newsfirstkannada.com

ಫಸ್ಟು ಥರ್ಟಿ, ಆಮೇಲೆ ನೈಂಟಿ.. ಕೊನೆಗೆ ನೈಟ್ ಪ್ಯಾಂಟ್​ ಲೇಸ್​​ನಿಂದ ಜೀವದ ಗೆಳಯನನ್ನೇ ಕೊಂದ ಪಾಪಿ

Share :

16-08-2023

  ಕಂಠಪೂರ್ತಿ ಕುಡಿದ್ರು ಕಿರಿಕ್ ಮಾಡಿಕೊಂಡರು

  ರಾಯಚೂರಲ್ಲಿ ನಡೀತು ಬೆಚ್ಚಿ ಬೀಳೀಸೋ ಕೃತ್ಯ

  ಟೆರೇಸ್​ ಮೇಲೆ ಪಾರ್ಟಿ ಮಾಡಿ ಜೀವಬಿಟ್ಟ ಗೆಳೆಯ

ರಾಯಚೂರು: ಕುಡಿದ ಮತ್ತಿನಲ್ಲಿ ನೈಟ್ ಪ್ಯಾಂಟ್ ಲೇಸ್​ನಿಂದ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಲಿಂಗಸುಗೂರು ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.

ರವಿಕುಮಾರ್ (33) ಕೊಲೆಯಾದ ಯುವಕ. ಹುಬ್ಬಳ್ಳಿ ಮೂಲದ ಪವನ್ ಕುಮಾರ್ ಕೊಲೆಯಾದ ಆರೋಪಿ. ಇಬ್ಬರು ಯುವಕರು ಮನೆ ಟೆರೇಸ್ ಮೇಲೆ ಒಟ್ಟಿಗೆ ಸೇರಿ ಮದ್ಯಪಾನ ಮಾಡಿದ್ದರು. ಎಣ್ಣೆ ಏಟು ಕಿಕ್ ಕೊಡುತ್ತಿದ್ದಂತೆಯೇ, ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ.

ಕೊನೆಗೆ ಪವನ್ ಕುಮಾರ್​ ಎಂಬಾತ, ರವಿಕುಮಾರ್ ಕುತ್ತಿಗೆಗೆ ಪ್ಯಾಂಟ್ ಲೇಸ್​ನಿಂದ ಗಟ್ಟಿಯಾಗಿ ಬಿಗಿದಿದ್ದಾನೆ. ಪರಿಣಾಮ ರವಿಕುಮಾರ್ ಉಸಿರುಗಟ್ಟಿ ಅಲ್ಲೇ ಸಾವನ್ನಪ್ಪಿದ್ದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಸ್ಟು ಥರ್ಟಿ, ಆಮೇಲೆ ನೈಂಟಿ.. ಕೊನೆಗೆ ನೈಟ್ ಪ್ಯಾಂಟ್​ ಲೇಸ್​​ನಿಂದ ಜೀವದ ಗೆಳಯನನ್ನೇ ಕೊಂದ ಪಾಪಿ

https://newsfirstlive.com/wp-content/uploads/2023/08/PANT-LASE.jpg

Load More