newsfirstkannada.com

ಯುವ ಚೆಸ್ ಪ್ಲೇಯರ್ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ.. R ಪ್ರಜ್ಞಾನಂದ ವಿಶ್ವಕಪ್‌ನಲ್ಲಿ ಸೋತರು ಹೆಮ್ಮೆ ಎಂದಿದ್ದೇಕೆ?

Share :

01-09-2023

  ಪ್ರಧಾನಿ ನಿವಾಸದಲ್ಲಿ ಭೇಟಿ ಮಾಡಿದ್ದು ನನಗೆ ದೊಡ್ಡ ಗೌರವ

  FIDE ಚೆಸ್ ವಿಶ್ವಕಪ್‌ನ ರನ್ನ​ರ್​ ಅಪ್ ಆಗಿದ್ದ ಪ್ರಜ್ಞಾನಂದ

  ತನ್ನ ಪೋಷಕರೊಂದಿಗೆ ದೆಹಲಿಯಲ್ಲಿ ಮೋದಿಯವರ ಭೇಟಿ

ನವದೆಹಲಿ: ಭಾರತದ ಯುವ ಸ್ಟಾರ್​ ಚೆಸ್ ಪ್ಲೇಯರ್​ ಹಾಗೂ FIDE ಚೆಸ್ ವಿಶ್ವಕಪ್‌ನ ರನ್ನ​ರ್​ ಅಪ್​ ಆದಂತಹ ಆರ್​ ಪ್ರಜ್ಞಾನಂದ ತನ್ನ ಪೋಷಕರೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ.

ಅಜರ್‌ಬೆಜಾನ್‌ನ ಬಾಕುವಿನಲ್ಲಿ ನಡೆದ FIDE ಚೆಸ್ ವಿಶ್ವಕಪ್‌ ಟೂರ್ನಿ ಮುಗಿದ ಬಳಿಕ ಭಾರತಕ್ಕೆ ಆಗಮಿಸಿರುವ ಆರ್​ ಪ್ರಜ್ಞಾನಂದ ಅವರು ನವದೆಹಲಿಯಲ್ಲಿನ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿ ಮೋದಿಯವರು ಕೆಲ ಸಮಯ ಕುಳಿತು ​ ಪ್ರಜ್ಞಾನಂದ ಹಾಗೂ ಆತನ ಪೋಷಕರೊಂದಿಗೆ ಮಾತನಾಡಿದರು. ಈ ವೇಳೆ ಚೆಸ್​ ಬಗ್ಗೆ ಕೆಲ ಪ್ರಮುಖ ವಿಷಯಗಳನ್ನು ತಿಳಿದುಕೊಂಡರು ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಆರ್​ ಪ್ರಜ್ಞಾನಂದ ತನ್ನ ಅಧಿಕೃತ ಎಕ್ಸ್​ನಲ್ಲಿ ಫೋಟೋ ಶೇರ್ ಮಾಡಿ, ಗೌರವಾನ್ವಿತ ಮೋದಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ಇದು ನನಗೆ ದೊಡ್ಡ ಗೌರವ. ಪ್ರಧಾನಿಗಳ ಜೊತೆ ಚರ್ಚೆ ಮಾಡಿರುವುದು ಮರೆಯಲಾಗದ ಅನುಭವ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಈ ಬಗ್ಗೆ ಪ್ರಧಾನಿ ಮೋದಿಯವರು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, ನಿಮ್ಮ ಪೋಷಕರೊಂದಿಗೆ ಆರ್ ಪ್ರಜ್ಞಾನಂದ ಭೇಟಿ ಮಾಡಿದ್ದಕ್ಕೆ ನನಗೂ ತುಂಬಾ ಸಂತೋಷವಾಗಿದೆ. ನಿಮ್ಮ ಉತ್ಸಾಹವು ಪರಿಶ್ರಮದ ಬಗ್ಗೆ ಹೇಳುತ್ತಿದೆ. ಭಾರತದ ಯುವಕರು ಏನೂ ಬೇಕಾದ್ರೂ ಸಾಧನೆ ಮಾಡಬಹುದು ಎಂಬುದಕ್ಕೆ ನೀವೇ ಬೆಸ್ಟ್​ ಎಕ್ಸಾಂಪಲ್. ನನಗೆ ಹೆಮ್ಮೆ ಇದೆ ಎಂದು ಆರ್​.ಪ್ರಜ್ಞಾನಂದ ಬಗ್ಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವ ಚೆಸ್ ಪ್ಲೇಯರ್ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ.. R ಪ್ರಜ್ಞಾನಂದ ವಿಶ್ವಕಪ್‌ನಲ್ಲಿ ಸೋತರು ಹೆಮ್ಮೆ ಎಂದಿದ್ದೇಕೆ?

https://newsfirstlive.com/wp-content/uploads/2023/09/R_PRAGNANANDA_PM_MODI.jpg

Load More