newsfirstkannada.com

ಗ್ಯಾಂಗ್​​ಸ್ಟರ್​ ಅತೀಕ್ ಅಹ್ಮದ್​ನಿಂದ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಮನೆ ನಿರ್ಮಿಸಿ 76 ಬಡವರಿಗೆ ಹಂಚಿಕೆ ಮಾಡಿದ CM ಯೋಗಿ

Share :

30-06-2023

  CM ಯೋಗಿಯಿಂದ ಮತ್ತೊಂದು ಪುಣ್ಯದ ಕೆಲಸ

  PMAY ಅಡಿಯಲ್ಲಿ ಮನೆಗಳ ನಿರ್ಮಾಣ

  ಯೋಗಿ ಕೆಲಸಕ್ಕೆ ಜನರಿಂದ ಭಾರೀ ಮೆಚ್ಚುಗೆ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಬುಲ್ಡೋಜರ್ ಕ್ರಮಗಳ ಬಗ್ಗೆ ಅದೆಷ್ಟೋ ಮಂದಿ ಟೀಕಿಸಿದ್ದರು. ಇನ್ನು ಕೆಲವರು ‘ಭೇಷ್, ಯೋಗಿ ಮಾಡೆಲ್ ಅಂದರೆ ಇದು’ ಎಂದು ಬಣ್ಣಿಸಿದ್ದರು. ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 76 ಬಡ ಕುಟುಂಬಕ್ಕೆ ಮನೆಗಳನ್ನು ನೀಡಿ ಮತ್ತೆ ಸುದ್ದಿಯಾಗಿದ್ದಾರೆ.

ಇಲ್ಲಿ ಮಹತ್ವದ ವಿಚಾರ ಏನಂದರೆ ಕೊಲೆಗಾರ, ಗ್ಯಾಂಗ್​ಸ್ಟರ್ ಕಮ್ ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್​ನಿಂದ ವಶಪಡಿಸಿಕೊಳ್ಳಲಾಗಿದ್ದ ಭೂಮಿಯಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನಾ (ಅರ್ಬನ್) ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಇವತ್ತು ಕೀ ಹಸ್ತಾಂತರ ಮಾಡಿದ್ದಾರೆ. ಪ್ರಯಾಗ್​ರಾಜ್​​ ನಗರದಲ್ಲಿದ್ದ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಇನ್ನೊಂದು ವಿಶೇಷ ಅಂದ್ರೆ ಜೂನ್ 9 ರಂದು ಮನೆಗಳನ್ನು ಹಂಚುವ ಸಂಬಂಧ ಲಾಟರಿ ವಿಧಾನ ಅಳವಡಿಸಲಾಗಿತ್ತು. ಇಲ್ಲಿ ಆಯ್ಕೆಯಾದ 76 ಬಡವರಿಗೆ ಮನೆಗಳನ್ನು ನೀಡಲಾಗಿದೆ. ಮನೆಗಳನ್ನು ನೀಡಿದ ಬೆನ್ನಲ್ಲೇ, ಫಲಾನುಭವಿ ಕುಟುಂಬಸ್ಥರ ಹಾಗೂ ಮಕ್ಕಳ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸಂವಾದ ನಡೆಸಿದರು. ಇದರ ಜೊತೆಗೆ ಇವತ್ತು ಮುಖ್ಯಮಂತ್ರಿಗಳು 226 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ನಿವಾಸದ ಕೀ ಅನ್ನು ಯಜಮಾನರಿಗೆ ನೀಡಿ ಮಾತನಾಡಿದ ಯೋಗಿ ಆದಿತ್ಯನಾಥ್, 2017ಕ್ಕೂ ಮೊದಲು ರಾಜ್ಯದಲ್ಲಿ ಭೂ-ಮಾಫಿಯಾ ವ್ಯಾಪಕವಾಗಿ ನಡೆಯುತ್ತಿತ್ತು. ಆಗ ಬಡವರು ಅಸಹಾಯಕರಾಗಿ ಕೈಕಟ್ಟಿ ನಿಲ್ಲುವಂತೆ ಆಗಿತ್ತು. ಬಡವರಿಂದ ಕಸಿದುಕೊಂಡಿರುವ ಭೂಮಿಯನ್ನು ವಾಪಸ್ ಪಡೆಯುವ ಪ್ರಯತ್ನಗಳು ನಮ್ಮ ಸರ್ಕಾರದಲ್ಲಿ ನಡೆದಿದೆ. ಅದರ ಮುಂದುವರಿದ ಭಾಗವಾಗಿ ನಾವು ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.

ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಕೊಲೆಯ ಆರೋಪಿ ಅತೀಕ್ ಅಹ್ಮದ್ ಆಗಿದ್ದ. 2005ರಲ್ಲಿ ರಾಜು ಪಾಲ್​​ರನ್ನು ಕೊಲೆ ಮಾಡಿದ್ದ. ಮಾತ್ರವಲ್ಲ, ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿಧಾರ ಉಮೇಶ್ ಪಾಲ್​ನನ್ನು ಕೊಲೆ ಮಾಡಿದ್ದ. ಈ ವರ್ಷದ ಫೆಬ್ರವರಿಯಲ್ಲಿ ಅತೀಕ್ ಅಹ್ಮದ್​ನ ಸಹೋದರ ಅಶ್ರಫ್ ಅಹ್ಮದ್​​ನನ್ನು ಹೊಡೆದು ಸಾಯಿಸಲಾಗಿತ್ತು. ಏಪ್ರಿಲ್ 15 ರಂದು ಅಟಿಕ್ ಅಹ್ಮದ್​ನನ್ನು ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ಕಿಡಿಗೇಡಿಗಳು ಪ್ರಯಾಗ್​ರಾಜ್​ನಲ್ಲಿ ಹೊಡೆದು ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾಂಗ್​​ಸ್ಟರ್​ ಅತೀಕ್ ಅಹ್ಮದ್​ನಿಂದ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಮನೆ ನಿರ್ಮಿಸಿ 76 ಬಡವರಿಗೆ ಹಂಚಿಕೆ ಮಾಡಿದ CM ಯೋಗಿ

https://newsfirstlive.com/wp-content/uploads/2023/06/YOGI-4.jpg

Load More