newsfirstkannada.com

ಜ್ವರಕ್ಕಾಗಿ ಇಂಜೆಕ್ಷನ್ ಕೊಟ್ರಂತೆ ವೈದ್ಯರು.. ಯುವ ಉದ್ಯಮಿ ಸಾವು.. ಈ ಸಾವು ನ್ಯಾಯವೇ..?

Share :

19-08-2023

    ಬೆಂಗಳೂರು, ಕೆಪಿ ಅಗ್ರಹಾರ ಠಾಣೆಯಲ್ಲಿ ಕೇಸ್

    ಪುತ್ರನ ಕಳ್ಕೊಂಡು ಕಣ್ಣೀರಲ್ಲಿ ಮುಳುಗಿದ ಕುಟುಂಬ

    ಮೃತ ಯುವಕನ ಕುಟುಂಬಸ್ಥರ ಆರೋಪ ಏನು ಗೊತ್ತಾ..?

ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಮರ್ ಶೆಟ್ಟಿ (31) ಮೃತ ಯುವಕ.

ಏನಿದು ಆರೋಪ ಪ್ರಕರಣ..?

ಜ್ವರದಿಂದ ಬಳಲುತ್ತಿದ್ದ ಅಮರ್ ಶೆಟ್ಟಿ, ಆಗಸ್ಟ್ 13 ರಂದು ಮಾಗಡಿಯಲ್ಲಿರುವ ‘ಭಾಗ್ಯಶ್ರೀ ಕ್ಲಿನಿಕ್’ಗೆ ಹೋಗಿದ್ದರು. ಅಂತೆಯೇ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ ಎನ್ನಲಾಗಿದೆ. ಅದಾದ ನಂತರ ಅಮರ್ ಶೆಟ್ಟಿ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾಗಿದೆ. ಪರಿಣಾಮ ನಿನ್ನೆ ಯುವಕ ಸಾವನ್ನಪ್ಪಿದ್ದಾನೆ.

ಕುಟುಂಬಸ್ಥರು ಹೇಳ್ತಿರೋದು ಏನು..?

ಅಮರ್​​ ಶೆಟ್ಟಿಗೆ ಜ್ವರ ಎಂದು ವೈದ್ಯರು ಇಂಜೆಕ್ಷನ್ ಕೊಟ್ಟರು. ಇಂಜೆಕ್ಷನ್ ಬೆನ್ನಲ್ಲೇ, ಅದು ಅಡ್ಡ ಪರಿಣಾಮ ಬೀರಿದೆ. ಅವರ ದೇಹದ ವಿವಿಧ ಅಂಗಾಂಗಗಳು ಫಂಕ್ಷನ್ ಸ್ಟಾಪ್ ಮಾಡಿವೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಅಮರ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ದುಬೈನಲ್ಲಿದ್ದ ಈ ಯುವಕ, ಕಳೆದ 1 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೋಟೆಲ್ ಉದ್ಯಮ ನಡೆಸುತ್ತಿದ್ದ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜ್ವರಕ್ಕಾಗಿ ಇಂಜೆಕ್ಷನ್ ಕೊಟ್ರಂತೆ ವೈದ್ಯರು.. ಯುವ ಉದ್ಯಮಿ ಸಾವು.. ಈ ಸಾವು ನ್ಯಾಯವೇ..?

https://newsfirstlive.com/wp-content/uploads/2023/08/AMAR.jpg

Load More