newsfirstkannada.com

ಗೆಳೆಯನ ಬರ್ತ್‌ ಡೇ ಪಾರ್ಟಿಗೆ ಹೋಗಿದ್ದ ಯುವಕ ದಾರುಣ ಸಾವು

Share :

Published May 17, 2024 at 2:13pm

Update May 17, 2024 at 2:21pm

  ಬರ್ತ್‌ ಡೇ ಪಾರ್ಟಿಗೆ ಮುಗಿಸಿ ಮೂಡಲಪಾಳ್ಯಕ್ಕೆ ವಾಪಸ್ ಬರುತ್ತಿದ್ದ

  ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದ ಯುವಕ

  ಸಂಚಾರಿ ನಿಯಮ ಪಾಲಿಸಿದ್ದರೆ ವರುಣ್ ಸಾವು ಸಂಭವಿಸುತ್ತಿರಲಿಲ್ಲ

ಬೆಂಗಳೂರು: ಅತಿವೇಗ ಜೀವಕ್ಕೆ ಅಪಾಯ.. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಅವಸರವೇ ಅಪಘಾತಕ್ಕೆ ಕಾರಣ ಅಂತ ಎಷ್ಟೇ ಹೇಳಿದ್ರು ಕೆಲವರಂತೂ ಬುದ್ಧಿ ಕಲಿಯೋದಿಲ್ಲ. ಕೊನೆಗೆ ದುರಂತಕ್ಕೀಡಾಗುತ್ತಾರೆ.

ಬೆಂಗಳೂರಲ್ಲಿ ತಡರಾತ್ರಿ ಸಂಭವಿಸಿರೋ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ವರುಣ್ ಮೃತ ಬೈಕ್ ಸವಾರ.

ಇದನ್ನೂ ಓದಿ: ಮೆರಿಟ್‌ನಲ್ಲಿ ಎಂಜಿನಿಯರಿಂಗ್ ಸೀಟ್ ಪಡೆದಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಕಾರಣವೇನು? 

ಕೋಲಾರ ಮೂಲದವನಾದ ವರುಣ್, ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಏಷಿಯನ್ ಪೇಂಟ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಗೆಳೆಯನ ಬರ್ತ್‌ ಡೇ ಪಾರ್ಟಿಗೆ ಮುಗಿಸಿ ಮೂಡಲಪಾಳ್ಯಕ್ಕೆ ವಾಪಸ್ ಬರೋ ವೇಳೆ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಗುದ್ದಿದ್ದಾನೆ.

ಬೈಕ್ ಓಡಿಸುತ್ತಿದ್ದ ವರುಣ್‌ ರಸ್ತೆ ಮಧ್ಯದ ಸರ್ವೀಸ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲೇ ವರುಣ್‌ಗೆ ಅತಿಯಾದ ರಕ್ತಸ್ರಾವ ಆಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.

ಗೆಳೆಯನ ಬರ್ತ್‌ ಡೇ ಪಾರ್ಟಿಗೆ ಹೋಗಿದ್ದ ವರುಣ್‌ ಹೆಲ್ಮೆಟ್ ಧರಿಸದೇ ವೇಗವಾಗಿ ಬೈಕ್‌ ಚಾಲನೆ ಮಾಡಿಕೊಂಡು ಬಂದಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೆಳೆಯನ ಬರ್ತ್‌ ಡೇ ಪಾರ್ಟಿಗೆ ಹೋಗಿದ್ದ ಯುವಕ ದಾರುಣ ಸಾವು

https://newsfirstlive.com/wp-content/uploads/2024/05/Bangalore-Accident.jpg

Load More