ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯಲ್ಲಿ ಕೇಸ್
ಪುತ್ರನ ಕಳ್ಕೊಂಡು ಕಣ್ಣೀರಲ್ಲಿ ಮುಳುಗಿದ ಕುಟುಂಬ
ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ಟರು-ಕುಟುಂಬಸ್ಥರು
‘ಬೆಂಗಳೂರು: ವೈದ್ಯರು ನೀಡಿದ ಇಂಜೆಕ್ಷನ್ನಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಯುವ ಹೋಟೆಲ್ ಉದ್ಯಮಿ ಅಮರ್ ಶೆಟ್ಟಿ ಪೋಷಕರು ಆರೋಪಿಸಿದ್ದಾರೆ. ಇದೀಗ ನ್ಯೂಸ್ಫಸ್ಟ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಮೃತ ಯುವಕ ಈ ವರ್ಷ ಮದುವೆಯಾಗಬೇಕಿದ್ದ. ಇನ್ನೆರಡು ದಿನಗಳಲ್ಲಿ ಮದುವೆ ಮಾತುಕತೆ ಕೂಡ ನಡೆಯಬೇಕಿತ್ತು. ಅಷ್ಟರಲ್ಲೇ ಹೀಗೆ ಆಗಿದೆ ಎಂದು ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಜ್ವರಕ್ಕಾಗಿ ಇಂಜೆಕ್ಷನ್ ಕೊಟ್ರಂತೆ ವೈದ್ಯರು.. ಯುವ ಉದ್ಯಮಿ ಸಾವು.. ಈ ಸಾವು ನ್ಯಾಯವೇ..?
ಮೃತನ ಸಹೋದರ ರಾಘವೇಂದ್ರ ಶೆಟ್ಟಿ ಪ್ರತಿಕ್ರಿಯಿಸಿ.. ಅಮರ್ ಕೆ.ಪಿ.ಅಗ್ರಹಾರದಲ್ಲಿ ಮಾವನ ಜೊತೆ ಇದ್ದ. ಕ್ಲಿನಿಕ್ ನಲ್ಲಿ ಇಂಜೆಕ್ಷನ್ ಕೊಟ್ಟ ಬಳಿಕ ಆ ಜಾಗ ಊದಿಕೊಂಡಿತ್ತು. ಜ್ವರ ಇದೆ ಅಂತಾ ಭಾಗ್ಯ ಕ್ಲಿನಿಕ್ಗೆ ಹೋಗಿದ್ದ. ಇಂಜೆಕ್ಷನ್ ಕೊಟ್ಟ ಬಳಿಕ ಆರ್ಗಾನ್ಸ್ಗೆ ಡ್ಯಾಮೇಜ್ ಆಗಿದೆ. ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ಟರು. ಅಮರ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಮೃತ ಅಮರ್ ಶೆಟ್ಟಿಯ ಚಿಕ್ಕಮ್ಮ ನ್ಯೂಸ್ಫಸ್ಟ್ ಜೊತೆ ಮಾತನಾಡಿ, ಅವನು ಇಲ್ಲೇ ಮಾವನ ಜೊತೆ ವಾಸವಿದ್ದ. ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದ. ಕ್ಲಿನಿಕ್ನಲ್ಲಿ ಇಂಜೆಕ್ಷನ್ ಕೊಟ್ಟ ಬಳಿಕ ಹೀಗಾಗಿದೆ. ಆ ಡಾಕ್ಟರ್ ಯಾವ ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ಗೊತ್ತಾಗ್ತಿಲ್ಲ. ಇಂಜೆಕ್ಷನ್ ಹೆಸರು ಎಲ್ಲೂ ಬರೆದಿಲ್ಲ. ಅವನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ. ಇನ್ನೊಂದು ವರ್ಷದಲ್ಲಿ ಮದುವೆ ಇತ್ತು ಎಂದು ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ