newsfirstkannada.com

ತೆಲಂಗಾಣ ರಾಜಕೀಯದಲ್ಲಿ ಹೊಸ ಸಂಚಲನ.. ಪ್ರಭಾವಿ ನಾಯಕಿಯನ್ನು ಕಾಂಗ್ರೆಸ್​ಗೆ ತರಲು ಡಿ.ಕೆ.ಶಿವಕುಮಾರ್​​ ಆಪರೇಷನ್..!?

Share :

30-06-2023

    ತೆಲಂಗಾಣ ರಾಜಕೀಯದಲ್ಲಿ DKS ಹಾಟ್ ಟಾಪಿಕ್..!

    ತೆಲಂಗಾಣದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ತರಲು ಮೆಗಾ ಪ್ಲಾನ್

    ತೆಲಂಗಾಣ ನಾಯಕಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ..?

ಬೆಂಗಳೂರು: ತೆಲಂಗಾಣ ರಾಜಕೀಯದಲ್ಲಿ ‘ಆಪರೇಷನ್ ಕಾಂಗ್ರೆಸ್’ನ​ ಘಮಲು ನಾಟಿದ್ದು, ಭಾರೀ ಚರ್ಚೆಯಾಗ್ತಿದೆ. ಹೌದು, ವೈಎಸ್‌ಆರ್‌ಟಿಪಿ (Yuvajana Sramika Rythu Telangana Party) ಅಧ್ಯಕ್ಷೆ ಶರ್ಮಿಳಾ ತೆಲಂಗಾಣ ಕಾಂಗ್ರೆಸ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ವರದಿಗಳ ಪ್ರಕಾರ, ಶರ್ಮಿಳಾರನ್ನು ಕಾಂಗ್ರೆಸ್​​ಗೆ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದ್ದು, ಇದರ ರೂವಾರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರ ಶರ್ಮಿಳಾ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಕಾಂಗ್ರೆಸ್ ಜೊತೆ ತಮ್ಮ ಪಕ್ಷವನ್ನು ಮೈತ್ರಿ ಮಾಡಿಕೊಳ್ಳುವುದು ಅಥವಾ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಲಿದ್ದಾರಂತೆ. ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದಾದರೆ ತಮ್ಮ ಪಕ್ಷಕ್ಕೆ 7 ಪ್ರಮುಖ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನೂ ಇಡಲಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದ ಶರ್ಮಿಳಾ..!

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹೊಸ್ತಿಲಲ್ಲಿ ಅಂದರೆ ಮೇ 30 ರಂದು ಡಿ.ಕೆ.ಶಿವಕುಮಾರ್ ಅವರನ್ನು ಶರ್ಮಿಳಾ ಭೇಟಿ ಮಾಡಿದ್ದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಶರ್ಮಿಳಾ ಭೇಟಿಯಾಗಿ, ಮಾತುಕತೆ ನಡೆಸಿದ್ದರು.

ತೆಲಂಗಾಣ ಕಾಂಗ್ರೆಸ್​ನಲ್ಲಿ ವಿರೋಧ..!

ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ಎ.ರೇವಂತ್, ಶರ್ಮಿಳಾ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗೋದಾದ್ರೆ ಆಂಧ್ರಪ್ರದೇಶದಲ್ಲಿ ಆಗಲಿ ಎಂದಿದ್ದಾರೆ. ಎ.ರೇವಂತ್ ಜೊತೆಗೆ ಸಂಸದ ಕೋಮಟಿ ರೆಡ್ಡಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಶಿವಕುಮಾರ್ ಅವರು, ಕೋಮಟಿ ರೆಡ್ಡಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅವರ ಜೊತೆ ಸುಮಾರು 40 ನಿಮಿಷಗಳ ಕಾಲ ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ತೆಲಂಗಾಣ ರಾಜಕೀಯ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಆಗ ಶರ್ಮಿಳಾ ಪಕ್ಷಕ್ಕೆ ಬಂದರೆ ಒಳ್ಳೆಯದು. ಈ ಬಗ್ಗೆ ಹೈಕಮಾಂಡ್ ಸಕಾರಾತ್ಮಕವಾಗಿದೆ. ಆದರೆ ವಿರೋಧ ಹಿನ್ನೆಲೆಯಲ್ಲಿ, ಆಕ್ಷೇಪಗಳ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಕೋಮರೆಡ್ಡಿಗೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಯಾರು ಈ ಶರ್ಮಿಳಾ..?

ವೈಎಸ್​ ಶರ್ಮಿಳಾ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್​ ರಾಜಶೇಖರ್ ರೆಡ್ಡಿ ಅವರ ಪುತ್ರಿ. ಮಾತ್ರವಲ್ಲ, ಆಂಧ್ರದ ಹಾಲಿ ಸಿಎಂ ಜಗನ್ ಅವರ ಸಹೋದರಿ ಕೂಡ ಹೌದು. ಈ ವರ್ಷ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅವರು, 2021 ಜುಲೈನಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಿದ್ದಾರೆ. ಅದಕ್ಕೆ ‘ವೈಎಸ್​ಆರ್ ತೆಲಂಗಾಣ’ ಎಂದು ಹೆಸರು ಇಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಮುಖ್ಯಮಂತ್ರಿ ಕೆಸಿಆರ್ ಆಡಳಿತದ ವಿರುದ್ಧ ಸಿಡಿದೇಳುವ ಮೂಲಕ ಶರ್ಮಿಳಾ ಸುದ್ದಿ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣ ರಾಜಕೀಯದಲ್ಲಿ ಹೊಸ ಸಂಚಲನ.. ಪ್ರಭಾವಿ ನಾಯಕಿಯನ್ನು ಕಾಂಗ್ರೆಸ್​ಗೆ ತರಲು ಡಿ.ಕೆ.ಶಿವಕುಮಾರ್​​ ಆಪರೇಷನ್..!?

https://newsfirstlive.com/wp-content/uploads/2023/06/DK_SHIVAKUMAR-1-1.jpg

Load More