newsfirstkannada.com

ಫೋನ್​ ಕಾಲ್​ ಅವೈಡ್ ಮಾಡಿದ್ದಕ್ಕೆ ಅನುಮಾನ.. ಕಬ್ಬಿಣದ ರಾಡ್​ನಿಂದ ಪ್ರೇಯಸಿ ಮೇಲೆ ಹಲ್ಲೆ; ಪ್ರಿಯಕರ ಏನಾದ?

Share :

05-08-2023

    ಪಿಜಿ ಬಳಿ ಪ್ರಿಯತಮೆಯನ್ನ ಕರೆಯಿಸಿಕೊಂಡ ಪ್ರಿಯಕರ

    ಇಂಟರ್ನ್​ಗೆ ಬಂದಿದ್ದ ಯುವತಿಗೆ ಕ್ಯಾಚ್​ ಹಾಕಿದ್ದ ರವಿ

    ಬೆಳಗಿನ ಜಾವ ರಾಡ್​ನಿಂದ ಹಲ್ಲೆ ಮಾಡಿದ ಆರೋಪಿ..!

ಬೆಂಗಳೂರು: ಫೋನ್​ ಕಾಲ್​ ಅವೈಡ್ ಮಾಡಿದ್ದಕ್ಕೆ ಅನುಮಾನಗೊಂಡ ಪ್ರಿಯಕರನೊಬ್ಬ, ತನ್ನ ಪ್ರೇಯಸಿಗೆ ರಾಡ್​ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಮೈಕೋಲೇಔಟ್​ನ ಪಿ.ಜಿಯೊಂದರ ಬಳಿ ನಡೆದಿದೆ.

ಸ್ನೇಹ ಸಿಕ್ತಾ ಚಟರ್ಜಿ (26) ಎನ್ನುವರು ಹಲ್ಲೆಗೊಳಗಾದ ಯುವತಿ. ರವಿಕುಮಾರ್ (28) ಹಲ್ಲೆ ಮಾಡಿದ ಆರೋಪಿ. ಟೆಕ್ಕಿಯಾಗಿದ್ದ ರವಿಕುಮಾರ್ ಕಳೆದ 1 ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಗೆ ಇಂಟರ್ನ್​ ಆಗಿ ಯುವತಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಇತ್ತೀಚೆಗೆ ಯುವತಿ ಬೇರೆ ಕಂಪನಿಗೆ ಸೇರಿಕೊಂಡು ಅಂತರ ಕಾಯ್ದುಕೊಂಡು ಫೋನ್​ ಕಾಲ್​ಗಳನ್ನ ಅವೈಡ್​​ ಮಾಡಿದ್ದಳು. ಕರೆಗಳಿಗೂ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡಿದ್ದನು ಎನ್ನಲಾಗಿದೆ. ಇದರಿಂದ ಕೋಪಗೊಂಡು ಆ.2 ರಂದು ಬೆಳಗಿನ ಜಾವ 3.30ರ ಸುಮಾರಿಗೆ ತನ್ನ ಪಿಜಿ ಬಳಿ ಕರೆಯಿಸಿಕೊಂಡು ಕಬ್ಬಿಣದ ರಾಡ್​ನಿಂದ ಯುವತಿ ತಲೆಗೆ ಹಲ್ಲೆ ಮಾಡಿದ್ದನು. ಇದರಿಂದ ತೀವ್ರ ರಕ್ತ ಸ್ರಾವವಾಗುತ್ತಿದ್ದ ಆಕೆಯನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ನಿಮ್ಹಾನ್ಸ್​ನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಸಂಬಂಧ ಮೈಕೋಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಆರೋಪಿ ರವಿಕುಮಾರ್​​ನನ್ನು ಅರೆಸ್ಟ್​ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೋನ್​ ಕಾಲ್​ ಅವೈಡ್ ಮಾಡಿದ್ದಕ್ಕೆ ಅನುಮಾನ.. ಕಬ್ಬಿಣದ ರಾಡ್​ನಿಂದ ಪ್ರೇಯಸಿ ಮೇಲೆ ಹಲ್ಲೆ; ಪ್ರಿಯಕರ ಏನಾದ?

https://newsfirstlive.com/wp-content/uploads/2023/08/BNG_HALLE.jpg

Load More