ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತೀರಿ!
ಈ ರಾಶಿಯ ಚಿಕ್ಕ ಮಕ್ಕಳಿಗೆ ಭಾರೀ ಸಮಸ್ಯೆಯಾಗಬಹುದು
ಸಮಾಜದಲ್ಲಿ ನಿಮ್ಮನ್ನು ಗೌರವಿಸುವ ಅವಕಾಶಗಳು ಹೆಚ್ಚು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತೃತೀಯಾ ತಿಥಿ, ಉತ್ತರಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ
- ನಿಮ್ಮ ಆತ್ಮವಿಶ್ವಾಸದಿಂದ ಎಲ್ಲ ಕೆಲಸಗಳಲ್ಲಿ ಜಯಪ್ರದವಾಗಲಿದೆ
- ನಿಮ್ಮ ಯೋಗ್ಯತೆಗನುಸಾರವಾಗಿ ನಿಮ್ಮ ಇಮೇಜ್ ಹೆಚ್ಚಾಗುವ ಸಾಧ್ಯತೆಯಿದೆ
- ನಿಮ್ಮಲ್ಲಿರುವ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಲಾಭವಿದೆ
- ಮನೆಯವರ ಸಲಹೆ ತುಂಬಾ ಗಣನೀಯವಾಗಿರುತ್ತದೆ
- ಸಾಯಂಕಾಲ ಕಾಲಿಗೆ ಪೆಟ್ಟು ಬೀಳುವುದರಿಂದ ನೋವಾಗುವ ಸಾಧ್ಯತೆಯಿದೆ
- ಚಾಮುಂಡೇಶ್ವರಿಯನ್ನು ಆರಾಧಿಸಿ
ವೃಷಭ ರಾಶಿ
- ಇಂದು ಯಾವುದೇ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗದೆ ಇರಬಹುದು
- ತಲೆನೋವು ಅಥವಾ ಮೈಗ್ರೇನ್ ಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ಹಳೆಯ ಸಂಪರ್ಕಗಳಿಂದಾಗಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆಯಿದೆ
- ಧೂಳು ಮತ್ತು ಸೂರ್ಯನ ಬೆಳಕಿನಿಂದ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ
- ಬೇರೆಯವರ ಭರವಸೆಯ ಮಾತುಗಳು ನಿಮಗೆ ಉಪಯೋಗಕ್ಕೆ ಬರುವುದಿಲ್ಲ
- ಯೋಗಾಭ್ಯಾಸ ಮಾಡುವ ಬಗ್ಗೆ ಚಿಂತಿಸಿ ಒಳ್ಳೆಯದಾಗುತ್ತದೆ
- ನಾರಾಯಣನನ್ನು ಪ್ರಾರ್ಥನೆ ಮಾಡಿ
ಮಿಥುನ ರಾಶಿ
- ವಿವಾದಿತ ವಿಷಯಗಳಿದ್ದರೆ ಇಂದು ಇತ್ಯರ್ಥವಾಗುವ ಸಾಧ್ಯತೆಯಿದೆ
- ವಿದೇಶದಲ್ಲಿ ಅಧ್ಯಯನ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಪ್ರೇಮಿಗಳಿಗೆ ಉತ್ತಮವಾದ ದಿನ, ಆದರೆ ಸುಳ್ಳು ಹೇಳಬಾರದು
- ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಕಾಲ ಕೂಡಿ ಬಂದಿದೆ
- ವಿದ್ಯಾಭ್ಯಾಸಕ್ಕೆ ಸಾಲ ದೊರೆಯಬಹುದು ಸರಿಯಾಗಿ ವ್ಯವಹರಿಸಿ
- ತಪ್ಪು ಮಾಹಿತಿ ದುಷ್ಪರಿಣಾಮ ಉಂಟು ಮಾಡಬಹುದು
- ಪಾರಿಜಾತ ಸರಸ್ವತಿಯನ್ನು ಆರಾಧನೆ ಮಾಡಿ
ಕಟಕ ರಾಶಿ
- ಸಂಶೋಧಕರಿಗೆ ಮತ್ತು ವಿಜ್ಞಾನಿಗಳಿಗೆ ಬಹಳ ವಿಶೇಷವಾದ ಶುಭದಿನ
- ಕಾನೂನಾತ್ಮಕ ವಿಷಯಗಳಲ್ಲಿ ಹಲವು ತೊಡಕುಗಳು ಕಾಣಬಹುದು
- ಪ್ರಕೃತಿ ವೀಕ್ಷಣೆ ಅಥವಾ ಪ್ರಾಣಿ ಸಂಕುಲವನ್ನು ವೀಕ್ಷಿಸಲು ಪ್ರವಾಸ ಕೈಗೊಳ್ಳಬಹುದು
- ಮನೆಯಲ್ಲಿ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಆದರೆ ಆತಂಕ ಬೇಡ
- ವೈದ್ಯರ ಸಲಹೆ ಪಡೆಯಿರಿ, ಅಗತ್ಯ ಬಿದ್ದರೆ ಬೇರೆ ವೈದ್ಯರನ್ನು ಭೇಟಿ ಮಾಡಿ
- ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ
ಸಿಂಹ ರಾಶಿ
- ಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ
- ಮೇಲಾಧಿಕಾರಿಗಳ ವರ್ತನೆ ಮನಸ್ಸಿಗೆ ನೋವು ಉಂಟು ಮಾಡಬಹುದು
- ಸಹೋದ್ಯೋಗಿಗಳಿಗೆ ನಿಮ್ಮ ಪರಿಸ್ಥಿತಿ ಅರ್ಥವಾದ್ರೂ ಪ್ರಯೋಜನಕ್ಕೆ ಬರುವುದಿಲ್ಲ
- ಹೊಸ ಕೆಲಸಗಳನ್ನು ಮಾಡಲು ಆತ್ಮವಿಶ್ವಾಸದ ಕೊರತೆ ಕಾಡಬಹುದು
- ತಂದೆಯವರ ಮಾತು ಮಾರ್ಗದರ್ಶನವಾಗುತ್ತದೆ, ತಾತ್ಸಾರ ಮಾಡಬೇಡಿ
- ವಿದ್ಯೆ, ಬುದ್ದಿಗೂ ಮೀರಿ ಮಾನವೀಯತೆ ಮೆರೆಯಬೇಕಾದ ಸಂದರ್ಭ
- ಕಾಳಿದೇವಿಯಯನ್ನು ಆರಾಧನೆ ಮಾಡಿ
ಕನ್ಯಾ ರಾಶಿ
- ನಿಮ್ಮ ಅಸೂಯ ಪರವಾದ ಬುದ್ದಿಯನ್ನ ದೂರ ಮಾಡಿಕೊಳ್ಳಬೇಕು
- ಹಿತೈಷಿಗಳು ಮತ್ತು ಸ್ನೇಹಿತರು ನಿಮ್ಮ ನ್ಯೂನತೆಗಳನ್ನು ಗುರುತಿಸಿ ತೋರಿಸುವ ಸಾಧ್ಯತೆಯಿದೆ
- ಕಾರ್ಯಕ್ಷೇತ್ರದಲ್ಲಿ ಹೊಸ ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ
- ನಿಮ್ಮ ಮೇಲಾಧಿಕಾರಿಗಳಲು ನಿಮಗೆ ಹೆಚ್ಚಿನ ಜವಾಬ್ದಾರಿ ಹೊರಿಸಿ ಪರೀಕ್ಷಿಸಬಹುದು
- ಕಠಿಣ ಪರಿಶ್ರಮಕ್ಕೆ ಪೂರ್ಣ ಪ್ರತಿಫಲ ಸಿಗದೆ ಇರಬಹುದು
- ಮಕ್ಕಳಿಗೆ ಶುಭವಾದ ವಾತಾವರಣ, ಶುಭಫಲವಿರುವ ದಿನ
- ಮನೆಯಲ್ಲಿ ರಾತ್ರಿಯ ಸಮಯ ಸಮಾಧಾನಕರವಾಗಿರುತ್ತದೆ
- ಕುಲದೇವತಾ ಆರಾಧನೆ ಮಾಡಿ
ತುಲಾ ರಾಶಿ
- ವ್ಯಾವಹಾರಿಕವಾಗಿ ಉತ್ತಮ ಲಾಭ, ಹಣ ಸಿಗಬಹುದು
- ಷೇರುಪೇಟೆಯಲ್ಲಿ ಮಾತ್ರ ಹಣ ಹೂಡಿಕೆ ಮಾಡಬೇಡಿ
- ಪರನಿಂದೆ, ಆತ್ಮಪ್ರಶಂಸೆ ಎರಡೂ ಈ ದಿನ ಬೇಡ
- ಹಣ್ಣು ಬೆಳೆಗಾರರಿಗೆ ಮತ್ತು ಹಣ್ಣು ವ್ಯಾಪಾರಿಗಳಿಗೆ ಶುಭವಿದೆ
- ಆಸ್ತಿಕತೆಯ ಬಗ್ಗೆ ಪ್ರಶ್ನೆ ಮಾಡುವ ಮನಸ್ಥಿತಿ ಹೆಚ್ಚಾಗುವ ಸಾಧ್ಯತೆಯಿದೆ
- ದೃಢವಾದ ನಂಬಿಕೆ ಮಾತ್ರ ಕೆಲಸ ಮಾಡುವುದೆಂದು ಅರಿಯಬೇಕು
- ಇಷ್ಟ ದೇವತೆಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ ರಾಶಿ
- ಕಡಿಮೆ ರಕ್ತದೊತ್ತಡ ಇರುವವರು ಜಾಗ್ರತೆವಹಿಸಿ, ವೈದ್ಯರ ಸಲಹೆ ಪಡೆಯಿರಿ
- ಬೇರೆಯವರ ಆಲೋಚನೆ, ಮನಸ್ಥಿತಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ
- ನಿರ್ದಿಷ್ಟವಾದ ವಿಚಾರಗಳಿಗೆ ಸ್ನೇಹಿತರು, ಕುಟುಂಬದ ಮಧ್ಯೆ ಜಗಳವಾಗಬಹುದು ಗಮನವಿರಲಿ
- ಇರುವ ಹಣ, ಅಧಿಕಾರ, ವ್ಯವಸ್ಥೆಗಳಿಂದ ಅಹಂಕಾರ ಹೆಚ್ಚಾಗಬಹುದು
- ವಾತಾವರಣ ವ್ಯತ್ಯಾಸದಿಂದ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಜಾಗ್ರತೆಯಿರಲಿ
- ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ
ಧನಸ್ಸು ರಾಶಿ
- ಕಾರ್ಯಕ್ಷೇತ್ರದಲ್ಲಿ ಉತ್ತಮ ದಕ್ಷತೆ, ಪ್ರತಿಭೆಯನ್ನು ತೋರಿ ಜಯಶೀಲರಾಗುತ್ತೀರಿ
- ನಿಮ್ಮ ಗುರಿಯ ಬಗ್ಗೆ ನಿಮಗೆ ಆಶ್ಚರ್ಯ ಕಾಣಬಹುದು
- ನಿಮ್ಮ ಪ್ರಗತಿಯಲ್ಲಿ ನಿಮ್ಮ ಪೂರ್ವ ಸುಕೃತವೇ ಸರಿ
- ನಿಮ್ಮ ನಿರಂತರ ಪ್ರಯತ್ನ ಹಿರಿಯರ ಆಶೀರ್ವಾದ ಈಗ ಫಲಿಸಿರುವುದು
- ಮನೆಯ ಸದಸ್ಯರೊಂದಿಗೆ ಪ್ರೀತಿ ವಿಶ್ವಾಸ ಹೆಚ್ಚು ಮಾಡಿಕೊಳ್ಳಿ
- ಗುರುದತ್ತಾತ್ರೇಯರನ್ನು ಆರಾಧಿಸಿ
ಮಕರ ರಾಶಿ
- ನಿಮ್ಮ ಪೂರ್ವಿಕರು ಮಾಡಿರುವ ಪುಣ್ಯದಿಂದ ನಿಮ್ಮ ಜೀವನ ಹಸನಾಗಿರುತ್ತದೆ
- ನೌಕರಿಯಲ್ಲಿ, ವಿದ್ಯಾಭ್ಯಾಸದಲ್ಲಿ ಅತೀವ ಉನ್ನತಿಗೆ ಅವಕಾಶ ಮಾಡಿಕೊಡುತ್ತದೆ
- ಗ್ರಹಗತಿಯಿಂದ ನೌಕರಿಯಲ್ಲಿ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಆಯಾಸವಾಗುತ್ತದೆ
- ಹಳೆಯ ಸಾಲವನ್ನು ಮರುಪಾವತಿ ಮಾಡಲು ತೊಂದರೆಯಾಗಬಹುದು
- ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿ
- ಮಾತಾ ಲಲಿತಾ ಪರಮೇಶ್ವರಿಯನ್ನು ಆರಾಧಿಸಿ
ಕುಂಭ ರಾಶಿ
- ಈ ರಾಶಿಯ ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗಬಹುದು
- ಮಕ್ಕಳ ಬಗ್ಗೆ ಪೋಷಕರಿಗೆ ಎಚ್ಚರವಿರಲಿ
- ಮೇಲಾಧಿಕಾರಿಗಳಿಗೆ ಮನೆಯವರ ಜೊತೆಯಲ್ಲಿ ಅನ್ಯೋನತೆ ಇರಲಿ
- ಯಾವುದಾದ್ರೂ ಸಂದರ್ಶನಗಳಿದ್ದರೆ ಶುಭದಿನ
- ಸಮಾಜದಲ್ಲಿ ನಿಮ್ಮನ್ನು ಗೌರವಿಸುವ ಅವಕಾಶಗಳಿದೆ
- ಮಹಾ ಗಣಪತಿಯನ್ನು ಆರಾಧನೆ ಮಾಡಿ
ಮೀನ ರಾಶಿ
- ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತೀರಿ
- ಆದರೆ ಯಾವುದು ಕೂಡ ಕಾರ್ಯಗತ ಆಗುವುದಿಲ್ಲ
- ಕುಟುಂಬದಲ್ಲಿ ಚಿಕ್ಕ ವಯಸ್ಸಿನ ಮಕ್ಕಳ ಜೊತೆ ಸೌಹಾರ್ದತೆಯಿಂದ ವರ್ತಿಸಿ
- ಮಗುವಿಗೆ ತೊಂದರೆ ಆದರೆ ನಿಮಗೆ ಅವಮಾನವಾಗುವ ಸಾಧ್ಯತೆಗಳಿವೆ
- ವಾಹನಗಳ ವಿಚಾರದಲ್ಲಿ ಜಾಗ್ರತೆವಹಿಸಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್