ಸಣ್ಣ ಹುಡುಗರಿಗೆ ಲವ್ವರ್ ಇದ್ರೂ ನನಗೆ ಇಲ್ಲ ಅನ್ನೋ ಬೇಜಾರು.!
ಒನ್ ಸೈಡ್ನಲ್ಲಿ ಒಬ್ಬಳನ್ನ ಲವ್ ಮಾಡಿದೆ, ಆದರೆ ಅವಳು ಒಪ್ಪಿಲ್ಲ
ಹುಡುಗಿ ಇಲ್ಲದ ಜೀವನ ಉಪ್ಪಿಲ್ಲದ ಊಟ- ನಾಪತ್ತೆಯಾದ ಹುಡುಗ
ಸಿಂಗಲ್ ಆಗಿರೋರ ಗೋಳು ಒಂದೆರಡಲ್ಲ. ಏಜ್ ಬಾರ್ ಆಗಿದ್ರೆ ಒಂದ್ ವಿಚಾರ. ಅಯ್ಯೋ ವಯಸಾಗ್ತಿದೆ ಏನ್ ಮಾಡೋದು ಅಂತ ಗೋಳಾಡಬಹುದು. ಆದ್ರೆ ಇಲ್ಲೊಬ್ಬ ಇನ್ನೂ ಹರೆಯದ ಹುಡುಗ ಸಿಂಗಲ್ ಆಗಿರೋದಕ್ಕೆ ಮನಸ್ಸಿಗೆ ನೋವು ಮಾಡ್ಕೊಂಡು ನಾಪತ್ತೆಯಾಗಿದ್ದಾನೆ. ಜಗತ್ತಿನಲ್ಲಿ ಎಂಥೆಂತಾ ಸಮಸ್ಯೆಗಳಿವೆ. ಆದ್ರೆ ಈಗಿನ ಜನರೇಷನ್ನವರಿಗೆ ಏನಾಗಿದ್ಯೋ ಏನೋ ಗೊತ್ತಿಲ್ಲ. ಪ್ರೀತಿ ಮಾಡೋದಕ್ಕೆ ಹುಡುಗಿ ಇಲ್ಲ ಅನ್ನೋ ಕಾರಣ ಈ ಸಿಂಗಲ್ ಸುಂದರ ಮನೆ ಬಿಟ್ಟು ಹೋಗಿದ್ದಾನೆ. ಅಷ್ಟಕ್ಕೂ ಈ ಸಿಂಗಲ್ ಸುಂದರ ಹೋಗಿದ್ದೇಲಿಗೆ? ನಡೆದಿದ್ದೇನು?.
ಇದನ್ನೂ ಓದಿ: ಭರ್ಜರಿ ರೋಸ್ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್ ರೆಡಿ; ಎಲ್ಲಿ?
ಸಿಂಗಲ್ ಸುಂದರರು ಒಬ್ಬಿಬ್ಬರಲ್ಲ. ಜಗತ್ತಿನಲ್ಲಿ ಅದೆಷ್ಟು ಸಿಂಗಲ್ ಆಗಿದ್ದಾರೆ ಅನ್ನೋ ವಿಚಾರ ಹೊಸದೇನಲ್ಲ. ಈ ಸಿಂಗಲ್ ಹುಡುಗರ ಮನದ ನೋವು ಹೇಳೋ ರೀಲ್ಸ್ಗಳೇನೂ ಕಮ್ಮಿಯಿಲ್ಲ. ಏಜ್ ಬಾರ್ ಆಗಿದೆ. ವಯಸ್ಸಾಗಿದೆ ಹೆಣ್ಣ ಸಿಗ್ತಿಲ್ಲ ಅಂತ ಮನಸ್ಸು ನೋವು ಮಾಡಿಕೊಳ್ಳೋದ್ರಲ್ಲಿ ಅರ್ಥ ಇದೆ. ಆದ್ರೆ ಈಗಿನ ಜನರೇಷನ್ನವರಿಗೆ ಯಾಕೆ ಈ ಬಾದೆ ಕಾಡ್ತಿದ್ಯೋ ಗೊತ್ತಿಲ್ಲ. ಮೊದಲೇ ಈ ಜನರೇಷನ್ ಯೂಥ್ಸ್ಗೆ ತಾಳ್ಮೆ ಅನ್ನೋದೇ ಇಲ್ಲ. ಅದ್ರಲ್ಲೂ ಪ್ರೀತಿ ಪ್ರೇಮ ವಿಚಾರ ಅಂತ ಬಂದ್ರೆ ಅವರ ಪಾಡು ದೇವರಿಗೆ ಪ್ರೀತಿ. ಇಲ್ಲೂ ಕೂಡ ಜಸ್ಟ್ 24 ವರ್ಷದ ಯುವಕ ಪ್ರೀತಿ ಮಾಡೋಕೆ ಹುಡುಗಿ ಸಿಗ್ಲಿಲ್ಲ ಅಂತ ನಾಪತ್ತೆಯಾಗಿದ್ದಾನೆ.
ಇಂಥಾ ಮೂರ್ಖರಿಗೆ ಏನ್ ಹೇಳೋಣ ಹೇಳಿ. ಈ ವಯಸ್ಸನಲ್ಲಿ ಚೆನ್ನಾಗಿ ಓದಿ ಒಂದೊಳ್ಳೆ ಕೆಲಸ ಹುಡುಕಿ ಜೀವನ ರೂಪಿಸಿಕೊಳ್ಬೇಕು ಅನ್ನೋದು ಗುರಿಯಾಗಿರಬೇಕು. ಆದ್ರೆ ಈ ಸುಂದರನಿಗೆ ತಾನು ಸಿಂಗಲ್ ಆಗಿರೋದು ದೊಡ್ಡ ಸಮಸ್ಯೆಯಾಗೋಗಿದೆ ನೋಡಿ. ಅದಕ್ಕೆ ಈ ಪುಣ್ಯಾತ್ಮ ತನನ್ನ ಯಾರು ಲವ್ ಮಾಡ್ತಿಲ್ಲ. ಪ್ರೀತಿ ಮಾಡೋಕೆ ಹುಡುಗಿ ಸಿಗ್ತಿಲ್ಲ ಅಂತ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋದವನು ಎಲ್ಲಿದ್ದಾನೆ? ಏನ್ ಮಾಡ್ತಿದ್ದಾನೆ ಅನ್ನೋದೆ ಇಲ್ಲಿ ತನಕ ಗೊತ್ತಾಗಿಲ್ಲ.
ಪ್ರೀತಿಸಲು ಹುಡುಗಿ ಸಿಗ್ತಿಲ್ಲ.. ಡೆತ್ ನೋಟ್ ಬರೆದಿತ್ತು ನಾಪತ್ತೆ!
ಸಿಂಗಲ್ ಸುಂದರನ ಹೆಸರು ಜಯದೀಪ್ ಅಂತ. ಶಿವಮೊಗ್ಗದ ತೀರ್ಥಹಳ್ಳಿಯ ಹುಡುಗ. ಅಂಥಾ ವಯಸ್ಸೇನು ಆಗಿಲ್ಲ. 24 ವರ್ಷ ಅಷ್ಟೆ. ಆದ್ರೆ ಈ ವಯಸ್ಸಿಗೆ ಇವನಿಗೆ ಜೀವನವೇ ಬೇಡ ಅನಿಸಿದೆ. ಹಾಗಂತ ಅದಕ್ಕೆ ಸ್ಟ್ರಾಂಗ್ ಕಾರಣ ಏನೂ ಇಲ್ಲ. ಈ ಸಿಂಗಲ್ ಸುಂದರನಿಗೆ ಪ್ರೀತಿ ಮಾಡೋದಕ್ಕೆ ಹುಡುಗಿ ಸಿಕ್ಕಿಲ್ಲವಂತೆ. ಅದಕ್ಕೆ ಈ ಯುವಕ ವಾಟ್ಸಪ್ನಲ್ಲಿ ಸ್ಟೇಟಸ್ ಒಂದನ್ನ ಹಾಕಿ ನಾಪತ್ತೆಯಾಗಿದ್ದಾನೆ.
ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ
ನಾನು ಬದುಕಿದಿದ್ರೆ ಸ್ವಲ್ಪ ದಿನಗಳಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಬ್ಬ ಒಳ್ಳೆ ವಿದ್ಯಾರ್ಥಿ ಈ ಸಲ ಱಂಕ್ ಬರುವ ಚಾನ್ಸ್ ಇತ್ತು. ಆದ್ರೆ ಅದು ಇನ್ನೂ ನೆನಪು ಮಾತ್ರ. ಅಪ್ಪ ಅಮ್ಮ ಸಂಜಯ್ ನನ್ನ ಕ್ಷಮಿಸಿಬಿಡಿ. ನಿಮ್ಮ ಆಸೆ ನಂಬಿಕೆ ಎಲ್ಲ ನಾನು ಹಾಳು ಮಾಡ್ತಿದ್ದೀನಿ ಅಂತ ಬೇಜಾರು ಆಗ್ಬೇಡಿ. ನನ್ನ ಸಾಲ ನಿಮ್ಮ ಮೇಲೆ ಹಾಕಿ ಹೋಗ್ತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ನನ್ನ ಬೈಕ್ ಮಾರಿ ಎಲ್ಲರಿಗೂ ಸಾಲ ವಾಪಸ್ ಕೊಡಿ. ನನ್ನ ಜೀವನವೇ ಒಂದು ರೀತಿ ಉಪ್ಪಿಲ್ಲದ ಊಟದ ತರಹ ಆಗಿದೆ. ಈ ರೀತಿ ಸುಮಾರು 3 ವರ್ಷದಿಂದ ಆಗಿದೆ. ಜೀವನದಲ್ಲಿ 24 ವಯಸ್ಸಾಗಿದ್ರೂ, ಒಂದು ಹುಡುಗಿ ಅಂತ ಇಲ್ಲ. ಸಣ್ಣ ಸಣ್ಣ ಹುಡುಗರಿಗೆ ಲವ್ವರ್ ಇದ್ರೂ ನನಗೆ ಇಲ್ಲ ಅನ್ನೋ ಬೇಜಾರು. ಒನ್ ಸೈಡ್ನಲ್ಲಿ ನಾನು ಒಬ್ಬಳನ್ನ ಲವ್ ಮಾಡ್ದೆ, ಅವಳು ಒಪ್ಪಿಲ್ಲ. ಒಳ್ಳೆ ಕೆಲಸ ಹುಡುಕೋದ್ರಲ್ಲೂ ವಿಫಲನಾದೆ ಇತ್ತಿಚೀನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರು ದೂರ ಹೋಗುವಂತೆ ಪ್ರೇರೆಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ, ಊರು ಬಿಡೋದಕ್ಕಿಂತ ಸಾವೇ ನನ್ನ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ ಸಾರಿ ಪ್ಲೀಸ್ ದಯವಿಟ್ಟು ಕ್ಷಮಿಸಿಬಿಡಿ. ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ.
ಇದನ್ನೂ ಓದಿ: ನಟಿ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದೇಕೆ? ಇಲ್ಲಿದೆ 6 ಪ್ರಮುಖ ಕಾರಣಗಳು!
ಜಸ್ಟ್ 24 ವಯಸ್ಸಿಗೆ ಜೀವನೋತ್ಸಹ ಕಳೆದುಕೊಂಡ್ರೆ ಏನ್ ಹೇಳೋಣ ಹೇಳಿ. ಜಗತ್ತಿನಲ್ಲಿ ಎಂಥೆತ್ತಾ ಸಮಸ್ಯೆಗಳಿದ್ದೊರೆಲ್ಲ ಅಡೆ ತಡೆಗಳನ್ನ ದಾಟಿ ಜೀವನ ಸಾಗಿಸ್ತಿದ್ದಾರೆ. ಆದ್ರೆ ಇವನಿಗೆ ಹುಡುಗಿ ಸಿಗ್ತಿಲ್ಲ ಅನ್ನೋದೆ ದೊಡ್ಡ ಸಮಸ್ಯೆಯಾಗಿ ಕಾಡಿದೆ. ಅದ್ರಲ್ಲೂ ಇವನು ಬಳಸಿರುವ ವಾಕ್ಯ ನೋಡಿ ಹುಡುಗಿ ಇಲ್ಲದ ಜೀವನ ಉಪ್ಪಿಲ್ಲದ ಊಟ ಅಂತೆ. ಅಯ್ಯೋ ದೇವರೇ ಸಣ್ಣ ವಯಸ್ಸಿಗೆ ಹುಡುಗರು ಯಾಕೆ ಮಾನಸಿಕ ಧೈರ್ಯವನ್ನು ಕಳ್ಕೊತ್ತಿದಾದ್ರೂ ಗೊತ್ತಿಲ್ಲ. ಇದೆಲ್ಲದ್ರ ಮಧ್ಯೆ ಕೆಲಸನಾ ಸಿಗ್ತಿರಲ್ವಿಂತೆ ಹೀಗಾಗಿ ಈ ಪುಣ್ಯಾತ್ಮ ವಾಟ್ಸಪ್ನಲ್ಲಿ ಅಪ್ಪ ಅಮ್ಮನಿಗೆ ಸಾರಿ ಕೇಳಿ ಸಾವು ನನ್ನ ಕರೆಯುತ್ತಿದೆ. ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ ಅಂತ ಬರೆದು ಮನೆ ಬಿಟ್ಟು ಹೋಗಿದ್ದಾನೆ.
ಇದಿಷ್ಟೆ ಆಗಿದ್ರೆ ಓಕೆ.. ಆದ್ರೆ ಇವನು ಮನಿ ಟ್ರೆಂಡಿಂಗ್ ಅಂತೆಲ್ಲ ಹಣ ಹೂಡಿಕೆ ಮಾಡಿದ್ನಂತೆ. ಹಾಗಂತ ಸ್ವಂತ ದುಡ್ಡು ಅಲ್ಲ. ಅವರಿವರ ಹತ್ರ ಸಾಲ ಮಾಡಿ 90 ಸಾವಿರ ಹಣವನ್ನು ಮನಿ ಟ್ರೆಂಡಿಂಗ್ನಲ್ಲಿ ಹಾಕಿದ್ನಂತೆ. ಆದ್ರೆ ಹಾಕಿದ ದುಡ್ಡು ವಾಪಸ್ ಬಂದಿಲ್ಲ. ಹೀಗಾಗಿ ಈ ವಿಚಾರವೂ ಜಯದೀಪ್ ಮನಸ್ಸು ಕೆಡಿಸಿದ್ದು ನಾನು ಎಲ್ಲರ ನಂಬಿಕೆಗೆ ಮೋಸ ಮಾಡಿದೆ. ನಂಬಿಕೆ ಉಳಿಸಿಕೊಳ್ಳೋದಕ್ಕೆ ಆಗಿಲ್ಲ ಅಂತ ಸ್ಟೇಟಸ್ನಲ್ಲಿ ಬರೆದಿದ್ದಾನೆ.
ಇದನ್ನೂ ಓದಿ: ಪವಿತ್ರಾ ಗೌಡಗೆ ಬಿಗ್ ಶಾಕ್.. ಕೋರ್ಟ್ನಿಂದ ಜಾಮೀನು ಅರ್ಜಿ ವಜಾ
ಸುಮಾರು ₹90,000 ಸಾವಿರ ಸಾಲ ಮಾಡಿದೆ
ನನ್ನ ಒಂದು ಸಣ್ಣ ತಪ್ಪು ಇವತ್ತು ನನ್ನ ಸಾವಿನ ಕಡೆ ತಳ್ಳುತ್ತಿದೆ. Money Trading ಇನ್ವೆಸ್ಟ್ಮೆಂಟ್ ಅಂತ ಕಳೆದ 3 ದಿನದಲ್ಲಿ ಸಿಕ್ಬಿದ್ದೆ. ನನ್ನಂತ ತಿಳಿವಳಿಕೆ ಇದ್ದವನು ಹೇಗೆ ಸಿಕ್ಬಿದ್ದೆ ಅಂತ ನಂಬಕ್ ಆಗ್ತಿಲ್ಲ. ಎಲ್ಲರ ಬಳಿ ಸಾಲಕ್ಕೆ ಬೇಡಿಕೆ ಇಟ್ಟೆ. ಸುಮಾರು ಜನ ಬಳಿ ದುಡ್ಡು ಫೋನ್ ಪೇ ಗೂಗಲ್ ಪೇ ಮಾಡಿಸ್ಕೊಂಡೆ, ಸುಮಾರು ₹90,000 ಸಾವಿರ ಸಾಲ ಮಾಡಿದೆ. ಪಾಪ ಅವರು ನನ್ನ ಮೇಲೆ ನಂಬಿಕೆ ಇಟ್ಟು ಕಳಿಸಿದ್ರು. ಆದ್ರೆ ಅವರ ನಂಬಿಕೆ ಉಳಿಸಿಕೊಳ್ಳಲು ಆಗಲಿಲ್ಲ. ಅವರು ಯಾರು ಹಣಕ್ಕಾಗಿ ಒತ್ತಾಯ ಮಾಡಲಿಲ್ಲ. ಆದರೆ ನನಗೆ ಒಂದು ರೀತಿ ಜಿಗುಪ್ಸೆ ಉಂಟಾಗುತ್ತಿದೆ. ಈ ಸಣ್ಣ ಅಮೌಂಟ್ಗಳು ನನಗೆ ದೊಡ್ಡ ವಿಷಯ ಏನು ಆಗಿರಲಿಲ್ಲ. ಆದ್ರೆ ಎಲ್ಲರ ನಂಬಿಕೆ ಉಳಿಸಿಕೊಳ್ಳೋದು ನನಗೆ ಈ ಸಂದರ್ಭದಲ್ಲಿ ಕಷ್ಟ ಆಯಿತು
ಈಗಿನ ಯಂಗ್ ಜನರೇಷನ್ ಹುಡುಗ ಮನಸ್ಸು ತುಂಬಾ ಸೂಕ್ಷ್ಮ ಆಗಿದೆ. ಹುಡುಗಿ ಸಿಕ್ಕಿಲ್ಲ ಎಂದು ನಾಪತ್ತೆಯಾದವನಿಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಶೋಧ ನಡೆಸ್ತಿದೆ. ಅದೇನೆ ಇರಲಿ ಇಂತಾ ಸಣ್ಣ ವಿಚಾರಕ್ಕೆ ಬದುಕೇ ಬೇಡ ಅನ್ನೋದ್ರಲ್ಲಿ ಅರ್ಥ ಇಲ್ಲ. ಇವನೇನು ಹುಡುಗಿ ಸಿಗ್ಲಿಲ್ಲ ಅಂತ ಸಾಯೋ ನಿರ್ಧಾರ ಮಾಡ್ದ.. ಆದ್ರೆ ಇವನನ್ನ ಹೆತ್ತು ಹೊತ್ತು ಬೆಳೆಸಿದ ಅಪ್ಪ ಅಮ್ಮನ ಪಾಡು? ಅವರ ಸ್ಥಿತಿ ಏನು? ಅನ್ನೊದೆ ಈಗಿರುವ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ