newsfirstkannada.com

YSJagan: ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಜಗನ್ ಪ್ರಮಾಣ ವಚನ ಸ್ವೀಕಾರ; ವಿಡಿಯೋ ವೈರಲ್‌!

Share :

Published June 21, 2024 at 1:17pm

Update June 21, 2024 at 1:40pm

  ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಜಗನ್ ಅನೆ ನೇನು..

  ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

  ಆಂಧ್ರಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಅಪರೂಪದ ದೃಶ್ಯ

ಆಂಧ್ರಪ್ರದೇಶ ವಿಧಾನಸಭಾ ಅಧಿವೇಶನ ಇಂದು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗಿದೆ. ವಿಧಾನಸಭಾ ಚುನಾವಣೆ ಮುಗಿದ ಬಳಿಕ ಮೊದಲ ಬಾರಿಗೆ ಸಿಎಂ ಚಂದ್ರಬಾಬು ನಾಯ್ಡು ಅವರು ಅಧಿವೇಶನ ಕರೆದಿದ್ದು, ಜನಪ್ರತಿನಿಧಿಗಳಾಗಿ ಆಯ್ಕೆಯಾದ ನೂತನ ಶಾಸಕರು, ಸಚಿವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಆಂಧ್ರ ರಾಜಕೀಯಕ್ಕೆ ಮೆಗಾ ಟ್ವಿಸ್ಟ್‌; ಜಗನ್ ವಿರುದ್ಧ ತೊಡೆ ತಟ್ಟಿದ ಚಂದ್ರಬಾಬು, ಪವನ್ ಕಲ್ಯಾಣ್‌; ಮುಂದೇನು? 

ವಿಧಾನಸಭಾ ಅಧಿವೇಶನದ ಮೊದಲ ದಿನವೇ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಾಯಿತು. ಡಿಸಿಎಂ ಪವನ್ ಕಲ್ಯಾಣ್ ಅವರು ಸೇರಿದಂತೆ ಟಿಡಿಪಿ, ಜನಸೇನಾ ಪಕ್ಷದ ನೂತನ ಶಾಸಕರು ವಿಧಾನಸಭೆಯ ಪ್ರತಿಜ್ಞಾವಿಧಿಯನ್ನು ಸ್ವೀಕಾರ ಮಾಡಿದರು.

ಟಿಡಿಪಿ, ಜನಸೇನಾ ಪಕ್ಷದ ಶಾಸಕರು, ಸಚಿವರು ವಿಧಾನಸಭಾ ಸದಸ್ಯತ್ವ ಸ್ವೀಕಾರ ಮಾಡುವ ಸಂಭ್ರಮ ಒಂದು ಕಡೆಯಾದ್ರೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದು ಗಮನ ಸೆಳೆಯಿತು.

ಸಿಎಂ ಆಗಿದ್ದ ಜಗನ್ ಮೋಹನ್ ರೆಡ್ಡಿ ಅವರ YSRCP ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು. ಅಧಿಕಾರ ಕಳೆದುಕೊಂಡ ಬಳಿಕ ಜಗನ್ ಅವರು ಮೊದಲ ಬಾರಿಗೆ ಅಸೆಂಬ್ಲಿಗೆ ಆಗಮಿಸಿದ್ದು, ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.

ವೈಎಸ್ ಜಗನ್ ಅವರು ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಜಗನ್ ಅನೆ ನೇನು ಎನ್ನುತ್ತಾ ಶಾಸನ ಸಭೆಯ ನಿಯಮಾನುಸಾರ, ಕಟ್ಟುಪಾಡುಗಳನ್ನು ಪಾಲಿಸುತ್ತೇನೆ ಎನ್ನುತ್ತಾ ಸಭಾ ಮರ್ಯಾದೆ, ಸಂಪ್ರದಾಯ ಪಾಲಿಸುತ್ತೇನೆ ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ವೈಎಸ್‌ ಜಗನ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

YSJagan: ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ವೈಎಸ್ ಜಗನ್ ಪ್ರಮಾಣ ವಚನ ಸ್ವೀಕಾರ; ವಿಡಿಯೋ ವೈರಲ್‌!

https://newsfirstlive.com/wp-content/uploads/2024/06/YS-Jagan-Swearing.jpg

Load More