ರಾಜ್ಯಾದ್ಯಂತ ಮನೆ ಮಾಡಿದ ಆಯುಧ ಪೂಜೆಯ ಸಂಭ್ರಮ
ದಸಾರ ಹೊತ್ತಲ್ಲೇ ಬಂಗಾರದ ಬೆಲೆಯಲ್ಲಿ ದಿಢೀರ್ ಕುಸಿತ..!
ಜನರು ಚಿನ್ನ ಖರೀದಿ ಮಾಡಲು ಇದು ಒಳ್ಳೆಯ ಸಮಯ
ರಾಜ್ಯದ ಜನ ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಬಂಗಾರ ಖರೀದಿ ಮಾಡಿದ್ರೆ ಕುಟುಂಬಕ್ಕೆ ಒಳ್ಳಯದಾಗಲಿದೆ ಅನ್ನೋ ನಂಬಿಕೆ ಎಲ್ಲರದ್ದು. ಹಾಗಾಗಿ ಗೃಹಿಣಿಯರು ಗೋಲ್ಡ್ ಜ್ಯುವೆಲರಿ ಶಾಪಿಂಗ್ ಕಡೆ ಮುಖ ಮಾಡಿದ್ದಾರೆ.
ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಭಾರೀ ನಿರಾಸೆ ಮೂಡಿಸಿತ್ತು. ಯಾವಾಗಲೂ ಬಂಗಾರದ ಬೆಲೆ ಒಂದೇ ರೀತಿ ಇರೋದಿಲ್ಲ. ಬದಲಿಗೆ ಒಮ್ಮೆ ಏರಿಕೆಯಾದ್ರೆ ಮತ್ತೊಮ್ಮೆ ಇಳಿಕೆ ಆಗುತ್ತದೆ. ರೇಟ್ ಕಡಿಮೆ ಆದ ಕೂಡಲೇ ಚಿನ್ನ ಖರೀದಿ ಮಾಡಲೇಬೇಕು ಎಂದು ಗೃಹಿಣಿಯರು ಕಾಯುತ್ತಲೇ ಇರುತ್ತಾರೆ. ಈಗ ಕಳೆದ 2 ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಬಂಗಾರ ಖರೀದಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ.
ಬಂಗಾರದ ಬೆಲೆಯಲ್ಲಿ ದಿಢೀರ್ ಇಳಿಕೆ!
ಬೆಂಗಳೂರಲ್ಲಿ ಇಂದು 22 ಕ್ಯಾರಟ್ ಗೋಲ್ಡ್ ರೇಟ್ ಒಂದು ಗ್ರಾಮ್ಗೆ 7,030 ರೂ. ಇದೆ. ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲೂ ಒಂದು ಗ್ರಾಮ್ ಚಿನ್ನದ ಬೆಲೆ ಕ್ರಮವಾಗಿ 7,030 ರೂ. ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಮಾತ್ರ ಚಿನ್ನದ ಬೆಲೆ 7,045 ರೂ. ಆಗಿದೆ. ಇಷ್ಟೇ ಅಲ್ಲ ಪ್ರತಿ ಗ್ರಾಮ್ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,752 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,030 ರೂ. ಇದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) ಮಾತ್ರ 7,669 ರೂ. ಇದೆ.
ಚಿನ್ನ ಖರೀದಿಗೆ ಭರ್ಜರಿ ಡಿಮ್ಯಾಂಡ್
ಸದ್ಯ ಚಿನ್ನ ಖರೀದಿಗೆ ಇದು ಒಳ್ಳೆಯ ಸಮಯ. ಹಾಗಾಗಿ ಜನ ಬಂಗಾರದ ಅಂಗಡಿ ಮುಂದೆ ಕ್ಯೂ ಕಟ್ಟಿ ನಿಂತಿದ್ದಾರೆ. ನೀವು ಕೂಡ ಬೇಕಾದ್ರೆ ಇಂದು ಬಂಗಾರ ಖರೀದಿ ಮಾಡಬಹುದು.
ಇದನ್ನೂ ಓದಿ: ಆರ್ಸಿಬಿಗೆ ಬಂತು ಹಾರ್ಸ್ ಪವರ್.. ಬೆಂಗಳೂರು ತಂಡಕ್ಕೆ IPL ವಿನ್ನಿಂಗ್ ಕ್ಯಾಪ್ಟನ್ ಎಂಟ್ರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ