newsfirstkannada.com

ಪುನೀತ್​ ರಾಜ್​ ಕುಮಾರ್​ ಫೋಟೋ ಬೇಡ ಎಂದಿದ್ದಕ್ಕೆ ಗಲಾಟೆ; ರಾಜಿ ಪಂಚಾಯ್ತಿ ನೆಪದಲ್ಲಿ ಯುವ ಬ್ರಿಗೇಡ್​ ಕಾರ್ಯಕರ್ತನ ಕೊಲೆ

Share :

10-07-2023

    ಹನುಮ ಜಯಂತಿ ವೇಳೆ ಯುವ ಬ್ರಿಗೇಡ್​ ಕಾರ್ಯಕರ್ತನ ಕೊಲೆ

    ತಿರುವನಂತ ನರಸೀಪುರದಲ್ಲಿ ಕೊಲೆಯಾದ ಯುವ ಬ್ರಿಗೇಡ್​ ಕಾರ್ಯಕರ್ತ

    ಪತಿ ವೇಣುಗೊಪಾಲ್​ ಹತ್ಯೆಯ ನೈಜ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪತ್ನಿ

ಮೈಸೂರು: ನಿನ್ನೆ ತಿರುವನಂತ ನರಸೀಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ನಡೆದಿತ್ತು. ಹನುಮ ಜಯಂತಿ ವೇಳೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಘಟನೆ ಸಂಬಂಧಿಸಿ ಯುವ ಬ್ರಿಗೇಡ್​ ಕಾರ್ಯಕರ್ತ ವೇಣುಗೋಪಾಲ್​ ನಾಯಕ್​ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆದರೀಗ ಈ ಹತ್ಯೆ ನಡೆಯಲು ನಿಖರವಾದ ಕಾರಣವನ್ನು ವೇಣುಗೋಪಾಲ್​ ಪತ್ನಿಯೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪುನೀತ್ ರಾಜ್ ಕುಮಾರ್ ಫೋಟೋ

ವೇಣುಗೋಪಾಲ್ ನಾಯಕ್​ ಹತ್ಯೆಯ ಕುರಿತಾಗಿ ಮಾತನಾಡಿದ ಪತ್ನಿ ಪೂರ್ಣಿಮ, ಟಿ.ನರಸೀಪುರದ ಹನುಮ ಜಯಂತಿ ಕಾರ್ಯಕ್ರಮದ ವೇಳೆ ವ್ಯಾನ್ ನಲ್ಲಿ ಭಾರತ ಮಾತೇ ಪೋಟೋದ ಜೊತೆಗೆ  ಪುನೀತ್ ರಾಜ್ ಕುಮಾರ್ ಪೋಟೋ ಹಾಕಿದ್ದರು. ಈ ವೇಳೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ವೇಣುಗೋಪಾಲ್‌ ನಾಯಕ್​ ಇಲ್ಲಿ ಯಾವ ವ್ಯಕ್ತಿಯ ಪೋಟೋ ಹಾಕೋದು ಬೇಡ ಎಂದು ಅಲ್ಲಿದ್ದ ಪುನೀತ್ ರಾಜ್ ಕುಮಾರ್ ಫೋಟೋ ತೆಗೆಸಿದ್ದರು.

ಹತ್ಯೆಯಾದ ವೇಣುಗೋಪಾಲ್ ನಾಯಕ್
ಹತ್ಯೆಯಾದ ವೇಣುಗೋಪಾಲ್ ನಾಯಕ್

ರಾಜಿ ಪಂಚಾಯಿತಿ ನೆಪದಲ್ಲಿ ಕೊಲೆ

ಭಾರತ ಮಾತೆಯ ಫೋಟೋದ ಜೊತೆಗಿದ್ದ ಪುನೀತ್ ರಾಜ್ ಕುಮಾರ್ ಫೋಟೋ ತೆಗೆಸಿದ್ದ ವಿಚಾರವಾಗಿ ವೇಣು ಗೋಪಾಲ್ ಮತ್ತು ತಂಡದವರ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಗುಂಪಿನಲ್ಲೇ ಗಲಾಟೆಯಾಗಿದೆ. ನಂತರ ನಿನ್ನೆ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ವೇಣುಗೋಪಾಲನನ್ನು ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಳ್ಳಲಾಯಿತು. ಈ ವೇಳೆ ಆತನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುನೀತ್​ ರಾಜ್​ ಕುಮಾರ್​ ಫೋಟೋ ಬೇಡ ಎಂದಿದ್ದಕ್ಕೆ ಗಲಾಟೆ; ರಾಜಿ ಪಂಚಾಯ್ತಿ ನೆಪದಲ್ಲಿ ಯುವ ಬ್ರಿಗೇಡ್​ ಕಾರ್ಯಕರ್ತನ ಕೊಲೆ

https://newsfirstlive.com/wp-content/uploads/2023/07/Venugopal-nayak-1.jpg

Load More