ಯೋಗ ಮತ್ತು ಧ್ಯಾನ ಶಿಬಿರ ಆಯೋಜಿಸಲಾಗಿದೆ. ಈ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಬಾಬಾ ರಾಮ್‌ದೇವ್‌ ಬೆಂಗಳೂರಿಗೆ ಆಗಮಿಸಿದ್ದಾರೆ. ಬಾಬಾ ರಾಮದೇವ್ ಅವರನ್ನ ಶ್ವಾಸಗುರು ಎಂದೇ ಪ್ರಖ್ಯಾತರಾಗಿರುವ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಸ್ವಾಮೀಜಿಗಳು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ.

ಈ ಸಂದರ್ಭದಲ್ಲಿ ಯೋಗ ಮಾತೆ ಸಾಧ್ವಿ ದೇವಪ್ರಿಯ, ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಳೆ ಬೆಳಗ್ಗೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.3ರ ವೈಟ್ ಪೆಟಲ್ಸ್‌ನಲ್ಲಿ ಯೋಗ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 5.30ರಿಂದ 7.30ರವರೆಗೆ ಒಂದು ದಿನದ ಉಚಿತ ವಿಶೇಷ ಯೋಗ ಮತ್ತು ಧ್ಯಾನ ಶಿಬಿರ ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಂಗಳೂರಿಗೆ ಯೋಗಗುರು ಬಾಬಾ ರಾಮದೇವ್‌ ಆಗಮನ; ಶ್ರೀ ವಚನಾನಂದ ಸ್ವಾಮೀಜಿಗಳಿಂದ ಆತ್ಮೀಯ ಸ್ವಾಗತ

https://newsfirstlive.com/wp-content/uploads/2023/06/Yoga-guru-1.jpg

Load More