ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋದ ಯುವಕ
ಬುದ್ದಿ ಹೇಳಿದ್ರೂ ಕೇಳದೆ ಹಳ್ಳ ದಾಟಲು ಮುಂದಾದ!
ಭಯಾನಕ ದುಸ್ಸಾಹಸಕ್ಕೆ ಕೈ ಹಾಕಿದ ಯುವ ನೀರುಪಾಲು
ಕಲಬುರಗಿ: ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಗಿಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರ ನಡುವೆ ಹಳ್ಳದ ನೀರಿನಲ್ಲಿ ಯುವಕನೋರ್ವ ಕೊಚ್ಚಿ ಹೋಗಿರೋ ಘಟನೆ ಬೆಳಕಿಗೆ ಬಂದಿದೆ.
ಅಪಾಯವನ್ನು ಲೆಕ್ಕಿಸದೆ ಯುವಕನೋರ್ವ ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಹೋಗಿ ನೀರುಪಾಲಾಗಿರೋ ಘಟನೆ ಚಿಂಚೋಳಿ ತಾಲೂಕಿನ ದೋಟಿಕೊಳ ಗ್ರಾಮದಲ್ಲಿ ನಡೆದಿದೆ. ಭಾರೀ ಮಳೆಯಿಂದ ದೋಟಿಕೊಳ ಹಳ್ಳವು ತುಂಬಿ ಹರಿಯುತ್ತಿತ್ತು. ದೋಟಿಕೊಳ ಗ್ರಾಮದ ಮಾರುತಿ ಎಂಬ ಯುವಕನಿಗೆ ಗ್ರಾಮಸ್ಥರು ಬುದ್ದಿ ಹೇಳಿದ್ರು ಕೇಳದೆ ಹಳ್ಳ ದಾಟಲು ಮುಂದಾಗಿದ್ದಾನೆ.
ರಭಸವಾಗಿ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೇ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಆದರೆ ಇದೇ ವೇಳೆ ನೀರಿನ ಮಟ್ಟ ಹೆಚ್ಚಾಗಿದ್ದ ಪರಿಣಾಮ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಸದ್ಯ ಮಾರುತಿಗಾಗಿ ಗ್ರಾಮಸ್ಥರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ