Advertisment

ಪುನೀತ್‌ ನೆನಪು.. ಶ್ರೀದೇವಿ ಬೈರಪ್ಪ ಭಾವುಕ ಪೋಸ್ಟ್‌; ಯುವ ರಾಜ್‌ಕುಮಾರ್‌ ಬಗ್ಗೆ ಹೇಳಿದ್ದೇನು?

author-image
admin
Updated On
ಪುನೀತ್‌ ನೆನಪು.. ಶ್ರೀದೇವಿ ಬೈರಪ್ಪ ಭಾವುಕ ಪೋಸ್ಟ್‌; ಯುವ ರಾಜ್‌ಕುಮಾರ್‌ ಬಗ್ಗೆ ಹೇಳಿದ್ದೇನು?
Advertisment
  • ಪುನೀತ್ ರಾಜ್‌ಕುಮಾರ್ ಸ್ಮರಣೆಯ ಸಂದರ್ಭದಲ್ಲಿ ಶ್ರೀದೇವಿ ಭಾವುಕ ಪೋಸ್ಟ್‌
  • ಸ್ತ್ರೀದ್ವೇಷಿಯಾದವರ ಜೊತೆ ನನ್ನ ಜೀವನದ 10 ವರ್ಷದ ಸಮಯ ಕಳೆಯಿತು
  • ಕೈಮೇಲೆ ಅಪ್ಪು ಹೆಸರಿನ ಹಚ್ಚೆ ಹಾಕಿಸಿಕೊಂಡಿರುವ ಶ್ರೀದೇವಿ ಬೈರಪ್ಪ

ಕನ್ನಡಿಗರ ಕಣ್ಮಣಿ, ನಟ ಪುನೀತ್ ರಾಜ್‌ಕುಮಾರ್‌ ನಮ್ಮನ್ನಗಲಿ ಇಂದಿಗೆ ಮೂರು ವರ್ಷ. ನಾಡಿನಾದ್ಯಂತ ಅಪ್ಪು ಪುಣ್ಯ ಸ್ಮರಣೆಯನ್ನ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಪುನೀತ್ ಕುಮಾರ್ ಸಮಾಧಿಗೆ ಅವರ ಅಪಾರ ಅಭಿಮಾನಿಗಳ ದಂಡು ಹರಿದು ಬಂದಿದೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋ ಹಾಗೆ ಅಪ್ಪು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

Advertisment

ಅಪ್ಪು ಸ್ಮರಣೆಯ ಹಿನ್ನೆಲೆಯಲ್ಲಿ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ. ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಪುನೀತ್ ರಾಜ್‌ಕುಮಾರ್ ಹಳೆಯ ವಿಡಿಯೋ, ಫೋಟೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನಾನು ಬಾಲ್ಯದಿಂದಲೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದನ್ನ ಇಷ್ಟ ಪಡುತ್ತಿದೆ. ಆದರೆ ಕಳೆದ 3 ವರ್ಷಗಳಿಂದ ಅದು ಸಾಧ್ಯವಾಗಿಲ್ಲ. ಅಪ್ಪು ಅಣ್ಣ ನಿಮ್ಮ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ನೋಡುತ್ತಿದ್ದ ಆನಂದ, ಖುಷಿ ಈಗಲೂ ನೆನಪಾಗುತ್ತದೆ. ಆ ದಿನಗಳು ಮತ್ತೆ ಬರಲು ಸಾಧ್ಯವೇ ಇಲ್ಲ. ಮಿಸ್ ಯೂ ಅಪ್ಪು ಅಣ್ಣ.. ನಿಮ್ಮ ಅಭಿಮಾನಿ.

ಇದನ್ನೂ ಓದಿ: ನಾಳೆ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಾ? ಹೈಕೋರ್ಟ್‌ನಲ್ಲಿ ನಡೆದ ವಾದ, ಪ್ರತಿವಾದ ಏನು? 

ಶ್ರೀದೇವಿ ಬೈರಪ್ಪ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಕೈಮೇಲೆ ಅಪ್ಪು ಹೆಸರಿನ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಇದೇ ವೇಳೆ ಪುನೀತ್ ರಾಜ್‌ಕುಮಾರ್ ಸ್ವಭಾವ ಮತ್ತು ನಾಯಕತ್ವದ ಗುಣಗಳ ಬಗ್ಗೆಯೂ ಶ್ರೀದೇವಿ ಬೈರಪ್ಪ ಅವರು ಸ್ಪೆಷಲ್ ಪೋಸ್ಟ್ ಮಾಡಿದ್ದಾರೆ.

Advertisment

publive-image

ಶ್ರೀದೇವಿ ಬೈರಪ್ಪ ಹೇಳಿದ್ದೇನು?
ಅಕ್ಟೋಬರ್ 29, 2021ರಂದು ನಿಮ್ಮನ್ನು ಕಳೆದುಕೊಂಡ ಇಡೀ ಕರುನಾಡು ಸ್ತಬ್ಧವಾಗಿತ್ತು. 2 ಲಕ್ಷಕ್ಕೂ ಹೆಚ್ಚು ಜನ ನಿಮ್ಮ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ನಾನು ಅಷ್ಟೇ 48 ಗಂಟೆಗಳ ಕಾಲ ಆಘಾತಕಾರಿಯಾಗಿದ್ದೆ. ಮತ್ತೆ ಆ ದಿನ ಇವತ್ತು ಮರುಕಳಿಸಿದೆ.

ಪುನೀತ್ ರಾಜ್‌ ಕುಮಾರ್ ಸದಾ ಖುಷಿ, ಸಂತೋಷ, ನಗುವನ್ನೇ ಎಲ್ಲರಿಗೂ ಹಂಚುತ್ತಿದ್ದರು. ಸಣ್ಣ ಅಥವಾ ದೊಡ್ಡ ವಿಚಾರವಾಗಲಿ ನಿಮ್ಮ ಮಾರ್ಗದರ್ಶನ ಸರಿಯಾಗಿರುತ್ತಿತ್ತು. ನಿಮ್ಮ ಮಾತುಗಳು ಸ್ಫೂರ್ತಿದಾಯಕವಾಗಿದ್ದವು.
ಹೊಸ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳನ್ನು ಕಲಿಯಬೇಕು ಎಂದು ಪುನೀತ್ ರಾಜ್‌ಕುಮಾರ್‌ ಸದಾ ಹೇಳುತ್ತಿದ್ದರು. ಅಪ್ಪು ಅವರ ಈ ಮಾತು ಪಾಲಿಸಿದ್ದಕ್ಕೆ ಈ ವರ್ಷ ನನ್ನ ನಾನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ.
ಹುಡುಗಿಯರು ಮತ್ತು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರ್ಯವಾಗಿರಬೇಕು ಎಂದು ನೀವು ಯಾವಾಗಲು ಸಲಹೆ ನೀಡುತ್ತಿದ್ದಿರಿ. ಅದಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರ ಉದಾಹರಣೆ ಕೊಟ್ಟು ಆಕೆಯ ರೀತಿ ಇರಿ ಎಂದು ಹೇಳುತ್ತಿದ್ದೀರಿ. ಆಗ ನನಗೆ ಅರ್ಥವಾಗಿರಲಿಲ್ಲ ಆದರೆ ಈಗ ಅರ್ಥವಾಗಿದೆ.

ಇದನ್ನೂ ಓದಿ: ‘ಕರ್ನಾಟಕದ ರತ್ನ’ ಅಪ್ಪುಗೆ ಮೂರನೇ ವರ್ಷದ ಪುಣ್ಯ ಸ್ಮರಣೆ; ತಮ್ಮನನ್ನ ನೆನೆದು ಕಣ್ಣೀರಿಟ್ಟ ಹಿರಿಯ ಅಕ್ಕ.. ಹೇಳಿದ್ದೇನು? 

Advertisment

publive-image

ನಾನು ನನ್ನ ಜೀವನದಲ್ಲಿ ಕಷ್ಟ ಹಾಗೂ ದೊಡ್ಡ ಪಾಠಗಳನ್ನು ಕಲಿತಿದ್ದೇನೆ. ಸ್ತ್ರೀದ್ವೇಷಿಯಾದವರು ನನ್ನ ಜೀವನದ 10 ವರ್ಷದ ಸಮಯ, ವೃತ್ತಿ ಬದುಕು ಎಲ್ಲವನ್ನು ಕಿತ್ತುಕೊಂಡಿದ್ದಾರೆ. ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಲೇಬೇಕು. ಇದು ನನ್ನ ಪ್ರಾಮಿಸ್‌!

ಕಾಯಕವೇ ಕೈಲಾಸ, ಪ್ರತಿಯೊಬ್ಬರನ್ನು ಗೌರವಿಸಿ, ನಿಮ್ಮವರ ಮುಂದೆ ಅದನ್ನ ಪ್ರದರ್ಶಿಸಿ ಎಂದು ನೀವು ಕಲಿಸಿದ್ದೀರಿ. ನಿಮ್ಮ ಮಾತುಗಳ ಪ್ರೇರಣೆಯಿಂದ ನಾನು ಗ್ರಾಜುಯೇಷನ್ ಮುಗಿಸಿದ್ದೇನೆ. ಹಾರ್ವರ್ಡ್‌ ಡಿಗ್ರಿ ಅದಕ್ಕಿಂತಲೂ ವಿಶೇಷವಾಗಿದೆ.
- ಡಾ. ಪುನೀತ್ ರಾಜ್‌ಕುಮಾರ್ ನನ್ನ ಹೀರೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment