ಕನಕ ಗುರುಪೀಠ ಕಾರ್ಯಕ್ರಮದ ವೇಳೆ ಅಭಿಮಾನಿಗಳ ಕೂಗು
ಕುರುಬ ಸಮುದಾಯದ ಅಭಿಮಾನಿಗಳಿಂದ ಜೋರಾದ ಕೂಗು
ನಿಮ್ಮ ಆಶೀರ್ವಾದ ಇದೇ ರೀತಿ ಮುಂದುವರೆಯಲಿ ಎಂದ ಸಿಎಂ
ಬೆಂಗಳೂರಲ್ಲಿ ನಡೆದ ಕನಕ ಗುರುಪೀಠ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿಯವರನ್ನು ಕಂಡು ಅಭಿಮಾನಿಗಳು ನೀವು ಪ್ರಧಾನಿ ಆಗಬೇಕು ಎಂದು ಕೂಗಿದ್ದಾರೆ.
ಅಭಿಮಾನಿಗಳು ಸಿಎಂ ಸಿದ್ದರಾಮಯ್ಯನವರನ್ನು ಪ್ರಧಾನಿಯಾಗಬೇಕೆಂದು ಕೂಗಿದ್ದೇ ತಡ, ಅದಕ್ಕೆ ಉತ್ತರಿಸಿದ ಅವರು, ಈಗ ಮುಖ್ಯಮಂತ್ರಿ ಆಗಿದ್ದೇನೆ ಅಲ್ವಾ? ಕೆಲಸ ಮಾಡುತ್ತಿದ್ದೇನಾ? ಆಗದಿರುವ ವಿಷಯ ಈಗ್ಯಾಕೆ ಬಿಡಯ್ಯ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ, ಕುರುಬ ಸಮುದಾಯದ ಅಭಿಮಾನಿಗಳು ನೀವು ಪ್ರಧಾನಿಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಅದರ ಜೊತೆ ಜೊತೆಗೆ ಐದು ವರ್ಷ ನೀವೇ ಸಿಎಂ ಆಗಿರಿ ಎಂದು ಕೂಗಿದ್ದಾರೆ.
ಭಾಷಣ ಮಾಡುವ ವೇಳೆ ಸಿದ್ದರಾಮಯ್ಯನವರು, ಕುರುಬ ಸಮುದಾಯ ಈ ಸಲ ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದೆ. ಎಲ್ಲ ಸಮುದಾಯವರೂ ಬೆಂಬಲ ಕೊಟ್ಟಿದ್ದೀರಿ. ನಿಮ್ಮ ಆಶೀರ್ವಾದದಿಂದ ನಾನು 2ನೇ ಸಲ ಮುಖ್ಯಮಂತ್ರಿ ಆಗಿದ್ದೀನಿ. ಮೊದಲ ಸಲ ಐದು ವರ್ಷ ಸಂಪೂರ್ಣ ಅಧಿಕಾರ ಮುಗಿಸಿದೆ. ಎರಡನೇ ಬಾರಿ ಸಿಎಂ ಆಗಿದೀನಿ, ಜನರ ನಿರೀಕ್ಷೆ ಬಹಳ ಇದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ನಿಮ್ಮ ಆಶೀರ್ವಾದ ಇದೇ ರೀತಿ ಮುಂದುವರೆಯಲಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ